– ಹಿಮಾಚಲದಲ್ಲಿ ಪ್ರವಾಸಿಗರ ಪರದಾಟ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ನಿರಂತರ ಹಿಮಪಾತವಾಗುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಹಿಮಪಾತ (Jammu Kashmiur Snowfall) ಹೆಚ್ಚಾಗಿದ್ದು, ಶ್ರೀನಗರದ ವಿಮಾನ ನಿಲ್ದಾಣದಲ್ಲಿ ಹಿಮ ತೆರವು ಕಾರ್ಯ ನಡೆಯುತ್ತಿದೆ.
ಏಪ್ರನ್ ಮತ್ತು ಟ್ಯಾಕ್ಸಿ ವೇ ಗಳಲ್ಲಿನ ಹಿಮ ತೆರವು ಮಾಡಿ ವಿಮಾನಗಳ ಹಾರಾಟಕ್ಕೆ ಪರೀಕ್ಷೆಗಳು ನಡೆಯುತ್ತಿವೆ. ಶೀಘ್ರದಲ್ಲೇ ವಾಣಿಜ್ಯ ಬಳಕೆಗೆ ವಿಮಾನ ನಿಲ್ದಾಣ (Srinagar Airport) ಮುಕ್ತವಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಹುಬ್ಬಳ್ಳಿ | ಸಿಎಂ ಭಾಗಿಯಾಗಬೇಕಿದ್ದ ಕಾರ್ಯಕ್ರಮದಲ್ಲಿ ಅವಘಡ – ಕಟೌಟ್ ಮುರಿದು ಬಿದ್ದು ಮೂವರು ಗಂಭೀರ
VIDEO | Anantnag: Jammu–Srinagar National Highway (NH-44) remains closed for vehicular movement due to snowfall. A tourist from Patiala, Punjab, says, “I am from Patiala, Punjab. For the first four days, we really enjoyed ourselves here, but it has been two days that we are stuck… pic.twitter.com/MQ2ir4dVkI
— Press Trust of India (@PTI_News) January 24, 2026
600 ಪ್ರವಾಸಿಗರ ಪರದಾಟ
ಇನ್ನು ಹಿಮಾಚಲ ಪ್ರದೇಶದಲ್ಲೂ ಭಾರೀ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದು, 600 ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಮನಾಲಿಯಲ್ಲಿ, ತಾಪಮಾನವು ಶೂನ್ಯಕ್ಕಿಂತ ಕಡಿಮೆಯಾಗಿದ್ದು, ಅನೇಕರು ಆಹಾರ, ನೀರು, ಕಂಬಳಿ ಇಲ್ಲದೆ ತಮ್ಮ ವಾಹನಗಳ ಒಳಗೆ ಇಡೀ ರಾತ್ರಿ ಕಳೆದಿದ್ದಾರೆ. ಇದನ್ನೂ ಓದಿ: ರೆಡ್ಡಿ, ರಾಮುಲುಗೆ ಸೇರಿದ ಮಾಡೆಲ್ ಹೌಸ್‌ಗೆ ಬೆಂಕಿ – ಇಬ್ಬರು ಅಪ್ರಾಪ್ತರು ಸೇರಿ 8 ಮಂದಿ ವಶಕ್ಕೆ
ಹಿಮದಿಂದ ರಸ್ತೆಗಳು ಸಂಪರ್ಕ ಕಡಿತಗೊಂಡಿವೆ. ಬಸ್ಸುಗಳು, ಟ್ಯಾಕ್ಸಿಗಳು ಮತ್ತು ಪ್ರವಾಸಿ ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿ ಪರದಾಡುತ್ತಿದ್ದಾರೆ.

