ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿನಿಯರ ಬಟ್ಟೆಯ ತೋಳನ್ನು ಕತ್ತರಿಸಿದ ಪೊಲೀಸ್ರು

Public TV
1 Min Read
Rajasthan

ಜೈಪುರ: ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿನಿಯರ ಬಟ್ಟೆಯ ತೋಳುಗಳನ್ನು ಪೊಲೀಸ್ ಸಿಬ್ಬಂದಿ ಕತ್ತರಿಯಿಂದ ಕತ್ತರಿಸಿ ಹಾಕಿರುವ ಘಟನೆ ರಾಜಸ್ಥಾನದ ಭರತ್‍ಪುರದಲ್ಲಿ ನಡೆದಿದೆ.

ವೀಡಿಯೋದಲ್ಲಿ, ಪೂರ್ಣ ತೋಳಿನ ಬಟ್ಟೆ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯರ ಬಟ್ಟೆಯ ತೋಳನ್ನು ಕತ್ತರಿ ಬಳಸಿ ಮಹಿಳಾ ಪೊಲೀಸ್‍ಯೊಬ್ಬರು ಕಟ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಅನೇಕ ಹುಡುಗಿಯರು ತಮ್ಮ ಬಟ್ಟೆಯನ್ನು ಕತ್ತರಿಸುವುದನ್ನು ನೋಡಿ ಅಳಲು ಪ್ರಾರಂಭಿಸಿದರು. ಇದಲ್ಲದೆ ಪರೀಕ್ಷೆಗೆ ಹಾಜರಾಗಲು ಬಂದ ವಿವಾಹಿತ ಮಹಿಳೆಯರಿಗೆ ಅವರು ಧರಿಸಿದ್ದ ಚೈನ್ ಮತ್ತು ಇತರ ಆಭರಣಗಳನ್ನು ತೆಗೆಯುವಂತೆ ಪೊಲೀಸರು ಸೂಚಿಸಿದ್ದಾರೆ. ಇದನ್ನೂ ಓದಿ: ಕನ್ನಡದ ‘ಲಾಕ್ ಡೌನ್’ ಸಿನಿಮಾ ನಟಿ ಶಹಾನಾ ಅನುಮಾನಾಸ್ಪದ ಸಾವು – ಪತಿ ವಶಕ್ಕೆ

Rajasthan 1

ಪರೀಕ್ಷೆಗೆ ಒಂದು ನಿಮಿಷ ತಡವಾಗಿ ಬಂದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದದ ಒಳಗ್ರೆ ಪ್ರವೇಶಿಸಲು ಅನುಮತಿ ನೀಡಲಿಲ್ಲ. ಇದೇ ವೇಳೆ ಬಾಲಕಿಯೊಬ್ಬಳು ಎಷ್ಟೋ ದಿನಗಳಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ ಎಂದು ಹೇಳುತ್ತಾ ಅಳಲು ತೋಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಪರೀಕ್ಷೆಗೆ ಹಾಜರಾಗಲು ಬಿಡದ ಕಾರಣ ಕೊನೆಗೆ ನಿರಾಸೆಯಿಂದ ಮರಳಬೇಕಾಯಿತು.

ಈ ಕುರಿತಂತೆ ಮಾತನಾಡಿದ ಎಎಸ್‍ಪಿ ಅನಿಲ್ ಮೀನಾ ಅವರು, ಭರತ್‍ಪುರ ಜಿಲ್ಲೆಯಲ್ಲಿ 3,000 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ಬಂದಿದ್ದಾರೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಭದ್ರತೆಯಿದ್ದು, ಪರೀಕ್ಷೆಯನ್ನು ಶಾಂತಿಯುತ ವಾತಾವರಣದಲ್ಲಿ ನಡೆಸಲಾಗುತ್ತಿದೆ. ಇದನ್ನೂ ಓದಿ: ಗಂಡಸ್ತನ ವಿಚಾರಕ್ಕೆ ನಡೆದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ

ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಈ ಮೊದಲೇ ಅರ್ಧ ತೋಳಿನ ಟೀ ಶರ್ಟ್, ಶರ್ಟ್, ಸೂಟ್, ಸೀರೆ ಧರಿಸಿ ಬರಬೇಕು ಮತ್ತು ಕೂದಲಿಗೆ ಸರಳವಾದ ರಬ್ಬರ್ ಬ್ಯಾಂಡ್ ಬಳಸಬೇಕು. ಅಲ್ಲದೇ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್‍ಗಳನ್ನು ಪರೀಕ್ಷಾ ಕೇಂದ್ರದೊಳಗೆ ತೆಗೆದುಕೊಂಡು ಹೋಗಲು ಅನುಮತಿ ಇಲ್ಲ. ಸರ, ಉಂಗುರ, ಕಿವಿಯೋಲೆಗಳನ್ನು ಧರಿಸದಂತೆ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿತ್ತು ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *