BollywoodCinemaLatestMain PostSouth cinema

ದುಬಾರಿ ಸೀರೆಯಲ್ಲಿ ಮಿಂಚಿದ `ಬಾಹುಬಲಿ’ ನಟಿ ರಮ್ಯಾ ಕೃಷ್ಣನ್

ಹುಭಾಷಾ ನಟಿ ರಮ್ಯಾ ಕೃಷ್ಣನ್ ( Ramya Krishnan) ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿ ಇರುತ್ತಿದ್ದ ಈ ನಟಿ ಇದೀಗ ತಮ್ಮ ದುಬಾರಿ ಸೀರೆ ವಿಷ್ಯವಾಗಿ ಟಾಲಿವುಡ್‌ನಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ.

`ಬಾಹುಬಲಿ’ (Bahubali) ಶಿವಗಾಮಿ ಎಂದೇ ರಮ್ಯಾ ಕೃಷ್ಣನ್ ಗುರುತಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ರಮ್ಯಾ ಕೃಷ್ಣನ್ ನಟನೆಯ `ಲೈಗರ್’ (Liger) ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತಿತ್ತು. ವಿಜಯ್ ದೇವರಕೊಂಡ ತಾಯಿಯಾಗಿ ಪವರ್‌ಫುಲ್ ಪಾತ್ರದಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು. ಇನ್ನು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಈ ನಟಿ ಇತ್ತೀಚೆಗೆ ಖಾಸಗಿ ಶೋವೊಂದರಲ್ಲಿ ದುಬಾರಿ ಸೀರೆಯುಟ್ಟು ಬಂದಿದ್ದಾರೆ. ಅವರು ಧರಿಸಿದ್ದ ಗ್ರ್ಯಾಂಡ್ ಸೀರೆ ಸದ್ಯ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.‌ ಇದನ್ನೂ ಓದಿ:ನಟ ರಮೇಶ್ ಅರವಿಂದ್‌ಗೆ ಗೌರವ ಡಾಕ್ಟರೇಟ್

ಕಿರುತೆರೆ ರಿಯಾಲಿಟಿ ಶೋವೊಂದರಲ್ಲಿ ರಮ್ಯಾ ಕೃಷ್ಣನ್ ದುಬಾರಿ ಸೀರೆ ಧರಿಸಿದ್ದರು. ಪಿಂಕ್ ಕಲರ್ ವೆಲ್ವೆಟ್ ಸೀರೆಗೆ ಗೋಲ್ಡನ್ ಥ್ರೆಡ್ ಡಿಸೈನ್ ಮಾಡಿರುವ ಸೀರೆಯಲ್ಲಿ ನಟಿ ಮಿಂಚಿದ್ದರು. ಇನ್ನು 2,00,000 ರೂಪಾಯಿ ಬೆಲೆ ಬಾಳುವ ದುಬಾರಿ ಸೀರೆಯಲ್ಲಿ ನಟಿ ಶೋನಲ್ಲಿ ಎಂಟ್ರಿ ಕೊಟ್ಟಿದ್ದಾರೆ. 51ರ ವಯಸ್ಸಿನಲ್ಲೂ ಗ್ಲಾಮರಸ್‌ ಲುಕ್‌ನಲ್ಲಿ ಮಿಂಚಿರುವ ರಮ್ಯಾ ಕೃಷ್ಣನ್ ಅವರನ್ನ ನೋಡಿ, ಫ್ಯಾನ್ಸ್ ಫಿದಾ ಆಗಿದ್ದಾರೆ.

Live Tv

Leave a Reply

Your email address will not be published.

Back to top button