ಮದುವೆ ಸಂಭ್ರಮದಲ್ಲಿ `ಸೀತಾ ರಾಮಂ’ ನಟಿ ಮೃಣಾಲ್ ಠಾಕೂರ್

Public TV
1 Min Read
mrunal thakur

`ಸೀತಾ ರಾಮಂ’ (Sita Ramam) ಚಿತ್ರದ ಸಕ್ಸಸ್ ಖುಷಿಯಲ್ಲಿರುವ ಮೃಣಾಲ್ ಠಾಕೂರ್ (Mrunal Thakur) ಈಗ ಮದುವೆಯ ಸಂಭ್ರಮದಲ್ಲಿದ್ದಾರೆ. ಅರಿಶಿನ ಶಾಸ್ತ್ರದಲ್ಲಿ ನಟಿ ಮಿಂಚಿದ್ದಾರೆ. ಸದ್ಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 

View this post on Instagram

 

A post shared by Mrunal Thakur (@mrunalthakur)

ಮರಾಠಿ ಚಿತ್ರ ಮತ್ತು ಹಿಂದಿ ಸೀರಿಯಲ್ ಮತ್ತು ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟಿ ಮೃಣಾಲ್ ಠಾಕೂರ್ ಈಗ `ಸೀತಾ ರಾಮಂ’ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ. ನಟಿಗೆ ಭರ್ಜರಿ ಆಫರ್ಸ್‌ ಇದೀಗ ಅರಸಿ ಬರುತ್ತಿದೆ. ಸದ್ಯ ನಟಿ ಮೃಣಾಲ್ ಸ್ನೇಹಿತೆಯ ಮದುವೆಯ ಸಂಭ್ರಮದಲ್ಲಿದ್ದಾರೆ. ಸ್ನೇಹಿತೆ ಅನನ್ಯಾ ಮದುವೆಯಲ್ಲಿ ನಟಿ ಕುಣಿದು ಕುಪ್ಪಳಿದ್ದಾರೆ.

 

View this post on Instagram

 

A post shared by Mrunal Thakur (@mrunalthakur)

ಅರಿಶಿನ, ಮೆಹೆಂದಿ, ಪ್ರತಿಯೊಂದು ಶಾಸ್ತçದಲ್ಲೂ ನಟಿ ಏಂಜಾಯ್ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಸಂಭ್ರಮದ ವೀಡಿಯೋ ಮತ್ತು ಫೋಟೋಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ಚಂದನವನದ ‘ಐಶೂ’ ಅಮೂಲ್ಯ ಬರ್ತ್‌ಡೇ: ಮತ್ತೆ ಸಿನಿಮಾ ಮಾಡುವಂತೆ ಫ್ಯಾನ್ಸ್ ಮನವಿ

 

View this post on Instagram

 

A post shared by Mrunal Thakur (@mrunalthakur)

ಇತ್ತೀಚೆಗಷ್ಟೇ `ಸೀತಾ ರಾಮಂ’ ದುಲ್ಕರ್ ಸಲ್ಮಾನ್‌ಗೆ ನಾಯಕಿಯಾಗಿ ಮನೋಜ್ಞವಾಗಿ ನಟಿಸಿ ಮೃಣಾಲ್ ಸೈ ಎನಿಸಿಕೊಂಡಿದ್ದಾರೆ. ಸೀತಾ ರಾಮನ ಕಥೆಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದರು. ಈ ಚಿತ್ರದ ಸಕ್ಸಸ್ ನಂತರ `ಎನ್‌ಟಿಆರ್ 30′ (Ntr 30) ಚಿತ್ರಕ್ಕೆ ಎನ್‌ಟಿಆರ್‌ಗೆ ನಾಯಕಿಯಾಗುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ದಕ್ಷಿಣದ ಸಾಕಷ್ಟು ಸಿನಿಮಾಗೆ ನಟಿಸಲು ಭರ್ಜರಿ ಅವಕಾಶವನ್ನ ನಟಿ ಗಿಟ್ಟಿಸಿಕೊಳ್ಳುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article