ಗಾಂಧಿನಗರ: ಕಿಡ್ನಿ ದಾನ ಮಾಡುವ ಮೂಲಕ ಗುಜರಾತಿನ ಗೊಂಡಾಲ್‍ನಲ್ಲಿ ಸಹೋದರಿಯೊಬ್ಬಳು ತನ್ನ ತಮ್ಮನ ಪ್ರಾಣ ಉಳಿಸಿದ್ದಾಳೆ.
ಮನ್ಸುಖ್ ಭಾಯ್ ಕಿಡ್ನಿ ಫೆಲ್ಯೂರ್ ಆಗಿದ್ದು, 21 ಬಾರಿ ಡಯಾಲಿಸಿಸ್ ಆಗಿತ್ತು. ಆದರೆ ಇದರಿಂದ ಯಾವುದೇ ಉಪಯೋಗವಾಗಲಿಲ್ಲ. ಈ ವೇಳೆ ಮನ್ಸುಖ್ ಅವರ ಅಕ್ಕ ಗೀತಾ ಕಿಡ್ನಿ ದಾನ ಮಾಡುವ ಮೂಲಕ ತನ್ನ ತಮ್ಮನ ಜೀವ ಉಳಿಸಿದ್ದಾರೆ. ಸದ್ಯ ಅಕ್ಕ-ತಮ್ಮ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಈ ಬಗ್ಗೆ ವಕೀಲ ದಿನೇಶ್ ಭಾಯ್ ಪ್ರತಿಕ್ರಿಯಿಸಿ, ನಮ್ಮ ಇಬ್ಬರು ಸಹೋದರರ ಕುಟುಂಬದಲ್ಲಿ ಮನ್ಸುಖ್ ನನಗಿಂತ ಚಿಕ್ಕವನು. ಇಡೀ ಕುಟುಂಬ ಜೊತೆಯಲ್ಲಿ ವಾಸಿಸುತ್ತೇವೆ. ಅಲ್ಲದೆ ನಾವೆಲ್ಲರೂ ಸೇರಿ ಒಟ್ಟಿಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಹೀಗಿರುವಾಗ ಮನ್ಸುಖ್ ಕಿಡ್ನಿ ಫೇಲ್ ಆಗಿದ್ದು, ಈ ವೇಳೆ ಆತನ ಸಹೋದರಿ ಗೀತಾ ಕಿಡ್ನಿ ಅಲ್ಲದೆ 1,001 ರೂ. ದಾನವಾಗಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
Advertisement
ತಮ್ಮನಿಗಾಗಿ ಕಿಡ್ನಿ ದಾನ ಮಾಡಿದ ಸಹೋದರಿಗೆ ಸಂಬಂಧಿಕರು ಸೇರಿದಂತೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲದೆ ಆಸ್ತಿಗಾಗಿ ಅಣ್ಣ- ತಂಗಿಯರು, ಅಕ್ಕ- ತಮ್ಮಂದಿರು ಜಗಳವಾಡುವ ಈ ಕಾಲದಲ್ಲಿ ಕಿಡ್ನಿ ದಾನ ಮಾಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ ಎಂದು ಗೀತಾರನ್ನು ಹೊಗಳುತ್ತಿದ್ದಾರೆ.