ಜೋಶಿಮಠದ ಬಳಿಕ ಕರ್ಣಪ್ರಯಾಗದಲ್ಲಿ ಭೂಮಿ, ಮನೆಯ ಗೋಡೆ ಬಿರುಕು – ಮುಳುಗಡೆ ಭೀತಿ, ಆತಂಕದಲ್ಲಿ ಜನ

Public TV
2 Min Read
Joshimath And Karnaprayag

ಡೆಹ್ರಾಡೂನ್: ಉತ್ತರಾಖಂಡದ (Uttarakhand) ಬೆಟ್ಟ ಪ್ರದೇಶಗಳ ಭೂಮಿ ಮುಳುಗಡೆ ಭೀತಿ ಎದುರಾಗಿದೆ. ಜೋಶಿಮಠದಲ್ಲಿ (Joshimath) ಕೆಲದಿನಗಳಿಂದ ಅಲ್ಲಲ್ಲಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಈ ನಡುವೆ ಕರ್ಣಪ್ರಯಾಗದಲ್ಲೂ (Karnaprayag) ಇದೇ ರೀತಿಯ ಪ್ರಕರಣಗಳು ವರದಿಯಾಗಿದ್ದು ಜನ ಭಯಭೀತರಾಗಿದ್ದಾರೆ.

Joshimath And Karnaprayag 1

ಕರ್ಣಪ್ರಯಾಗದಲ್ಲಿ 50ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಭೂಮಿ ಮುಳುಗಡೆಯ ಭೀತಿ ಕಾಡುತ್ತಿದೆ. ಶನಿವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಭೇಟಿ ನೀಡಿ ಪರಿಸ್ಥಿಯ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ. ಈಗಾಗಲೇ ಕುಸಿತದ ಭೀತಿಯಲ್ಲಿರುವ 600ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

Pushkar Singh Dhami

ಗರ್ವಾಲ್ ಕಮಿಷನರ್ ಸುಶೀಲ್ ಕುಮಾರ್ ಮತ್ತು ವಿಪತ್ತು ನಿರ್ವಹಣಾ ಕಾರ್ಯದರ್ಶಿ ರಂಜಿತ್ ಕುಮಾರ್ ಸಿನ್ಹಾ ಸೇರಿದಂತೆ ತಜ್ಞ ಭೂವಿಜ್ಞಾನಿಗಳ ತಂಡವು ಜೋಶಿಮಠದಲ್ಲಿ ಭೂ ಮುಳುಗಡೆ ಪೀಡಿತ ಪ್ರದೇಶಗಳ ಆಳವಾದ ಸಮೀಕ್ಷೆಯನ್ನು ನಡೆಸಿದೆ. ಭೂಮಿಯಲ್ಲಿ ಬಿರುಕು ಕಣಿಸಿಕೊಳ್ಳಲು ಕಾರಣ ಏನು ಎಂಬ ಕುರಿತು ಪತ್ತೆ ಕಾರ್ಯ ನಡೆಯುತ್ತಿದೆ. ಜೋಶಿಮಠದಲ್ಲಿ ಎನ್‍ಡಿಆರ್‌ಎಫ್‌ ತಂಡವನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ. ಬಿರುಕು ಕಾಣಿಸಿಕೊಂಡ ರಸ್ತೆ, ಮನೆ, ಕಟ್ಟಡ ಸೇರಿದಂತೆ ಎಲ್ಲಾಕಡೆ ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಇದನ್ನೂ ಓದಿ: 13 ವರ್ಷಗಳ ಬಳಿಕ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಕರ್ನಾಟಕದ ಟ್ಯಾಬ್ಲೋಗಿಲ್ಲ ಅವಕಾಶ

Joshimath And Karnaprayag 2

ಈ ವೇಳೆ ಜೋಶಿಮಠದ ಮನೋಹರ್ ಬಾಗ್, ಸಿಂಗ್ಧರ್, ಜೆಪಿ, ಮಾರ್ವಾರಿ, ಸುನೀಲ್ ಗಾಂವ್, ವಿಷ್ಣು ಪ್ರಯಾಗ, ರವಿಗ್ರಾಮ, ಗಾಂಧಿನಗರ ಮೊದಲಾದ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗಿದೆ. ಜೊತೆಗೆ ತಪೋವನಕ್ಕೆ ಭೇಟಿ ನೀಡಿ ಎನ್‍ಟಿಪಿಸಿ ಸುರಂಗದ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಲಾಗಿದೆ. ಸುಮಾರು 50,000 ಜನಸಂಖ್ಯೆಯೊಂದಿಗೆ, ಕರ್ಣಪ್ರಯಾಗವು ಸಮುದ್ರ ಮಟ್ಟದಿಂದ 860 ಮೀಟರ್ ಎತ್ತರದಲ್ಲಿದೆ. ಜೋಶಿಮಠವು 1,890 ಮೀಟರ್ ಎತ್ತರದಲ್ಲಿದೆ. ಕರ್ಣಪ್ರಯಾಗವು ಜೋಶಿಮಠದಿಂದ 80 ಕಿ.ಮೀ ದೂರದಲ್ಲಿದೆ ಆದರೂ ಈ ಎರಡೂ ಪ್ರದೇಶಗಳಲ್ಲಿ ಇದೀಗ ಭೂಮಿ ಬಿರುಕು ಬಿಡುತ್ತಿರುವುದು ಕಂಡುಬರುತ್ತಿದೆ. ಇದನ್ನೂ ಓದಿ: ಜೋಶಿಮಠದಲ್ಲಿ ಬಿರುಕು ಬಿಟ್ಟ 500ಕ್ಕೂ ಹೆಚ್ಚು ಮನೆಗಳು – ನಗರ ಮುಳುಗುವ ಆತಂಕದಲ್ಲಿ ಜನರು

Joshimath And Karnaprayag 3

ಬಹುಗುಣನಗರ, ಸಿಎಂಪಿ ಬ್ಯಾಂಡ್ ಮತ್ತು ಕರ್ಣಪ್ರಯಾಗದ ಸಬ್ಜಿ ಮಂಡಿಯ ಮೇಲ್ಭಾಗದಲ್ಲಿ ವಾಸಿಸುವ 50ಕ್ಕೂ ಹೆಚ್ಚು ಕುಟುಂಬಗಳು ಆತಂಕದಲ್ಲಿವೆ. ಇಲ್ಲಿ ಮನೆಗಳ ಗೋಡೆ, ಅಂಗಳದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಮನೆಗಳ ಮೇಲ್ಛಾವಣಿ ಕುಸಿತದ ಭೀತಿ ಹುಟ್ಟಿಸಿದೆ. 25 ಮನೆಗಳು ಬಿರುಕು ಬಿಟ್ಟಿವೆ. ಜೋಶಿಮಠದಲ್ಲಿ ಭೂ ಕುಸಿತದ ಕುರಿತು ಅಧ್ಯಯನ ನಡೆಸಲು ಕೇಂದ್ರವು ಸಮಿತಿಯನ್ನು ರಚಿಸಿದೆ. ಸಮಿತಿಯು ಪರಿಸರ ಮತ್ತು ಅರಣ್ಯ ಸಚಿವಾಲಯ, ಕೇಂದ್ರ ಜಲ ಆಯೋಗ, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ಪ್ರತಿನಿಧಿಗಳನ್ನು ಒಳಗೊಂಡಿದ್ದು ಸರ್ವೆ ಕಾರ್ಯ ಆರಂಭಿಸಿದ್ದಾರೆ.

ಬಿರುಕು ಯಾಕೆ?
ಬಿರುಕು ಬಿಡುವುದಕ್ಕೆ ಕಾರಣ ಭೂಕುಸಿತ. ಭೂಮಿ ಅಡಿಯಲ್ಲಿರುವ ಬಂಡೆಯಿಂದ ಅಂತರ್ಜಲ ಈಗ ಹರಿದು ಬರುತ್ತಿದೆ. ಗಣಿಗಾರಿಕೆ ಇತ್ಯಾದಿ ಚಟುವಟಿಕೆಯಿಂದ ಅಡಿಯಿಂದ ಅಂತರ್ಜಲ ಅಥವಾ ಇಂಧನದಂತಹ ದ್ರವಗಳನ್ನು ಪಂಪ್ ಮಾಡುವುದರಿಂದ ಶಿಲೆಗಳು ಅದುರುತ್ತಿವೆ. ಇದರಿಂದಾಗಿ ಮಣ್ಣು ಸವೆಯುತ್ತಿದ್ದು ಭೂಮಿ ಬಿರುಕು ಬಿಡುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *