ಖ್ಯಾತ ಗಾಯಕಿ ಉಷಾ ಉತ್ತುಪ್ ಪತಿ ಹೃದಯಾಘಾತದಿಂದ ನಿಧನ

Public TV
1 Min Read
usha uthup

ಹುಭಾಷಾ ಗಾಯಕಿ ಉಷಾ ಉತ್ತುಪ್ (Usha Uthup) ಅವರು ಪತಿ ಜಾನಿ ಚಾಕೋ ಉತ್ತುಪ್ ಜು.8ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. 78ನೇ ವಯಸ್ಸಿಗೆ ಇಹಲೋಕ ತ್ಯಜಿಸಿರುವ ಜಾನಿ ಚಾಕೋಗೆ (Jani Chacko) ಕುಟುಂಬಸ್ಥರು ಆಪ್ತರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:‘ಭೈರವನ ಕೊನೆ ಪಾಠ’ ಹೇಳೋಕೆ ಹೊಸ ಗೆಟಪ್‌ನಲ್ಲಿ ಬಂದ ಶಿವಣ್ಣ

usha uthup 1

ಜು.8ರಂದು ತಮ್ಮ ಕೋಲ್ಕತ್ತಾದ ನಿವಾಸದಲ್ಲಿ ಟಿವಿ ನೋಡ್ತಿದ್ದ ವೇಳೆ ಹೃದಯಾಘಾತವಾಗಿದೆ. ಆ ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಉಷಾ ಉತ್ತುಪ್ ಪತಿ ನಿಧನರಾಗಿದ್ದಾರೆ. ಇಂದು (ಜು.9) ಜಾನಿ ಚಾಕೋ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಬಹುಭಾಷಾ ಗಾಯಕಿಯಾಗಿ ಹೆಸರು ಮಾಡಿರುವ ಉಷಾ ಉತ್ತುಪ್ ಅವರು ಕನ್ನಡದ ‘ಸ್ವಾಮಿ’ ಚಿತ್ರದ ರಂಬೆ ನಿನಗೆ, ಇತ್ತೀಚೆಗೆ ತೆರೆಕಂಡ ಅಭಿಷೇಕ್ ಅಂಬರೀಶ್, ರಚಿತಾರಾಮ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿದ್ದರು.

Share This Article