ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮತ್ತು ಬಾಲಿವುಡ್ ನ ಹೆಸರಾಂತ ಹಿರಿಯ ಗಾಯಕಿ ಆಶಾ ಭೋಸ್ಲೆ (Asha Bhosle) ಭೇಟಿಯಾಗಿದ್ದಾರೆ. ಈ ಸಮಯದಲ್ಲಿ ಆಶಾ ಭೋಸ್ಲೆ ಅವರು ಹಿಂದಿಯ ಅತ್ಯಂತ ಜನಪ್ರಿಯ ಗೀತೆ ಅಭಿ ನಾ ಜಾವೋ ಚೋಡ್ಕರ್ ಗೀತೆ ಹಾಡಿದ್ದಾರೆ. 1961ರಲ್ಲಿ ಈ ಹಾಡು ಬಹುಬೇಡಿಕೆಯಾಗಿತ್ತು ಎನ್ನುವುದು ವಿಶೇಷ.
ಆಶಾ ಭೋಸ್ಲೆ ಅವರ ಅತ್ಯುತ್ತಮ ಫೋಟೋಗಳ ಸರಮಾಲೆಯನ್ನು ಅಮಿತ್ ಶಾ ಅವರು ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಶಾ ಮತ್ತು ಅಮಿತ್ ಶಾ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಂಭ್ರಮದ ಕ್ಷಣವನ್ನೂ ಅಮಿತ್ ಶಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಂಗೀತ, ಪರಂಪರೆ, ಸಂಸ್ಕೃತಿ ಹೀಗೆ ಹಲವಾರು ವಿಚಾರಗಳನ್ನು ಆಶಾ ಭೋಸ್ಲೆ ಅವರ ಜೊತೆ ಚರ್ಚಿಸಿದೆ. ಅದೊಂದು ಅವಿಸ್ಮರಣೀಯ ಕ್ಷಣವಾಗಿತ್ತು. ಆಶಾ ಅವರ ಜೀವನ ಮತ್ತು ಸಂಗೀತ ಪರಂಪರೆ ಎಲ್ಲರಿಗೂ ಸ್ಪೂರ್ತಿ ಆಗುವಂಥದ್ದು ಎಂದು ಅವರು ಬರೆದುಕೊಂಡಿದ್ದಾರೆ.