ಅಯ್ಯೋ ರಾಗಿ ರೊಟ್ಟಿ ಮಾಡೋಕೆ ನಮಗೆ ಗೊತ್ತಿಲ್ವಾ? ಅದನ್ನ ನೀವೇ ಹೇಳಿಕೊಡ್ಬೇಕಾ ಅಂತೆಲ್ಲಾ ಕೇಳ್ಬೇಡಿ. ಸಾಮಾನ್ಯವಾಗಿ ಕರ್ನಾಟಕದ ಪ್ರತಿ ಮನೆಗಳಲ್ಲೂ ರಾಗಿ ರೊಟ್ಟಿ ಮಾಡೇ ಮಾಡಿರ್ತಾರೆ. ಆದ್ರೆ ರೊಟ್ಟಿ ಮಾಡೋ ವಿಧಾನಗಳು ಮಾತ್ರ ಬೇರೆ. ನಾವು ಇಲ್ಲಿ ಹೇಳಿರೋದು ಸಖತ್ ಸುಲಭವಾದ ವಿಧಾನ.
Advertisement
ಬೇಕಾಗುವ ಸಾಮಗ್ರಿಗಳು:
1. ರಾಗಿ ಹಿಟ್ಟು- 1 ಕಪ್
2. ಈರುಳ್ಳಿ- 1 ಮಧ್ಯಮ ಗಾತ್ರದ್ದು
3. ಹಸಿಮೆಣಸಿನಕಾಯಿ- 1
4. ಕರಿಬೇವಿನಸೊಪ್ಪು- 5 ಎಸಳು
5. ಉಪ್ಪು- ರುಚಿಗೆ ತಕ್ಕಷ್ಟು
6. ನೀರು- ಅಗತ್ಯಕ್ಕೆ ತಕ್ಕಷ್ಟು
7. ಎಣ್ಣೆ- 4 ಚಮಚ
Advertisement
ಮಾಡುವ ವಿಧಾನ:
Advertisement
* ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವಿನಸೊಪ್ಪನ್ನು ಸಣ್ಣಗೆ ಕಟ್ ಮಾಡಿಕೊಳ್ಳಿ.
* ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು, ಕಟ್ ಮಾಡಿದ ಈರುಳ್ಳಿ, ಹಸಿಮೆಣಸಿಕನಾಯಿ, ಕರಿಬೇವಿನಸೊಪ್ಪು, ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
* ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಹಿಟ್ಟು ಕಲಸಿಕೊಳ್ಳಿ.
Advertisement
* ಸ್ವಲ್ಪ ಹಿಟ್ಟು ತೆಗೆದುಕೊಂಡು ಉಂಡೆ ಮಾಡಿಕೊಳ್ಳಿ
* ಮಣೆಯ ಮೇಲೆ ಒಂದು ಪ್ಲಾಸ್ಟಿಕ್ ಕವರ್ ಹಾಕಿ ಅದರ ಮೇಲೆ ಸ್ವಲ್ಪ ಎಣ್ಣೆ ಸವರಿ ಹಿಟ್ಟನ್ನು ನಿಧಾನವಾಗಿ ತಟ್ಟಿಕೊಳ್ಳಿ.
* ಒಲೆ ಮೇಲೆ ಪ್ಯಾನ್ ಇಟ್ಟು, ಅದು ಬಿಸಿಯಾದ ನಂತರ ಸ್ವಲ್ಪ ಎಣ್ಣೆ ಹಾಕಿ.
* ತಟ್ಟಿಕೊಂಡ ರೊಟ್ಟಿಯನ್ನ ನಿಧಾನವಾಗಿ ತವಾ ಮೇಲೆ ಹಾಕಿ.
* ಒಂದು ಬದಿ ಬೆಂದ ನಂತರ ಅದನ್ನ ತಿರುಗಿಸಿ, ಎಣ್ಣೆ ಹಾಕಿ ಎರಡೂ ಕಡೆ ಕೆಂಪಾಗುವಂತೆ ಬೇಯಿಸಿ.
* ಹಿಟ್ಟು ಸಾಧ್ಯವಾದಷ್ಟು ತೆಳುವಾಗಿರಬೇಕು. ತುಂಬಾ ಗಟ್ಟಿಯಾದ್ರೆ ರೊಟ್ಟಿ ಚೂರಾಗುತ್ತದೆ.