-ಆಫರ್ ನಲ್ಲಿ ಪುಟಾಣಿ ಟ್ವಿಸ್ಟ್
ಮೈಸೂರು: ವರ ಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯ ಸರ್ಕಾರ 4,500 ರೂಪಾಯಿಗೆ ರೇಷ್ಮೆ ಸೀರೆ ಕೊಡುವ ಯೋಜನೆ ಪ್ರಕಟಿಸಿತ್ತು. ಆದರೆ ಹಬ್ಬದ ವೇಳೆ ಕೊಡಲು ಸಾಧ್ಯವಾಗಲಿಲ್ಲ. ಆದರೆ ಈಗ ನೂತನ ಆಫರ್ ಮೂಲಕ ಸೀರೆಗಳನ್ನು ನೀಡಲಾಗುತ್ತಿದೆ.
ಲಾಟರಿ ಮೂಲಕ ಗ್ರಾಹಕರ ಆಯ್ಕೆ:
ರಿಯಾಯಿತಿ ದರದಲ್ಲಿ ಇಂದು ರೇಷ್ಮೆ ಸೀರೆ ಮಾರಾಟ ಮಾಡಲಾಗುತ್ತಿದ್ದು, 4,500 ರೂಪಾಯಿಗೆ ರೇಷ್ಮೆ ಸೀರೆ ಮಾರಾಟವಾಗುತ್ತಿದೆ. ಆಧಾರ್ ಹೊಂದಿರುವ ಮಹಿಳೆಯರು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ರಿಜಿಸ್ಟರ್ ಮಾಡಿಸಿಕೊಳ್ಳಬೇಕು. ಮೂರು ಗಂಟೆ ನಂತರ ಲಾಟರಿ ಮೂಲಕ ಗ್ರಾಹಕರನ್ನು ಕರೆದು ಸೀರೆ ವಿತರಣೆಮಾಡಲಾಗುತ್ತದೆ. ರಾಮನಗರ, ಮೈಸೂರು, ಬೆಳಗಾವಿ, ದಾವಣಗೆರೆ, ಬೆಂಗಳೂರಿನಲ್ಲಿ ಸೀರೆ ಮಾರಾಟ ಮಾಡಲಾಗುತ್ತದೆ. ಇದನ್ನೂ ಓದಿ: ಸಚಿವರ ಮಾತುಕೇಳಿ ರೇಷ್ಮೆ ಸೀರೆ ಖರೀದಿಸಲು ಹೋಗಿದ್ದ ಮಹಿಳೆಯರಿಗೆ ಶಾಕ್
Advertisement
Advertisement
ವರಮಹಾಲಕ್ಷ್ಮೀ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ನೀಡಲಾಗುವುದು ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದರು. ಆದರೆ ಹಬ್ಬಕ್ಕೆ ಸರ್ಕಾರ ಸೀರೆ ಕೊಡಲಿಲ್ಲ. ಸೀರೆ ವಿತರಿಸದಕ್ಕೆ ಹಲವು ಕಾರಣವನ್ನು ಸರ್ಕಾರ ನೀಡಿತ್ತು. ಆದರೆ ಕಡಿಮೆ ಬೆಲೆಯಲ್ಲಿ ಸರ್ಕಾರ ರೇಷ್ಮೆ ಸೀರೆ ಕೊಟ್ಟರೆ ನಿಗಮಕ್ಕೆ ಐದು ಕೋಟಿ ರೂಪಾಯಿ ನಷ್ಟವಾಗುತ್ತದೆ. ಹೀಗಾಗಿ ಸೀರೆ ಕೊಡೋದು ಬೇಡ ಅಂತ ರೇಷ್ಮೆ ನೇಯ್ಗೆ ಕಾರ್ಖಾನೆ ನೌಕರರು ಪಟ್ಟು ಹಿಡಿದಿದ್ದರು.
Advertisement
ಈಗ ಸರ್ಕಾರ ನಿಗಮಕ್ಕೆ ಆಗುವ ಐದು ಕೋಟಿ ರೂಪಾಯಿಯನ್ನು ಭರಿಸಲು ಮುಂದಾಗಿದ್ದು, ನಿಗಮಕ್ಕೆ ಐದು ಕೋಟಿ ರೂಪಾಯಿ ನೀಡಲು ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ. ಆದ್ದರಿಂದ ಕಡಿಮೆ ದರದಲ್ಲಿ ಸೀರೆ ನೀಡುವುದು ಖಚಿತವಾಗಿದೆ. ಆದರೆ ನೂತನ ಆಫರ್ ಮೂಲಕ ಸೀರೆಗಳನ್ನು ಮಾರಾಟ ಮಾಡಲಾಗುತ್ತದೆ.
Advertisement
ವಿಶೇಷ ಮಾರಾಟದ ಸ್ಥಳಗಳು
* ಸ್ಪನ್ ಸಿಲ್ಕ್ ಆವರಣ, ಬಿಎಂ ರಸ್ತೆ, ಮಂಗಳವಾರ ಪೇಟೆ ಚನ್ನಪಟ್ಟಣ, ರಾಮನಗರ.
* ಜೂ(ಮೃಗಾಲಯ) ಮಾರಾಟ ಮಳಿಗೆ ಮೈಸೂರು ನಗರ.
* ಕನ್ನಡ ಸಾಹಿತ್ಯ ಭವನ, ಜಿಲ್ಲಾಧಿಕಾರಿಯ ಕಚೇರಿಯ ಎದುರುಗಡೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಬೆಳಗಾವಿ.
* ರೋಟರಿ ಬಾಲ ಭವನ, ಪ್ರವಾಸಿ ಮಂದಿರ ರಸ್ತೆ, ಬಡಾವಣೆ ಪೊಲೀಸ್ ಠಾಣೆ ಪಕ್ಕ, ದಾವಣಗೆರೆ.
* ಎಫ್‍ಕೆಸಿಸಿಐ ಕಟ್ಟಡದ ಆವರಣ, ಕೆಂಪೇಗೌಡ ರಸ್ತೆ, ಬೆಂಗಳೂರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv