Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Search

Archives

  • October 2026
  • September 2026
  • August 2026
  • July 2026
  • June 2026
  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
  • ಟ್ರೆಂಡಿಂಗ್ ನ್ಯೂಸ್ ( Trending News )
  • Privacy Policy
  • CSR-Policy
  • Terms of Service
  • POSH POLICY
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.
Reading: ವೃದ್ಧರ ಬದುಕಿಗೆ ಕೇರಳದ ಹೊಸ ಭರವಸೆ – ಹಿರಿಯರ ರಕ್ಷಣೆಗೆ ಮಹತ್ವದ ಮಸೂದೆ, ವಿಶೇಷತೆ ಏನು?
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • POSH POLICY
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.

Home | Special | ವೃದ್ಧರ ಬದುಕಿಗೆ ಕೇರಳದ ಹೊಸ ಭರವಸೆ – ಹಿರಿಯರ ರಕ್ಷಣೆಗೆ ಮಹತ್ವದ ಮಸೂದೆ, ವಿಶೇಷತೆ ಏನು?

Special

ವೃದ್ಧರ ಬದುಕಿಗೆ ಕೇರಳದ ಹೊಸ ಭರವಸೆ – ಹಿರಿಯರ ರಕ್ಷಣೆಗೆ ಮಹತ್ವದ ಮಸೂದೆ, ವಿಶೇಷತೆ ಏನು?

Last updated: October 20, 2026 7:40 pm
By
Public TV
Share
11 Min Read
Keralam Senior Citizens Bill

ವಯಸ್ಸಾಗುತ್ತಿದ್ದಂತೆ ಬದುಕಿಗೆ ಆಸರೆಯಾಗಬೇಕಾದವರು ಕೆಲವೊಮ್ಮೆ ಒಂಟಿತನಕ್ಕೆ ದೂಡಲ್ಪಡುತ್ತಾರೆ. ಮಕ್ಕಳಿಂದ ದೂರವಾಗಿ ಬದುಕುವ ಪರಿಸ್ಥಿತಿ, ಆರೋಗ್ಯ ಸಮಸ್ಯೆಗಳು, ಆರ್ಥಿಕ ಅವಲಂಬನೆ, ಆಸ್ತಿ ವಿಚಾರದಲ್ಲಿ ವಂಚನೆ ಹಾಗೂ ಆರೈಕೆಯ ಕೊರತೆ ಅನೇಕ ಹಿರಿಯ ನಾಗರಿಕರ ಬದುಕನ್ನು ಸಂಕಷ್ಟಕ್ಕೆ ತಳ್ಳುತ್ತವೆ. ಇಂತಹ ಸವಾಲುಗಳ ನಡುವೆ ಹಿರಿಯರಿಗೆ ಸುರಕ್ಷತೆ, ಸ್ವಾತಂತ್ರ್ಯ ಮತ್ತು ಗೌರವಯುತ ಜೀವನ ಕಲ್ಪಿಸುವ ಉದ್ದೇಶದಿಂದ ಕೇರಳ (Keralam) ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

2026ರ ಅಕ್ಟೋಬರ್ 13ರಂದು ವಿಧಾನಸಭೆಯಲ್ಲಿ ಕೇರಳ ಹಿರಿಯ ನಾಗರಿಕರ ಆರೈಕೆ ಮತ್ತು ಹಕ್ಕುಗಳ ರಕ್ಷಣೆ ಮಸೂದೆ–2026 (Keralam Senior Citizens Bill) ಮಂಡಿಸಲಾಗಿದೆ. ಈ ಮಸೂದೆ ಅಂಗೀಕಾರಗೊಂಡು ಕಾನೂನಾಗಿ ಜಾರಿಯಾದರೆ, ಹಿರಿಯ ನಾಗರಿಕರ ಆರೈಕೆ ಕೇಂದ್ರಗಳ ನಿರ್ವಹಣೆಯಿಂದ ಹಿಡಿದು ಆರೈಕೆದಾರರ ತರಬೇತಿ, ದೌರ್ಜನ್ಯ ತಡೆ, ಆರ್ಥಿಕ ಶೋಷಣೆಯ ವಿರುದ್ಧದ ಕ್ರಮ ಹಾಗೂ ಡಿಜಿಟಲ್ ವಂಚನೆಯಿಂದ ರಕ್ಷಣೆಯವರೆಗೆ ಹಲವು ಕ್ಷೇತ್ರಗಳಲ್ಲಿ ಹೊಸ ವ್ಯವಸ್ಥೆ ರೂಪುಗೊಳ್ಳಲಿದೆ. ಹಿರಿಯರು ತಮ್ಮ ಮನೆಯಲ್ಲೇ ಸ್ವತಂತ್ರವಾಗಿ ಬದುಕಲು ಆದ್ಯತೆ ನೀಡುವುದೂ ಈ ಮಸೂದೆಯ ಪ್ರಮುಖ ವಿಶೇಷತೆ. ಹಾಗಾದರೆ, ಈ ಮಸೂದೆಯಲ್ಲಿ ಏನೆಲ್ಲ ಅಂಶಗಳಿವೆ? ಹಿರಿಯ ನಾಗರಿಕರ ಬದುಕಿನಲ್ಲಿ ಇದು ಯಾವ ರೀತಿಯ ಬದಲಾವಣೆ ತರಬಹುದು ಎಂಬುದರ ಕುರಿತು ಈ ಕೆಳಗೆ ವಿವರಿಸಲಾಗಿದೆ.

ಹಿರಿಯರ ಸಂಖ್ಯೆ ಹೆಚ್ಚಳ; ಕೇರಳದ ಮುಂದಿರುವ ಸವಾಲುಗಳೇನು?
ಭಾರತದಲ್ಲಿ ಜನಸಂಖ್ಯೆಯ ವಯೋವಿನ್ಯಾಸ ಬದಲಾಗುತ್ತಿರುವ ರಾಜ್ಯಗಳಲ್ಲಿ ಕೇರಳ ಪ್ರಮುಖವಾಗಿದೆ. ಜನನ ಪ್ರಮಾಣದಲ್ಲಿನ ಇಳಿಕೆ ಮತ್ತು ಜನರ ಜೀವಿತಾವಧಿಗೆ ಸಂಬಂಧಿಸಿದ ಬದಲಾವಣೆಗಳಿಂದಾಗಿ ರಾಜ್ಯದಲ್ಲಿ ಹಿರಿಯ ನಾಗರಿಕರ ಪ್ರಮಾಣ ವೇಗವಾಗಿ ಹೆಚ್ಚುತ್ತಿದೆ. ಇದರಿಂದ ಹಿರಿಯರ ಆರೋಗ್ಯ, ಆರೈಕೆ, ವಸತಿ ಮತ್ತು ಸಾಮಾಜಿಕ ಭದ್ರತೆಗೆ ಹೆಚ್ಚಿನ ಗಮನ ನೀಡುವ ಅಗತ್ಯ ಎದುರಾಗಿದೆ.

ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೈಗ್ರೇಷನ್ ಆ್ಯಂಡ್ ಡೆವಲಪ್‌ಮೆಂಟ್‌ನ ಮಾಹಿತಿಯ ಪ್ರಕಾರ, 2011ರಲ್ಲಿ ಕೇರಳದ ಒಟ್ಟು ಜನಸಂಖ್ಯೆಯಲ್ಲಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಪ್ರಮಾಣ ಶೇ.12.7ರಷ್ಟಿತ್ತು. 2021ರಲ್ಲಿ ಇದು ಶೇ.15ಕ್ಕೆ ಏರಿಕೆಯಾಗಿದೆ. 2051ರ ವೇಳೆಗೆ ಈ ಪ್ರಮಾಣ ಶೇ.30ಕ್ಕೆ ತಲುಪುವ ನಿರೀಕ್ಷೆಯಿದೆ. ಅಷ್ಟೇ ಅಲ್ಲ, 2030ರ ವೇಳೆಗೆ ಮಕ್ಕಳಿಗಿಂತ ಹಿರಿಯ ನಾಗರಿಕರ ಸಂಖ್ಯೆಯೇ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

More Read

Smit Machchhar 1
ಮೈಸೂರು ದಸರಾ ಕೇಕ್‌ನಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಶೌರ್ಯಕ್ಕೆ ಗೌರವ
Ayush Verma Sheetal Payal
Asian Para Games: ಭಾರತಕ್ಕೆ 10ನೇ ಚಿನ್ನ ತಂದುಕೊಟ್ಟ ಆಯುಷ್ ವರ್ಮಾ – ಆರ್ಚರಿಯಲ್ಲಿ ಶೀತಲ್ & ಪಾಯಲ್‌ಗೆ ಬೆಳ್ಳಿ
Traffic Jam
ಬೆಂಗಳೂರು ಟ್ರಾಫಿಕ್‌ಗೆ ಮುಕ್ತಿ ನೀಡಲು ಹೊಸ ಪ್ಲ್ಯಾನ್‌ – 1,640 ಕೋಟಿ ವೆಚ್ಚದಲ್ಲಿ 6 ಫ್ಲೈಓವರ್‌ಗಳ ನಿರ್ಮಾಣ

ಹಿರಿಯರ ಸಂಖ್ಯೆ ಹೆಚ್ಚಾದಂತೆ ಅವರ ಆರೈಕೆಯ ಜವಾಬ್ದಾರಿಯೂ ಹೆಚ್ಚುತ್ತದೆ. ಕುಟುಂಬದ ಸದಸ್ಯರು ಉದ್ಯೋಗ, ಶಿಕ್ಷಣ ಅಥವಾ ಇತರ ಕಾರಣಗಳಿಂದ ದೂರವಿರುವ ಸಂದರ್ಭಗಳಲ್ಲಿ ಹಿರಿಯರಿಗೆ ಅಗತ್ಯ ನೆರವು ಒದಗಿಸುವುದು ಸವಾಲಾಗಬಹುದು. ಒಬ್ಬರೇ ವಾಸಿಸುವವರು, ವಿಧವೆಯರು, ಅಂಗವೈಕಲ್ಯ ಹೊಂದಿರುವವರು ಮತ್ತು ಆರ್ಥಿಕವಾಗಿ ದುರ್ಬಲರಾಗಿರುವವರ ಸಮಸ್ಯೆಗಳು ಇನ್ನಷ್ಟು ಗಂಭೀರವಾಗಬಹುದು.

ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ಆರೈಕೆ ಸೇವೆಗಳಿಗೆ ಸ್ಪಷ್ಟ ನಿಯಮಗಳನ್ನು ರೂಪಿಸುವುದು ಅಗತ್ಯವಾಗಿದೆ. ಇದೇ ಉದ್ದೇಶದಿಂದ ಕೇರಳ ಸರ್ಕಾರ ಈ ಮಸೂದೆಯನ್ನು ಮಂಡಿಸಿದೆ.

ಮನೆಯಲ್ಲೇ ಬದುಕುವ ಹಕ್ಕಿಗೆ ಆದ್ಯತೆ:
ಮಸೂದೆಯ ಪ್ರಮುಖ ಆಕರ್ಷಣೆ ‘ಏಜಿಂಗ್ ಇನ್ ಪ್ಲೇಸ್’ (Ageing in Place) ಎಂಬ ಪರಿಕಲ್ಪನೆ. ಇದರ ಅರ್ಥ, ಹಿರಿಯ ನಾಗರಿಕರು ತಮ್ಮದೇ ಮನೆಯಲ್ಲಿ ಅಥವಾ ತಾವು ಆಯ್ಕೆ ಮಾಡಿಕೊಂಡ ಸಮುದಾಯದಲ್ಲಿ ಸುರಕ್ಷಿತವಾಗಿ, ಸ್ವತಂತ್ರವಾಗಿ ಮತ್ತು ಗೌರವದಿಂದ ಜೀವನ ನಡೆಸಲು ಅವಕಾಶ ಕಲ್ಪಿಸುವುದು.

ವಯಸ್ಸಾಗಿದೆ ಎಂಬ ಕಾರಣಕ್ಕೆ ಹಿರಿಯರು ತಮ್ಮ ಪರಿಚಿತ ಪರಿಸರವನ್ನು ತೊರೆದು ಆರೈಕೆ ಕೇಂದ್ರಕ್ಕೆ ಹೋಗಬೇಕಾದ ಪರಿಸ್ಥಿತಿ ಬರಬಾರದು ಎಂಬ ಆಶಯ ಈ ಪರಿಕಲ್ಪನೆಯಲ್ಲಿದೆ. ತಮ್ಮ ಮನೆ, ನೆರೆಹೊರೆ, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದುಕೊಂಡೇ ಜೀವನ ನಡೆಸಲು ಅವರಿಗೆ ನೆರವು ದೊರೆಯಬೇಕು. ಮಸೂದೆಯ ಪ್ರಕಾರ, ಹಿರಿಯರು ಮನೆಯಲ್ಲೇ ಉಳಿದುಕೊಳ್ಳಲು ಅಗತ್ಯವಾದ ಆರೈಕೆಯನ್ನು ಒದಗಿಸುವ ನಿರೀಕ್ಷೆ ಕುಟುಂಬದ ಸದಸ್ಯರು ಅಥವಾ ಕಾನೂನುಬದ್ಧ ವಾರಸುದಾರರ ಮೇಲಿದೆ. ಸಂಸ್ಥೆಗಳಲ್ಲಿ ವಾಸಿಸುವ ವ್ಯವಸ್ಥೆಯನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸಲಾಗಿದೆ.

ಆದರೆ, ಪ್ರತಿಯೊಬ್ಬ ಹಿರಿಯರ ಆರೋಗ್ಯ ಮತ್ತು ಕುಟುಂಬದ ಪರಿಸ್ಥಿತಿ ಒಂದೇ ರೀತಿಯಲ್ಲಿರುವುದಿಲ್ಲ. ಕೆಲವರಿಗೆ ಮನೆಯಲ್ಲಿನ ನೆರವು ಸಾಕಾಗಬಹುದು. ಇನ್ನು ಕೆಲವರಿಗೆ ನಿರಂತರ ವೈದ್ಯಕೀಯ ಆರೈಕೆ ಅಗತ್ಯವಾಗಬಹುದು. ಹೀಗಾಗಿ, ಹಿರಿಯರ ಅಗತ್ಯಕ್ಕೆ ತಕ್ಕಂತೆ ಸೂಕ್ತ ಆರೈಕೆ ಒದಗಿಸುವುದು ಈ ಪರಿಕಲ್ಪನೆಯ ಮುಖ್ಯ ಆಶಯವಾಗಿದೆ.

ಲಿವಿಂಗ್ ವಿಲ್‌ಗೆ ಮಾನ್ಯತೆ:
ಹಿರಿಯ ನಾಗರಿಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಸೂದೆಯಲ್ಲಿ ‘ಲಿವಿಂಗ್ ವಿಲ್’ ವ್ಯವಸ್ಥೆಯನ್ನೂ ಪ್ರಸ್ತಾಪಿಸಲಾಗಿದೆ. ಭವಿಷ್ಯದಲ್ಲಿ ವ್ಯಕ್ತಿಯು ತನ್ನ ವೈದ್ಯಕೀಯ ಇಚ್ಛೆಯನ್ನು ತಿಳಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾದರೆ, ಯಾವ ರೀತಿಯ ಚಿಕಿತ್ಸೆ ಪಡೆಯಲು ಬಯಸುತ್ತಾರೆ ಎಂಬುದನ್ನು ಮುಂಚಿತವಾಗಿ ದಾಖಲಿಸುವ ದಾಖಲೆ ಇದಾಗಿದೆ.

ಉದಾಹರಣೆಗೆ, ತೀವ್ರ ನಿಗಾ ಘಟಕಕ್ಕೆ ದಾಖಲಿಸುವುದು, ದೇಹದೊಳಗೆ ವೈದ್ಯಕೀಯ ಕೊಳವೆಗಳನ್ನು ಅಳವಡಿಸುವುದು ಅಥವಾ ಜೀವ ಉಳಿಸುವ ಕೆಲವು ವೈದ್ಯಕೀಯ ಕ್ರಮಗಳ ಕುರಿತು ತಮ್ಮ ಆದ್ಯತೆಗಳನ್ನು ದಾಖಲಿಸಬಹುದು. ಮಸೂದೆಯ ಪ್ರಕಾರ, ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ರಕ್ಷಣಾ ವೇದಿಕೆಯ ಅಧ್ಯಕ್ಷರು ಅಥವಾ ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ರಕ್ಷಣಾ ಘಟಕದ ಸಮ್ಮುಖದಲ್ಲಿ ಲಿವಿಂಗ್ ವಿಲ್ ಮಾಡಿಸಿಕೊಳ್ಳಬಹುದು. ಇದನ್ನು ಸಿದ್ಧಪಡಿಸಲು ಆರೈಕೆ ಕೇಂದ್ರ, ಕಾನೂನುಬದ್ಧ ವಾರಸುದಾರ ಅಥವಾ ಸಂಬಂಧಿಕರು ನೆರವು ನೀಡಬೇಕಾಗುತ್ತದೆ.

ಈ ದಾಖಲೆಯನ್ನು ಸುರಕ್ಷಿತವಾಗಿ ಇರಿಸುವ ವ್ಯವಸ್ಥೆಯನ್ನೂ ಪ್ರಸ್ತಾಪಿಸಲಾಗಿದೆ. ಆರೈಕೆ ಕೇಂದ್ರ, ಸಂಬಂಧಿಕರು ಅಥವಾ ಕುಟುಂಬದ ಸದಸ್ಯರು ದಾಖಲೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಅದರ ಪ್ರತಿಯನ್ನು ಸಂಬಂಧಪಟ್ಟ ಜಿಲ್ಲಾ ಮಟ್ಟದ ಪ್ರಾಧಿಕಾರ ಮತ್ತು ಸ್ಥಳೀಯ ಸಂಸ್ಥೆಗೆ ಒದಗಿಸಬೇಕು.

ಹಿರಿಯ ನಾಗರಿಕರಿಗೆ ಆಹಾರ, ಬಟ್ಟೆ, ವಸತಿ ಮತ್ತು ವೈದ್ಯಕೀಯ ಚಿಕಿತ್ಸೆ ಒದಗಿಸುವುದಷ್ಟೇ ಆರೈಕೆಯಲ್ಲ. ಅವರಿಗೂ ಸಾಮಾಜಿಕ ಸಂಬಂಧಗಳು, ಮನರಂಜನೆ, ಆಧ್ಯಾತ್ಮಿಕ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳು ಅಗತ್ಯ. ಈ ದೃಷ್ಟಿಯಿಂದ ಹಿರಿಯರ ಕಲ್ಯಾಣದ ವ್ಯಾಪ್ತಿಯನ್ನು ವಿಸ್ತರಿಸಲು ಮಸೂದೆ ಪ್ರಸ್ತಾಪಿಸಿದೆ. ಸಾಮಾಜಿಕ ಸೇವೆಗಳು, ಮನರಂಜನಾ ಚಟುವಟಿಕೆಗಳು ಹಾಗೂ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಒದಗಿಸುವುದಕ್ಕೆ ಒತ್ತು ನೀಡಲಾಗಿದೆ.

ವಿಶೇಷವಾಗಿ ಅಂಗವೈಕಲ್ಯ ಹೊಂದಿರುವ ಅಥವಾ ದೈಹಿಕವಾಗಿ ಅಸಮರ್ಥರಾಗಿರುವ ಹಿರಿಯರಿಗೆ ಆರಾಮದಾಯಕ ಮತ್ತು ಗೌರವಯುತ ಜೀವನ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಹಿರಿಯರು ತಮ್ಮ ದಿನಚರಿಯನ್ನು ಸಾಧ್ಯವಾದಷ್ಟು ಸ್ವತಂತ್ರವಾಗಿ ನಿರ್ವಹಿಸುವುದರ ಜೊತೆಗೆ ಇತರರೊಂದಿಗೆ ಬೆರೆಯಲು ಮತ್ತು ತಮ್ಮ ಆಸಕ್ತಿಗಳಿಗೆ ಅನುಗುಣವಾಗಿ ಬದುಕಲು ಅವಕಾಶ ದೊರೆಯಬೇಕು ಎಂಬುದು ಈ ಪ್ರಸ್ತಾಪದ ಆಶಯವಾಗಿದೆ.

ಮನೆ ಆರೈಕೆಯಿಂದ ತುರ್ತು ವೈದ್ಯಕೀಯ ನೆರವಿನವರೆಗೆ ಸೌಲಭ್ಯ:
ಹಿರಿಯ ನಾಗರಿಕರ ಅಗತ್ಯಗಳು ವಯಸ್ಸು, ಆರೋಗ್ಯ ಮತ್ತು ವೈಯಕ್ತಿಕ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತವೆ. ಕೆಲವರಿಗೆ ಮನೆಯಲ್ಲಿನ ದೈನಂದಿನ ಕೆಲಸಗಳಿಗೆ ನೆರವು ಬೇಕಾಗಬಹುದು. ಇನ್ನು ಕೆಲವರಿಗೆ ದಿನದ ಕೆಲವು ಗಂಟೆಗಳ ಆರೈಕೆ ಅಥವಾ ನಿರಂತರ ವೈದ್ಯಕೀಯ ಸಹಾಯ ಅಗತ್ಯವಾಗಬಹುದು. ಈ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮನೆ ಆರೈಕೆ, ಹಗಲು ಆರೈಕೆ ಕೇಂದ್ರಗಳು, ಸಹಾಯಕ ವಸತಿ ವ್ಯವಸ್ಥೆ, ಹಾಸ್ಪಿಸ್ ಆರೈಕೆ ಮತ್ತು ತುರ್ತು ವೈದ್ಯಕೀಯ ನೆರವನ್ನು ಕೈಗೆಟುಕುವ ದರದಲ್ಲಿ ಒದಗಿಸಲು ಮಸೂದೆ ಉದ್ದೇಶಿಸಿದೆ.

ಈ ಸೇವೆಗಳನ್ನು ಒದಗಿಸುವಾಗ ಯಾವುದೇ ತಾರತಮ್ಯ ಇರಬಾರದು ಎಂಬುದಕ್ಕೂ ಆದ್ಯತೆ ನೀಡಲಾಗಿದೆ. ವಿಧವೆಯರು, ಕುಟುಂಬದಿಂದ ಕೈಬಿಡಲ್ಪಟ್ಟವರು, ಅಂಗವೈಕಲ್ಯ ಹೊಂದಿರುವವರು, ಹಿಂಸೆಯಿಂದ ಬದುಕುಳಿದವರು ಮತ್ತು ನಿರಾಶ್ರಿತ ಅಥವಾ ನಿರ್ಗತಿಕ ಮಹಿಳೆಯರು ಸೇರಿದಂತೆ ದುರ್ಬಲ ವರ್ಗದ ಹಿರಿಯ ಮಹಿಳೆಯರ ರಕ್ಷಣೆಗೆ ವಿಶೇಷ ಗಮನ ನೀಡಲಾಗಿದೆ.

ಸಾರ್ವಜನಿಕ ಸ್ಥಳಗಳೂ ಆಗಲಿವೆ ಹಿರಿಯ ಸ್ನೇಹಿ:
ಹಿರಿಯ ನಾಗರಿಕರಿಗೆ ಸಾರ್ವಜನಿಕ ಸ್ಥಳಗಳನ್ನು ಬಳಸುವುದು ಕೆಲವೊಮ್ಮೆ ಕಷ್ಟಕರವಾಗಬಹುದು. ಮೆಟ್ಟಿಲುಗಳನ್ನು ಏರುವುದು, ಹೆಚ್ಚು ಹೊತ್ತು ನಿಂತುಕೊಳ್ಳುವುದು, ಸರತಿಯಲ್ಲಿ ಕಾಯುವುದು ಅಥವಾ ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದು ದೈಹಿಕ ಸಮಸ್ಯೆಗಳನ್ನು ಹೊಂದಿರುವವರಿಗೆ ಸವಾಲಾಗಬಹುದು. ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಹಿರಿಯ ಸ್ನೇಹಿ ಸೌಲಭ್ಯಗಳನ್ನು ಕಲ್ಪಿಸಲು ಮಸೂದೆ ಪ್ರಸ್ತಾಪಿಸಿದೆ. ರ್ಯಾಂಪ್‌ಗಳು, ಆದ್ಯತೆಯ ಆಸನಗಳು, ಪ್ರತ್ಯೇಕ ಆದ್ಯತಾ ಸರತಿ ವ್ಯವಸ್ಥೆ ಮತ್ತು ಸುಲಭವಾಗಿ ಬಳಸಬಹುದಾದ ಶೌಚಾಲಯಗಳು ಇದರಲ್ಲಿ ಸೇರಿವೆ. ಇಂತಹ ಸೌಲಭ್ಯಗಳು ಹಿರಿಯರು ಸಾರ್ವಜನಿಕ ಸೇವೆಗಳನ್ನು ಬಳಸುವಾಗ ಎದುರಿಸುವ ತೊಂದರೆಗಳನ್ನು ಕಡಿಮೆ ಮಾಡಲು ನೆರವಾಗಬಹುದು. ಅವರ ವಯಸ್ಸು ಮತ್ತು ದೈಹಿಕ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಅನುಕೂಲಕರ ವಾತಾವರಣ ನಿರ್ಮಿಸುವುದು ಇದರ ಉದ್ದೇಶವಾಗಿದೆ.

ಹಿರಿಯರ ಮೇಲಿನ ದೌರ್ಜನ್ಯ, ಶೋಷಣೆಗೆ ಕಡಿವಾಣ:
ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಎಂದರೆ ದೈಹಿಕ ಹಲ್ಲೆ ಮಾತ್ರವಲ್ಲ. ಮಾನಸಿಕ ಒತ್ತಡ, ಅವಮಾನ, ಬೆದರಿಕೆ, ಆರ್ಥಿಕ ಶೋಷಣೆ ಮತ್ತು ಅಗತ್ಯ ಸೇವೆಗಳಿಂದ ವಂಚಿಸುವುದೂ ಅವರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ ದೌರ್ಜನ್ಯದ ವ್ಯಾಪಕ ವ್ಯಾಖ್ಯಾನವನ್ನು ಮಸೂದೆ ಒಳಗೊಂಡಿದೆ. ದೈಹಿಕ, ಭಾವನಾತ್ಮಕ, ಮಾನಸಿಕ, ಮೌಖಿಕ, ಲೈಂಗಿಕ ಮತ್ತು ಆರ್ಥಿಕ ದೌರ್ಜನ್ಯಗಳ ಜೊತೆಗೆ ಬಲವಂತದ ನಿಯಂತ್ರಣ, ನಂಬಿಕೆ ದ್ರೋಹ ಹಾಗೂ ಅಗತ್ಯ ವಸ್ತುಗಳು ಮತ್ತು ಸೇವೆಗಳನ್ನು ನಿರಾಕರಿಸುವುದನ್ನೂ ಇದರ ವ್ಯಾಪ್ತಿಗೆ ಸೇರಿಸಲಾಗಿದೆ.

ಹಿರಿಯರ ಹಣವನ್ನು ಅನುಮತಿಯಿಲ್ಲದೆ ಬಳಸುವುದು, ಅವರ ಅಗತ್ಯಗಳಿಗೆ ಹಣ ಖರ್ಚು ಮಾಡದಂತೆ ತಡೆಯುವುದು ಅಥವಾ ಅವರ ಮೂಲಭೂತ ಅಗತ್ಯಗಳನ್ನು ನಿರ್ಲಕ್ಷಿಸುವುದು ಶೋಷಣೆಯ ರೂಪಗಳಾಗಿರಬಹುದು. ಇಂತಹ ಕೃತ್ಯಗಳನ್ನು ಗುರುತಿಸಿ, ಅವುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕಾನೂನು ಚೌಕಟ್ಟು ರೂಪಿಸುವುದು ಮಸೂದೆಯ ಪ್ರಮುಖ ಉದ್ದೇಶವಾಗಿದೆ.

ಆಸ್ತಿ ಕಬಳಿಕೆ ಮತ್ತು ಆರ್ಥಿಕ ವಂಚನೆಗೂ ಶಿಕ್ಷೆ:
ಹಿರಿಯ ನಾಗರಿಕರ ಹೆಸರಿನಲ್ಲಿರುವ ಮನೆ, ಜಮೀನು, ಬ್ಯಾಂಕ್ ಠೇವಣಿ, ಪಿಂಚಣಿ ಅಥವಾ ಇತರ ಆಸ್ತಿಗಳನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯವಿದೆ. ವಿಶೇಷವಾಗಿ ದೈನಂದಿನ ವ್ಯವಹಾರಗಳಿಗೆ ಇತರರನ್ನು ಅವಲಂಬಿಸಿರುವ ಹಿರಿಯರು ಇಂತಹ ವಂಚನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಹಿರಿಯರ ಹಣಕಾಸು ಸಂಪನ್ಮೂಲಗಳು, ಗುರುತು, ಹೆಸರು, ಖ್ಯಾತಿ ಮತ್ತು ಆಸ್ತಿಯನ್ನು ಕಾನೂನುಬಾಹಿರವಾಗಿ ಅಥವಾ ವಂಚನೆಯ ಮೂಲಕ ಬಳಸುವುದನ್ನು ಮಸೂದೆಯಲ್ಲಿ ಶೋಷಣೆಯ ವ್ಯಾಪ್ತಿಗೆ ಸೇರಿಸಲಾಗಿದೆ.

ಹಿರಿಯರು ಸ್ವಯಂಪ್ರೇರಣೆಯಿಂದ ಮಾಡುವ ಕಾನೂನುಬದ್ಧ ಆಸ್ತಿ ವರ್ಗಾವಣೆ ಮತ್ತು ಬಲವಂತ ಅಥವಾ ವಂಚನೆಯ ಮೂಲಕ ನಡೆಯುವ ಆಸ್ತಿ ದುರುಪಯೋಗ ಎರಡೂ ಬೇರೆಬೇರೆ. ಹಿರಿಯರ ಸ್ವತಂತ್ರ ನಿರ್ಧಾರಕ್ಕೆ ಗೌರವ ನೀಡುವುದರ ಜೊತೆಗೆ ಅವರ ಆಸ್ತಿ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವುದು ಈ ಪ್ರಸ್ತಾಪದ ಉದ್ದೇಶವಾಗಿದೆ.

AI ಬಳಸಿ ವಂಚಿಸಿದರೂ ಕ್ರಮಕ್ಕೆ ಅವಕಾಶ:
ಡಿಜಿಟಲ್ ಬ್ಯಾಂಕಿಂಗ್ ಮತ್ತು ಆನ್‌ಲೈನ್ ಪಾವತಿಗಳ ಬಳಕೆ ಹೆಚ್ಚುತ್ತಿರುವಂತೆ ಸೈಬರ್ ವಂಚನೆಯ ಸ್ವರೂಪವೂ ಬದಲಾಗುತ್ತಿದೆ. ನಕಲಿ ಕರೆಗಳು, ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ಮಾಡುವ ವಂಚನೆ, ಗುರುತಿನ ಕಳವು ಮತ್ತು ಆನ್‌ಲೈನ್ ಹಣಕಾಸು ವಂಚನೆಗಳು ಹಿರಿಯ ನಾಗರಿಕರಿಗೆ ಅಪಾಯವನ್ನುಂಟುಮಾಡಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಮಸೂದೆಯಲ್ಲಿ ಸೈಬರ್ ವಂಚನೆಗೆ ನಿರ್ದಿಷ್ಟ ವ್ಯಾಖ್ಯಾನ ನೀಡಲಾಗಿದೆ. ಎಲೆಕ್ಟ್ರಾನಿಕ್, ಡಿಜಿಟಲ್, ಆನ್‌ಲೈನ್ ಅಥವಾ ಇತರ ತಾಂತ್ರಿಕ ವಿಧಾನಗಳ ಮೂಲಕ ಹಿರಿಯ ನಾಗರಿಕರಿಗೆ ಹಾನಿ ಉಂಟುಮಾಡುವ ಕೃತ್ಯಗಳು ಇದರ ವ್ಯಾಪ್ತಿಗೆ ಬರುತ್ತವೆ. ನಆನ್‌ಲೈನ್ ಬ್ಯಾಂಕಿಂಗ್ ವಂಚನೆ, ಹಣಕಾಸು ವಂಚನೆ, ಗುರುತಿನ ಕಳವು ಹಾಗೂ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ನಕಲಿ ವಿಷಯದ ಮೂಲಕ ಮೋಸ ಮಾಡುವುದೂ ಇದರಲ್ಲಿ ಸೇರಿದೆ.

ಉದಾಹರಣೆಗೆ, ಪರಿಚಿತ ವ್ಯಕ್ತಿಯ ಧ್ವನಿ ಅಥವಾ ಚಿತ್ರವನ್ನು ಅನುಕರಿಸುವ ನಕಲಿ ವಿಷಯದ ಮೂಲಕ ಹಣ ವರ್ಗಾಯಿಸಲು ಒತ್ತಾಯಿಸುವುದು ವಂಚನೆಯ ವಿಧಾನವಾಗಿರಬಹುದು. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತ ಹಿರಿಯ ನಾಗರಿಕರಿಗೆ ನೆರವು ನೀಡಲು ಮತ್ತು ಸಂಬಂಧಪಟ್ಟ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಲು ಮಸೂದೆ ಅವಕಾಶ ಕಲ್ಪಿಸುತ್ತದೆ. ಆದರೆ, ಈ ಪ್ರಸ್ತಾಪವು ಮಾಹಿತಿ ತಂತ್ರಜ್ಞಾನ ಕಾಯ್ದೆ–2000 ಅಥವಾ ಭಾರತೀಯ ನ್ಯಾಯ ಸಂಹಿತೆ–2023ರ ಅಡಿಯಲ್ಲಿ ಈಗಾಗಲೇ ಇರುವ ಕಾನೂನು ಕ್ರಮಗಳನ್ನು ಬದಲಿಸುವುದಿಲ್ಲ.

ಆರೈಕೆ ಕೇಂದ್ರಗಳಿಗೆ ನೋಂದಣಿ ಕಡ್ಡಾಯ:
ಹಿರಿಯ ನಾಗರಿಕರ ಆರೈಕೆ ಕೇಂದ್ರಗಳಲ್ಲಿ ಸುರಕ್ಷತೆ, ಸ್ವಚ್ಛತೆ, ಸೂಕ್ತ ಆರೈಕೆ ಮತ್ತು ಗೌರವಯುತ ವಾತಾವರಣ ಇರಬೇಕು. ಈ ಉದ್ದೇಶದಿಂದ ಆರೈಕೆ ಕೇಂದ್ರಗಳು, ನಿವೃತ್ತರ ವಸತಿ ಗೃಹಗಳು, ಹಾಸ್ಪಿಸ್ ಕೇಂದ್ರಗಳು, ಆರೈಕೆ ಸೇವಾ ಸಂಸ್ಥೆಗಳು ಮತ್ತು ಆರೈಕೆದಾರರಿಗೆ ತರಬೇತಿ ನೀಡುವ ಕೇಂದ್ರಗಳ ನಿಯಂತ್ರಣಕ್ಕೆ ಮಸೂದೆ ಪ್ರಸ್ತಾಪಿಸಿದೆ.

ಎಲ್ಲಾ ವರ್ಗದ ಹಿರಿಯ ನಾಗರಿಕರ ಆರೈಕೆ ಕೇಂದ್ರಗಳ ನೋಂದಣಿ ಕಡ್ಡಾಯವಾಗಲಿದೆ. ಹಿರಿಯ ನಾಗರಿಕರ ಇಲಾಖೆಯ ನಿರ್ದೇಶಕರು ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಸಂಸ್ಥೆಗಳು ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸಬೇಕು. ನಿವಾಸಿಗಳಿಗೆ ಸಾಮಾಜಿಕ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಬೇಕು. ದೌರ್ಜನ್ಯ ಮತ್ತು ಶೋಷಣೆಯಿಂದ ಅವರನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ನೋಂದಣಿ ಕಡ್ಡಾಯಗೊಳಿಸುವ ಮೂಲಕ ಆರೈಕೆ ಕೇಂದ್ರಗಳ ಕಾರ್ಯನಿರ್ವಹಣೆಯ ಮೇಲೆ ಮೇಲ್ವಿಚಾರಣೆ ನಡೆಸಲು ಮತ್ತು ನಿಯಮ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳಲು ವ್ಯವಸ್ಥೆ ರೂಪಿಸುವುದು ಇದರ ಉದ್ದೇಶವಾಗಿದೆ.

ಆರೈಕೆದಾರರಿಗೆ ತರಬೇತಿ, ಪೊಲೀಸ್ ಪರಿಶೀಲನೆ:
ಹಿರಿಯ ನಾಗರಿಕರ ಆರೈಕೆಯಲ್ಲಿ ಆರೈಕೆದಾರರ ಪಾತ್ರ ಬಹಳ ಮುಖ್ಯ. ಔಷಧಿ ತೆಗೆದುಕೊಳ್ಳಲು ನೆರವಾಗುವುದು, ದೈನಂದಿನ ಚಟುವಟಿಕೆಗಳಿಗೆ ಸಹಾಯ ಮಾಡುವುದು, ಚಲನವಲನಕ್ಕೆ ನೆರವಾಗುವುದು ಮತ್ತು ಆರೋಗ್ಯದ ಬದಲಾವಣೆಗಳನ್ನು ಗಮನಿಸುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ಅವರು ನಿರ್ವಹಿಸಬಹುದು. ಹೀಗಾಗಿ, ಆರೈಕೆದಾರರಿಗೆ ಅಗತ್ಯ ತರಬೇತಿ ಮತ್ತು ಸೂಕ್ತ ಅರ್ಹತೆ ಇರಬೇಕು ಎಂಬ ಉದ್ದೇಶದಿಂದ ‘ಕೇರಳ ಜೆರಿಯಾಟ್ರಿಕ್ ಕೇರ್ ಸರ್ಟಿಫಿಕೇಶನ್ ಫ್ರೇಮ್‌ವರ್ಕ್’ ರೂಪಿಸಲು ಮಸೂದೆ ಪ್ರಸ್ತಾಪಿಸಿದೆ.

ಈ ವ್ಯವಸ್ಥೆಯಡಿ ಆರೈಕೆದಾರರಿಗೆ ವಿವಿಧ ಹಂತಗಳ ಪ್ರಮಾಣೀಕರಣ ನೀಡಲಾಗುತ್ತದೆ. ತರಬೇತಿ ಪಠ್ಯಕ್ರಮವನ್ನು ನಿಗದಿಪಡಿಸಲಾಗುತ್ತದೆ. ಆರೈಕೆದಾರರು ರಾಜ್ಯ ಹಿರಿಯ ನಾಗರಿಕರ ರಕ್ಷಣಾ ಘಟಕದಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಪ್ರಮಾಣೀಕೃತ ಆರೈಕೆದಾರರ ಹೆಸರು, ನೋಂದಣಿ ಸಂಖ್ಯೆ, ಪ್ರಮಾಣೀಕರಣದ ವರ್ಗ, ಮಾನ್ಯತೆಯ ಅವಧಿ ಮತ್ತು ಪ್ರಸ್ತುತ ಸ್ಥಿತಿಯನ್ನು ಒಳಗೊಂಡ ಸಾರ್ವಜನಿಕ ನೋಂದಣಿಯನ್ನೂ ನಿರ್ವಹಿಸಲಾಗುತ್ತದೆ.

ಆರೈಕೆ ಕೇಂದ್ರಗಳಲ್ಲಿ ಕೆಲಸ ಮಾಡುವವರು ಮತ್ತು ಒಬ್ಬರೇ ವಾಸಿಸುವ ಹಿರಿಯ ನಾಗರಿಕರ ಮನೆಯಲ್ಲಿ ವಾಸ್ತವ್ಯ ಹೂಡಿ ಆರೈಕೆ ಒದಗಿಸುವವರು ಕಡ್ಡಾಯ ಪೊಲೀಸ್ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಆರೈಕೆದಾರರು ಪ್ರತಿ ಮೂರು ವರ್ಷಗಳಿಗೊಮ್ಮೆ ಪುನರ್‌ತರಬೇತಿ ಪಡೆಯುವ ಪ್ರಸ್ತಾಪವೂ ಇದೆ. ಇದರ ಜೊತೆಗೆ ಆರೈಕೆದಾರರಿಗೆ ನ್ಯಾಯಯುತ ವೇತನ, ಸುರಕ್ಷಿತ ಕೆಲಸದ ಪರಿಸ್ಥಿತಿಗಳು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುವ ಅಂಶಗಳನ್ನೂ ಮಸೂದೆ ಒಳಗೊಂಡಿದೆ.

ದೂರುಗಳಿಗೆ ಪ್ರತ್ಯೇಕ ವ್ಯವಸ್ಥೆ, ಪೊಲೀಸರಿಗೂ ಜವಾಬ್ದಾರಿ:
ಹಿರಿಯ ನಾಗರಿಕರ ಮೇಲೆ ದೌರ್ಜನ್ಯ ನಡೆದಾಗ ಅಥವಾ ಆರೈಕೆ ಕೇಂದ್ರದಲ್ಲಿ ಸಮಸ್ಯೆ ಎದುರಾದಾಗ ದೂರು ನೀಡಲು ಮತ್ತು ಪರಿಹಾರ ಪಡೆಯಲು ಸೂಕ್ತ ವ್ಯವಸ್ಥೆ ಇರಬೇಕು. ಈ ಉದ್ದೇಶದಿಂದ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ರಕ್ಷಣಾ ಘಟಕಗಳನ್ನು ಸ್ಥಾಪಿಸಲು ಮಸೂದೆ ಪ್ರಸ್ತಾಪಿಸಿದೆ. ರಾಜ್ಯ ಹಿರಿಯ ನಾಗರಿಕರ ರಕ್ಷಣಾ ಘಟಕ, ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ರಕ್ಷಣಾ ವೇದಿಕೆಗಳು ಮತ್ತು ಜಿಲ್ಲಾ ಮಟ್ಟದ ರಕ್ಷಣಾ ಘಟಕಗಳು ಈ ವ್ಯವಸ್ಥೆಯ ಭಾಗವಾಗಲಿವೆ. ಪೊಲೀಸ್ ಠಾಣೆ, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಹಿರಿಯ ನಾಗರಿಕರ ರಕ್ಷಣೆಗೆ ನೋಡಲ್ ಪೊಲೀಸ್ ಅಧಿಕಾರಿಗಳನ್ನು ನೇಮಿಸುವ ಪ್ರಸ್ತಾಪವೂ ಇದೆ.

ಜಿಲ್ಲಾ ಮಟ್ಟದ ಘಟಕಗಳು ದೂರುಗಳನ್ನು ಸ್ವೀಕರಿಸುವುದು, ಆರೈಕೆ ಕೇಂದ್ರಗಳ ಕಾರ್ಯನಿರ್ವಹಣೆಯ ಕುರಿತು ತನಿಖೆ ನಡೆಸುವುದು, ಸೌಲಭ್ಯಗಳನ್ನು ಪರಿಶೀಲಿಸುವುದು ಮತ್ತು ಅಗತ್ಯ ಕ್ರಮ ಕೈಗೊಳ್ಳುವ ಜವಾಬ್ದಾರಿ ಹೊಂದಿರುತ್ತವೆ. ಇದರ ಮೂಲಕ ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಅವರ ರಕ್ಷಣೆಗೆ ಸಂಬಂಧಿಸಿದ ದೂರುಗಳನ್ನು ನಿರ್ಲಕ್ಷಿಸದಂತೆ ನೋಡಿಕೊಳ್ಳಲು ಉದ್ದೇಶಿಸಲಾಗಿದೆ.

ಹಿರಿಯರ ಕಲ್ಯಾಣಕ್ಕೆ ಪ್ರತ್ಯೇಕ ನಿಧಿ:
ಹಿರಿಯ ನಾಗರಿಕರ ಆರೈಕೆ ಮತ್ತು ರಕ್ಷಣಾ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಹಣಕಾಸಿನ ನೆರವು ಅಗತ್ಯ. ಈ ಹಿನ್ನೆಲೆಯಲ್ಲಿ ರಾಜ್ಯ ಹಿರಿಯ ನಾಗರಿಕರ ಮೀಸಲು ನಿಧಿ ಸ್ಥಾಪಿಸಲು ಮಸೂದೆ ಪ್ರಸ್ತಾಪಿಸಿದೆ. ಸರ್ಕಾರದ ಅನುದಾನ, ಸ್ಥಳೀಯ ಸಂಸ್ಥೆಗಳ ಕೊಡುಗೆ, ಶುಲ್ಕ, ದಂಡ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿ ಮತ್ತು ದೇಣಿಗೆಗಳ ಮೂಲಕ ಈ ನಿಧಿಗೆ ಹಣ ಸಂಗ್ರಹಿಸಬಹುದು. ಈ ಹಣವನ್ನು ಹಿರಿಯ ನಾಗರಿಕರ ಆರೈಕೆ, ಕಲ್ಯಾಣ, ರಕ್ಷಣೆ ಮತ್ತು ಸಾಮಾಜಿಕ ಭದ್ರತೆಗಾಗಿ ಮಾತ್ರ ಬಳಸುವ ಉದ್ದೇಶವಿದೆ.

ಹಿರಿಯ ನಾಗರಿಕರ ಆರೈಕೆ ಕೇಂದ್ರಗಳ ನಿವಾಸಿಗಳು ಸ್ವಯಂಪ್ರೇರಣೆಯಿಂದ ತಮ್ಮ ಆಸ್ತಿ, ಬ್ಯಾಂಕ್‌ನಲ್ಲಿರುವ ಹಣ ಅಥವಾ ಇತರ ಆದಾಯವನ್ನು ಆರೈಕೆ ಕೇಂದ್ರಕ್ಕೆ, ರಾಜ್ಯ ಮೀಸಲು ನಿಧಿಗೆ ಅಥವಾ ಮತ್ತೊಬ್ಬ ವ್ಯಕ್ತಿ ಅಥವಾ ಸಂಸ್ಥೆಗೆ ದೇಣಿಗೆಯಾಗಿ ನೀಡಲು ಅವಕಾಶ ಕಲ್ಪಿಸಲಾಗಿದೆ.

ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ? ಎಷ್ಟು ವರ್ಷ ಜೈಲು?
ಹಿರಿಯ ನಾಗರಿಕರ ರಕ್ಷಣೆಗೆ ರೂಪಿಸಲಾಗುವ ನಿಯಮಗಳನ್ನು ಉಲ್ಲಂಘಿಸುವವರಿಗೆ ಶಿಕ್ಷೆ ವಿಧಿಸುವ ಪ್ರಸ್ತಾಪವನ್ನೂ ಮಸೂದೆ ಒಳಗೊಂಡಿದೆ. ನೋಂದಣಿ ಇಲ್ಲದೆ ಆರೈಕೆ ಕೇಂದ್ರ ನಡೆಸಿದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ 25,000 ರೂ.ವರೆಗೆ ದಂಡ ಅಥವಾ ಎರಡೂ ವಿಧಿಸಬಹುದು.

ಕಾನೂನು ಜಾರಿಗೊಳಿಸುವ ಕಾರ್ಯಕ್ಕೆ ಅಡ್ಡಿಪಡಿಸಿದರೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 25,000 ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ಹಿರಿಯರ ಆಸ್ತಿಯನ್ನು ಅಕ್ರಮವಾಗಿ ವಶಪಡಿಸಿಕೊಂಡರೆ, ದೌರ್ಜನ್ಯ ಅಥವಾ ಕ್ರೌರ್ಯ ಎಸಗಿದರೆ, ಅಥವಾ ಅವರನ್ನು ಕೈಬಿಟ್ಟರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 50,000 ರೂ.ವರೆಗೆ ದಂಡ ವಿಧಿಸುವ ಪ್ರಸ್ತಾಪವಿದೆ. ವರದಿ ಮಾಡಬೇಕಾದ ದೌರ್ಜನ್ಯದ ಶಂಕೆಯನ್ನು ವರದಿ ಮಾಡದಿದ್ದರೆ 10,000 ರೂ.ವರೆಗೆ ದಂಡ ವಿಧಿಸಬಹುದು.

Share This Article
Facebook Whatsapp Whatsapp Telegram Copy Link
Cinema News
Deepika Padukone and Ranveer Singh Introduce Second Daughter Devi on Dussehra with First Family Photo
ಮಗಳಿಗೆ `ದೇವಿʼ ಹೆಸರಿಟ್ಟ ದೀಪಿಕಾ ರಣವೀರ್
Tiger Shroff
ಟೈಗರ್ ಶ್ರಾಫ್ ಕಾರಿನ ಮೇಲೆ ಫೈರಿಂಗ್ ಕೇಸ್‌ಗೆ ಟ್ವಿಸ್ಟ್ – ಅ.11ರಂದೇ ದಾಳಿಗೆ ಸಂಚು
Bigg Boss 13 1
ಬಿಗ್ ಬಾಸ್ ಮನೆಯಲ್ಲಿ ಲೂಟಿಕೋರರು Vs ರಕ್ಷಕರು
Rajanikanth sanju samson
`ಜೈಲರ್ 2′ ವೀಕ್ಷಣೆಗೆ ಇಡೀ ಥಿಯೇಟರ್ ಬುಕ್ ಮಾಡಿದ ಕ್ರಿಕೆಟಿಗ ಸಂಜು ಸ್ಯಾಮ್ಸನ್

You Might Also Like

North karnataka Dasara

ನವಮಿಯಲಿ ಆರದ ದೀಪ, ಎತ್ತರಕ್ಕೆ ಬೆಳೆದು ನಿಂತ ಸಸಿ – ಉ.ಕರ್ನಾಟಕದ ದಸರಾದ ಸಮೃದ್ಧಿಯ ಆಚರಣೆ

9 hours ago
BEDTI

ಬೇಡ್ತಿ – ಅಘನಾಶಿನಿ ಜೋಡಣೆ; ಬರಗಾಲ ಪೀಡಿತ ಜಿಲ್ಲೆಗಳಿಗೆ ನೀರು ಕೊಡಲು ಯಾಕಿಷ್ಟು ವಿರೋಧ?

9 hours ago
daily horoscope dina bhavishya 5

ದಿನ ಭವಿಷ್ಯ 21-10-2026

16 hours ago
WEATHER 1 e1679398614299 11

ರಾಜ್ಯದ ಹವಾಮಾನ ವರದಿ 21-10-2026

17 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
© Public TV. Design Company Knowtable. All Rights Reserved.
  • Privacy Policy
  • CSR-Policy
  • Terms of Service
  • POSH POLICY
  • Complaints Redressal
  • Terms and Conditions
  • Contact