Bengaluru CityDistrictsKarnatakaLatestLeading NewsMain Post

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ವಿರುದ್ಧ ಮತ್ತೆ ಹಲ್ಲೆ ಆರೋಪ

ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಮೇಲೆ ಮತ್ತೆ ಹಲ್ಲೆ ಆರೋಪವೊಂದು ಕೇಳಿಬಂದಿದೆ.

ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಅವರು ಈ ಆರೋಪ ಮಾಡಿದ್ದಾರೆ. ತಮ್ಮ ಮೇಲೆ ತಡರಾತ್ರಿ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಆ್ಯಂಡ್ ಟೀಂ ಹಲ್ಲೆ ನಡೆಸಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯವರಿಂದಲೇ ಹೆಚ್ಚು ಕೊರೊನಾ ನಿಯಮ ಉಲ್ಲಂಘನೆ : ಸಿದ್ದು

ಬುಧವಾರ ನಲಪಾಡ್ ಖಾಸಗಿ ಹೋಟೆಲ್ ನಲ್ಲಿ ಮಧ್ಯಾಹ್ನ ಗೆಟ್ ಟೂ ಗೆದರ್ ರೀತಿಯಲ್ಲಿ ಪೂರ್ವಭಾವಿ ಸಭೆ ಕರೆದಿದ್ದರು. ಆ ಕ್ಷಣದಲ್ಲಿ ನಾನು ಮುಂದಿನ ಅಧ್ಯಕ್ಷನಾಗಿ ಪ್ರಮಾಣವಚನ ತೆಗೆದುಕೊಳ್ಳುತ್ತೇನೆ ಎಂದು ಪ್ರಸ್ತಾಪಿಸಿದರು. ನಂತರ ರಾತ್ರಿ ಯಲಹಂಕದ ಒಂದು ಕ್ಲಬ್‍ನಲ್ಲಿ ಭೋಜನಕ್ಕೆ ಕರೆದಿದ್ದರು. ಈ ವೇಳೆ ನನ್ನನ್ನು ಹಾಗೂ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ್ ಗೌಡರವರನ್ನು ಸದಸ್ಯ ಎಂದು ತಿಳಿದು ಸಮಯ ನೋಡಿ, ಏನು ಲೇ ನೀವು ಮಂಜುಗೌಡಗೆ ಸಪೋರ್ಟ್ ಮಾಡುತ್ತೀರಾ ಎಂದು ಹಲ್ಲೆ ನಡೆಸಿರುವುದಾಗಿ ದೂರಿದ್ದಾರೆ.

ನಂತರ ಅವರ ಸ್ನೇಹಿತನ ಮೇಲೆ ಹಾಗೂ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಅಲ್ಲಿಂದ ಸಿದ್ದು ಹಳ್ಳೇಗೌಡ ಮತ್ತು ಮಂಜುಗೌಡ ಅವರು ವಾಹನವನ್ನು ಹಿಂಬಾಲಿಸಿ ಬಂದು ಅವರೆಲ್ಲರನ್ನು ಪ್ರಾಣಾಪಾಯದಿಂದ ಪಾರುಮಾಡಿ ಆ ಸ್ಥಳದಿಂದ ತಪ್ಪಿಸಿ ಕರೆದೊಯ್ದಿದೆ. ನಲಪಾಡ್ ಸ್ನೇಹಿತರಿಂದ ಮತ್ತು ಕುಟುಂಬ ಸದಸ್ಯರಿಂದ ನನಗೆ ಜೀವ ಬೆದರಿಕೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಜ.31ರ ವರೆಗೆ ಟಫ್ ರೂಲ್ಸ್ ಜಾರಿ

ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ನಲಪಾಡ್, ಹಲ್ಲೆ ವಿಚಾರವಾಗಿ ನನ್ನದೇನೂ ತಪ್ಪು ಇಲ್ಲ. ಹುಡುಗರು ಹುಡುಗರು ಏನೋ ಗಲಾಟೆ ಮಾಡಿಕೊಂಡಿರಬೇಕು. ನಾನು 9 ಗಂಟೆಗೆ ಅಲ್ಲಿಂದ ಹೊರಟು 9-30 ರಿಂದ 9-45 ರ ಸುಮಾರಿಗೆ ಮನೆಗೆ ಬಂದೆ. 11-30ಕ್ಕೆ ಮಲಗಿಕೊಂಡಿದ್ದೇನೆ. ಬೆಳಗ್ಗೆ 6 ಗಂಟೆ ವೇಳೆಗೆ ಈ ವಿಷಯ ನನಗೆ ಗೊತ್ತಾಗಿದೆ. ಬೆಳಗ್ಗೆ ಅವರೇ ಮತ್ತೆ ಮೆಸೇಜ್ ಹಾಕಿದ್ದಾರೆ. ನಲಪಾಡ್‍ದು ಏನೂ ತಪ್ಪು ಇಲ್ಲಾ ಅಂತ. ಇದರಲ್ಲಿ ನನ್ನ ಇನ್ವಾಲ್ ಮೆಂಟ್ ಏನೂ ಇಲ್ಲ ಎಮದು ಸ್ಪಷ್ಟಪಡಿಸಿದ್ದಾರೆ.

ಫೆಬ್ರವರಿಯಲ್ಲಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷನಾಗಿ ನೇಮಕವಾಗಲಿರುವ ನಲಪಾಡ್, ಅಧಿಕಾರ ಸ್ವೀಕರಿಸುವುದಕ್ಕೆ ಕೆಲವೇ ದಿನ ಇರುವಾಗ ಮತ್ತೊಂದು ಗಂಭೀರ ಆರೋಪದ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ಮಸೀದಿಯನ್ನು ಒಡೆದು ಹಾಕಿ ಎಂದ ಕಾಳಿ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು

Leave a Reply

Your email address will not be published.

Back to top button