CoronaDistrictsKarnatakaLatestLeading NewsMain PostMandya

ಮಂಡ್ಯದಲ್ಲಿ ಜ.31ರ ವರೆಗೆ ಟಫ್ ರೂಲ್ಸ್ ಜಾರಿ

ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಜಿಲ್ಲಾಡಳಿತ ಜನವರಿ 31ರ ವರೆಗೆ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ವಿಸ್ತರಣೆ ಮಾಡಿದ್ದು, ಮತ್ತಷ್ಟು ಟಫ್ ರೂಲ್ಸ್ ಗಳನ್ನು ಜಾರಿಗೆ ತಂದಿದೆ.

ದಿನೇ ದಿನೇ ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಜಿಲ್ಲಾದ್ಯಂತ 144 ಸೆಕ್ಷನ್ ವಿಸ್ತರಣೆಯಾಗಿದರ. ಹೀಗಾಗಿ ಜನವರಿ ಅಂತ್ಯದವರೆಗೂ ನಿಷೇಧಾಜ್ಞೆ ವಿಸ್ತರಿಸಿರುವುದಾಗಿ ಹಾಗೂ ವಿಕೇಂಡ್, ನೈಟ್ ಕರ್ಫ್ಯೂವನ್ನು ಮುಂದುವರಿಸುವುದಾಗಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ಆದೇಶ ಹೊರಡಿಸಿದ್ದಾರೆ.

ಈಗಾಗಲೇ ಈ ಟಫ್ ರೂಲ್ಸ್ ಕುರಿತು ಜಿಲ್ಲೆಯ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಜನರ ವಿರೋಧದ ನಡುವೆಯೂ ಕೊರೊನಾ ಹತೋಟಿಗೆ ತರಬೇಕೆಂಬ ಅನಿವಾರ್ಯತೆಯಿಂದ ಜನವರಿ 31ರ ವರೆಗೆ ಟಫ್ ರೂಲ್ಸ್ ನ್ನು ಮುಂದುವರಿಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಜರುಗುವ ಮದುವೆ, ನಿಶ್ಚಿತಾರ್ಥ, ಬೀಗರ ಔತಣಕ್ಕೆ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದರೆ, ಅಂತ್ಯಸಂಸ್ಕಾರ ಹಾಗೂ ತಿಥಿ ಕಾರ್ಯಕ್ಕೆ ಕೇವಲ 30 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಬಿಜೆಪಿಯವರಿಂದಲೇ ಹೆಚ್ಚು ಕೊರೊನಾ ನಿಯಮ ಉಲ್ಲಂಘನೆ : ಸಿದ್ದು

ದೇವರ ದರ್ಶನಕ್ಕೆ ಒಂದು ಸಮಯಕ್ಕೆ 50 ಜನರಿಗೆ ಅವಕಾಶವಿದ್ದು, ವಿಶೇಷ ದಿನ, ಸಾರ್ವತ್ರಿಕ ರಜಾ ದಿನಗಳಲ್ಲಿ ದೇವಾಲಯ, ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದಲ್ಲದೇ ಜಾತ್ರೆ, ದನದ ಜಾತ್ರೆ, ಗ್ರಾಮ ದೇವತೆ ಹಬ್ಬ, ಕೊಂಡೊತ್ಸವ, ಹಾಗೂ ಸಾಮೂಹಿಕ ಪ್ರಾರ್ಥನೆಗೂ ಅವಕಾಶ ಇಲ್ಲ. ಬೃಹತ್ ರ‍್ಯಾಲಿ, ಧರಣಿ, ಪ್ರತಿಭಟನೆಗಳನ್ನು ನಿಷೇಧ ಮಾಡಲಾಗಿದೆ. ಪಬ್, ಬಾರ್ & ರೆಸ್ಟೋರೆಂಟ್, ಹೋಟೆಲ್, ಚಿತ್ರಮಂದಿರ, ಸಭಾಂಗಣ, ರಂಗಮಂದಿರ, ಈಜುಕೊಳ ಹಾಗೂ ಜಿಮ್ ಕೇಂದ್ರಕ್ಕೆ 50% ಹಾಗೂ ಸ್ಪೋರ್ಟ್ಸ್, ಕ್ರೀಡಾಂಗಣ ಹಾಗೂ ಕಾಂಪ್ಲೆಕ್ಸ್ ಗೆ 50% ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಮಸೀದಿಯನ್ನು ಒಡೆದು ಹಾಕಿ ಎಂದ ಕಾಳಿ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು

ನೈಟ್ ಕರ್ಫ್ಯೂ ವೇಳೆ ರಾತ್ರಿ 10 ರಿಂದ ಬೆಳಗ್ಗೆ 5ರ ವರೆಗೆ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗ್ಗೆ 5 ರ ವರಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ವೀಕೆಂಡ್ ಕರ್ಫ್ಯೂ ವೇಳೆ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲಾ ಸೇವೆಗೆ ನಿರ್ಬಂಧವಿದ್ದು ಪ್ರವಾಸಿತಾಣಕ್ಕೆ ಪ್ರವಾಸಿಗರ ನಿಷೇಧ ವಿಧಿಸಲಾಗಿದೆ. ಅಂದು ಕೇವಲ ಆಹಾರ, ದಿನಸಿ ಅಂಗಡಿ, ಹಣ್ಣು ಮತ್ತು ತರಕಾರಿ ಅಂಗಡಿ, ಮೀನು ಮಾಂಸದ ಅಂಗಡಿ, ಹಾಲಿನ ಬೂತ್, ಬೀದಿ ಬೀದಿ ವ್ಯಾಪಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಹೋಟೆಲ್- ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದಂತೆ ಎಲ್ಲಾ ಸೇವೆಗಳಿಗೆ ನಿರ್ಬಂಧವಿದ್ದು, ಕೊರೊನಾ ನಿಯಮದ ಆದೇಶ ಉಲ್ಲಂಘಿಸಿದ್ರೆ ಕಾನೂನು ಕ್ರಮದ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರು ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published.

Back to top button