ಸಿಆರ್‌ಪಿಎಫ್ ನೇಮಕಾತಿ ಪರೀಕ್ಷೆ ಕನ್ನಡದಲ್ಲಿಯೂ ನಡೆಸುವಂತೆ ಸಿದ್ದರಾಮಯ್ಯ ಒತ್ತಾಯ

Public TV
3 Min Read
Siddaramaiah 2 3

ಬೆಂಗಳೂರು: ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ನೇಮಕಾತಿ (Recruitment) ಪರೀಕ್ಷೆಯನ್ನು ಕನ್ನಡದಲ್ಲಿ (Kannada) ನಡೆಸದೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಸುವ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೋಮವಾರ ವಿರೋಧಿಸಿದ್ದಾರೆ.

ಕೇಂದ್ರೀಯ ಮೀಸಲು ಪೊಲೀಸ್ ಪಡೆ ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ನಡೆಸುತ್ತಿದ್ದು, ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯನವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ತಮ್ಮ ಟ್ವಿಟ್ಟರ್ (Twitter) ಖಾತೆಯಲ್ಲಿ ಸರಣಿ ಟ್ವೀಟ್ (Tweet) ಮಾಡಿದ್ದಾರೆ. ಇದನ್ನೂ ಓದಿ: ಆಪ್‌ಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡಿದ ಚುನಾವಣಾ ಆಯೋಗ 

ಇದರಿಂದಾಗಿ ಕರ್ನಾಟಕದಂತಹ (Karnataka) ಹಿಂದಿಯೇತರ ರಾಜ್ಯಗಳ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಬಿಜೆಪಿಯ (BJP) ಡಬಲ್ ಎಂಜಿನ್ ಸರ್ಕಾರವು ರಾಜ್ಯದ ಆಕಾಂಕ್ಷಿಗಳನ್ನು ವಿಫಲಗೊಳಿಸಿದೆ ಎಂದು ಹೇಳಿದರು. ಸಿಆರ್‌ಪಿಎಫ್ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಲು ಕೂಡಲೇ ಅವಕಾಶ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಒತ್ತಾಯಿಸುತ್ತೇನೆ. ಹಿಂದಿಯೇತರ ರಾಜ್ಯಗಳ ಅಭ್ಯರ್ಥಿಗಳಿಗೆ ಸಹಾಯ ಮಾಡಲು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯುವ ನಿಯಮವನ್ನು ಸಡಿಲಗೊಳಿಸುವುದು ಮುಖ್ಯ ಎಂದು ಟ್ವಿಟ್ಟರ್ ಮೂಲಕ ಮೋದಿಯವರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೋದಿ ನಮಗೆ ಹಣ ಕೊಟ್ಟಿಲ್ಲ, ಸ್ಟಾಲಿನ್ 1 ಲಕ್ಷ ಚೆಕ್ ಕೊಟ್ಟಿದ್ದಾರೆ: ಬೊಮ್ಮನ್ 

ಭಾಷೆ ಜ್ಞಾನವನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಅದು ಕೇವಲ ಸಂವಹನ ಮಾಧ್ಯಮವಾಗಿದೆ. ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಗಳು ಬುದ್ಧಿವಂತರಾಗಿದ್ದರೂ, ಭಾಷೆಯ ಅಡಚಣೆಯಿಂದ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮ್ಮ ಯುವಕರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನೂರು ಕೋಟಿ ಕ್ಲಬ್ ಸೇರಿದ ಚುನಾವಣೆ ಅಕ್ರಮ- ಹಣಕ್ಕಿಂತ ಕುಕ್ಕರ್, ತವಾಗಳದ್ದೇ ಮೇಲುಗೈ 

ರಾಜ್ಯ ಬಿಜೆಪಿ ಸರ್ಕಾರದ ಶೇ.40ರಷ್ಟು ಭ್ರಷ್ಟಾಚಾರ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ಭಾಷಾ ನೀತಿಯಿಂದ ನಮ್ಮ ಯುವಕರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ನಿರುದ್ಯೋಗ (Unemployment) ಪ್ರಮಾಣ ಹೆಚ್ಚಿದ್ದು, ಯುವಕರ ಭವಿಷ್ಯ ನಾಶವಾಗಿದೆ. ಡಬಲ್ ಎಂಜಿನ್ ಸರ್ಕಾರ ನಮ್ಮ ಅಭ್ಯರ್ಥಿಗಳನ್ನು ವಿಫಲಗೊಳಿಸಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್‌ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು! 

ಸಿಆರ್‌ಪಿಎಫ್ ನೇಮಕಾತಿ ಕಂಪ್ಯೂಟರ್ ಪರೀಕ್ಷೆಯಲ್ಲಿ ತಮಿಳು (Tamil) ಭಾಷೆಯನ್ನು ಸೇರಿಸದಿರುವುದನ್ನು ವಿರೋಧಿಸಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (M.K.Stalin) ಕೂಡ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ನಂದಿನಿ ಬೇಕು; ಅಮುಲ್ ಬೇಡ- ಕನ್ನಡ ಪರ ಸಂಘಟನೆಗಳಿಂದ ಭುಗಿಲೆದ್ದ ಆಕ್ರೋಶ

Share This Article