ಬೆಂಗಳೂರು: ಕರ್ನಾಟಕದಲ್ಲಿ ನಂದಿನಿ ಉಳಿಸಿ (#SaveNandini) ಅಭಿಯಾನ ಜೋರಾಗುತ್ತಿದೆ. ಇದರ ಮಧ್ಯೆ ಅಮುಲ್ (Amul) ಆನ್‍ಲೈನ್‍ನಲ್ಲಿ ವಿಸ್ತರಣೆಗೊಳ್ಳುತ್ತಿದೆ. ಅತ್ತ ಕೆಎಂಎಫ್ (KMF)- ಅಮುಲ್ ಹೆಸರಲ್ಲಿ ಮತ್ತೆ ರಾಜಕೀಯ ಜಟಾಪಟಿ ಜೋರಾಗುತ್ತಿದೆ.
Advertisement
ಬೆಂಗಳೂರಲ್ಲಿ ಅಮುಲ್ ವಿರುದ್ಧ ಧಿಕ್ಕಾರದ ಕೂಗು ಮೊಳಗಿದೆ. ಅಮುಲ್ ಉತ್ಪನ್ನ ವಿರೋಧಿಸಿ ಕನ್ನಡ ಪರ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದವು. ಅಮುಲ್ ಚೀಸ್, ಅಮುಲ್ ಬೆಣ್ಣೆ, ತುಪ್ಪ ಹೀಗೆ ಅಮುಲ್ ಪ್ರಾಡಕ್ಟ್ ಗಳನ್ನು ನೆಲಕ್ಕೆಸೆದು ಆಕ್ರೋಶ ಹೊರಹಾಕಿದ್ರು. ಮಗದೊಂದು ಕಡೆಗೆ ಅಮುಲ್ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ರು. ಇದನ್ನೂ ಓದಿ: ಅಮುಲ್‍ಗೆ ವಿರೋಧ – ನಂದಿನಿ ಉತ್ಪನ್ನ ಖರೀದಿಸಿ ಹಂಚಿದ ಡಿಕೆಶಿ
Advertisement
Advertisement
ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ (Mysuru Bank Circle) ನಲ್ಲಿ ಕರವೇ ನಾರಾಯಣಗೌಡ ಬಣ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಅಮುಲ್ ಉತ್ಪನ್ನ ಆನ್‍ಲೈನ್ ಮಾರಾಟ ಖಂಡಿಸಿದೆ. ಶೀಘ್ರದಲ್ಲಿಯೇ ಅಮುಲ್ ಫ್ಯಾಕ್ಟರಿ, ಅಮುಲ್ ಹಾಲಿನ ಮಾರಾಟ ಘಟಕಕ್ಕೆ ದಾಳಿ ಮಾಡೋದಾಗಿ ಕನ್ನಡ ಪರ ಸಂಘಟನೆ ಎಚ್ಚರಿಕೆ ನೀಡಿದೆ.
Advertisement
ನಂದಿನಿ (Nandini) ಯನ್ನು ಮುಚ್ಚುವ ಹುನ್ನಾರ.. ರಾಜಕೀಯ ಷಡ್ಯಂತ್ರ ಅಂತಾ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು. ಕೊನೆಗೆ ಅಮುಲ್ ಹೆಸರು ಬೋರ್ಡ್ ಇರುವ ಪ್ರತಿಕೃತಿ ದಹನಕ್ಕೆ ಮುಂದಾದಾಗ ಪೊಲೀಸರು ಪ್ರತಿಭಟನೆಕಾರರನ್ನು ವಶಕ್ಕೆ ಪಡೆದುಕೊಂಡ್ರು. ಇದನ್ನೂ ಓದಿ: ಬೆಂಗಳೂರು ಮಾರುಕಟ್ಟೆಗೆ ಅಮುಲ್ – ನಂದಿನಿ ಉಳಿಸಲು ಕನ್ನಡಿಗರಿಂದ #SaveNandini ಅಭಿಯಾನ
ಹೆಚ್‍ಡಿಕೆ ವ್ಯಂಗ್ಯ: ಬಿಜೆಪಿ ಅವರಿಗೆ ಅಮುಲ್ ಪರಿಣಾಮದ ಮಾಹಿತಿ ಇಲ್ಲ. ಬಿಜೆಪಿ ಅವರ ಕಣ್ಣಿಗೆ ಮೋದಿ ಬಿಟ್ಟರೆ ಏನೂ ಕಾಣಲ್ಲ ಅಂತ ಹೆಚ್‍ಡಿಕೆ (HD Kumaraswamy) ಟೀಕಿಸಿದ್ದಾರೆ. ಈ ವಿಚಾರದಲ್ಲಿ ಎಚ್ಚರಿಕೆಯಿಂದ ತೀರ್ಮಾನ ತೆಗೆದುಕೊಳ್ಳದೆ ಇದ್ರೆ ನಂದಿನಿ ಮುಳುಗಿಸುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಅತ್ತ ಸಿಎಂ ಬೊಮ್ಮಾಯಿ (Basavaraj Bommai) ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಂದಿನಿ ಬ್ರಾಂಡ್ ನಂಬರ್ 1 ಆಗಿಸಲು ನಮ್ಮ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ನಂದಿನಿ ಮಾರುಕಟ್ಟೆ ವ್ಯಾಪ್ತಿ ವಿಶಾಲವಾಗಿದ್ದು, ಅಮೂಲ್ ಬಗ್ಗೆ ಯಾವುದೇ ಭಯ ಬೇಡ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಒಟ್ಟಿನಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಅಮುಲ್ ಕಿಡಿ ಜ್ವಾಲೆಯಾಗಿ ಹಬ್ಬಿದೆ. ಕನ್ನಡಿಗರ ಆಕ್ರೋಶ ಸ್ಫೋಟಗೊಂಡಿದೆ. ನಂದಿನಿ ಉಳಿಸಿ ಅಮುಲ್ ತೊಲಗಿಸಿ ಕ್ಯಾಂಪೇನ್ ಜೋರಾಗಿ ಸದ್ದು ಮಾಡುತ್ತಿದೆ.