-ಡಿಜಿಟಲೀಕರಣಕ್ಕೆ ಮೂಲ ರಾಜೀವ್ ಗಾಂಧಿ
-ಇಂದಿರಾಗಾಂಧಿ ಉಕ್ಕಿನ ಮಹಿಳೆ, ಪಟೇಲ್ ಉಕ್ಕಿನ ಮನುಷ್ಯ
-ಇಂದಿರಾಗಾಂಧಿ ಜನರ ಮನಸ್ಸಿನಲ್ಲಿ ದೇವರಾಗಿಬಿಟ್ರು
-ಬಿಜೆಪಿಯಲ್ಲಿ ಹುತಾತ್ಮರೇ ಇಲ್ಲ
ಬೆಂಗಳೂರು: ಮೋದಿ ಪ್ರಧಾನಿ ಆಗಲು ಕಾಂಗ್ರೆಸ್ ಕಾರಣ. ದೇಶಕ್ಕೆ ಸ್ವತಂತ್ರ ಬರಲು ಕಾಂಗ್ರೆಸ್ ಕಾರಣ. ಸ್ವತಂತ್ರ ಬಂದಿದಕ್ಕೆ ಮೋದಿ ಪ್ರಧಾನಿಯಾಗಿದ್ದು, ದೇಶದಲ್ಲಿ ಡಿಜಿಟಲ್ ವ್ಯವಸ್ಥೆ ಆರಂಭಕ್ಕೆ ಮೂಲ ರಾಜೀವ್ ಗಾಂಧಿ, ಇಂದು ನಾವೆಲ್ಲ ಫೋನ್‍ನಲ್ಲಿ ಮಾತನಾಡುತ್ತಿರುವುದಕ್ಕೆ ಪ್ರಮುಖ ಕಾರಣ ಅವರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
Advertisement
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಇಂದಿರಾಗಾಂಧಿ ಹುತಾತ್ಮರಾದ ದಿನ. ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ. ಇಂದಿರಾ ಗಾಂಧಿ ಉಕ್ಕಿನ ಮಹಿಳೆಯಾದರೆ, ಪಟೇಲ್ ಉಕ್ಕಿನ ಮನುಷ್ಯ ಎಂದು ನುಡಿದರು. ಇದನ್ನೂ ಓದಿ: ಒಂದು ದಿನ ಬದುಕಿದ್ರೂ ಅಪ್ಪು ತರ ಬದುಕ್ಬೇಕು: ಸಾಧು ಕೋಕಿಲ
Advertisement
Advertisement
ಇಂದಿರಾ ಗಾಂಧಿ 16 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದರು. ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಬಾಲ್ಯದಿಂದಲೂ ದೇಶ ಭಕ್ತಿ ಬೆಳೆಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಜೊತೆಯೇ ಇಂದಿರಾ ಗಾಂಧಿ ಬೆಳೆದಿದ್ದರು. 1,969 ಇಂಡಿಕೇಟ್, ಸಿಂಡಿಕೇಟ್ ಅಂತ ಕಾಂಗ್ರೆಸ್ ಇಬ್ಭಾಗವಾಯ್ತು. ಇಂದಿರಾಗಾಂಧಿ ಇಂಡಿಕೇಟ್ ಕಾಂಗ್ರೆಸ್ ಮುಖ್ಯಸ್ಥರಾದರು. ಅಲ್ಲಿಂದ ಬಹಳ ಆದರ್ಶ ರೀತಿಯಲ್ಲಿ ದೇಶವನ್ನು ಮುನ್ನಡೆಸಿದ್ದಾರೆ. ಬಡತನ ತೊಲಗಿಸಲು ಇಚ್ಚಾಶಕ್ತಿ ಹೊಂದಿದ್ದರು. ಈ ಹೊತ್ತಿಗಾಗಲೇ ಅಸಮಾನತೆ ದೇಶದಲ್ಲಿ ಶತ ಶತಮಾನದಿಂದ ಬೆಳೆದುಕೊಂಡು ಬಂದಿತ್ತು. ಆರ್ಥಿಕ ಅಸಮಾನತೆ ಹೋಗಲಾಡಿಸಲು 20 ಅಂಶಗಳ ಕಾರ್ಯಕ್ರಮ ತಂದರು. ಗರೀಬಿ ಹಠಾವೋ ಜಾರಿ ಮಾಡಿದ್ರು, ರೈತರು, ಮಹಿಳೆಯರಿಗೆ ಅನೇಕ ಕಾರ್ಯಕ್ರಮ ಜಾರಿ ಮಾಡಿದ್ದರು. ಉಳುವವನೆ ಭೂಮಿ ಒಡೆಯ ಕಾಯ್ದೆ ಪ್ರಮಾಣಿಕವಾಗಿ ಜಾರಿ ಮಾಡಿದ್ದರು. ಬ್ಯಾಂಕ್ ರಾಷ್ಟ್ರೀಕರಣ ಮಾಡಿದ್ರು. ಮೊದಲು ಶ್ರೀಮಂತರಿಗೆ ಮಾತ್ರ ಬ್ಯಾಂಕ್ ಅಕೌಂಟ್, ಸಾಲ, ಡಿಪಾಸಿಟ್ ಅವಕಾಶ ಇತ್ತು. ಬ್ಯಾಂಕ್ ರಾಷ್ಟ್ರೀಕರಣ ಮಾಡಿದ ಮೇಲೆ ಬಡವರಿಗೆ ಸೌಲಭ್ಯಗಳು ಸಿಕ್ಕಿತ್ತು. ಇದರಿಂದ ಅವರು ಎಷ್ಟು ಹೆಸರುವಾಸಿಯಾದರು ಎಂದರೆ ಜನರ ಮನಸ್ಸಿನಲ್ಲಿ ದೇವರಾಗಿಬಿಟ್ಟರು ಎಂದರು.
Advertisement
ಬಿಜೆಪಿ ನಾಯಕರು ರಾಜಕಾರಣ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ಸೋಲಿಸಿದ್ರು ಅಂತಾ ದಲಿತರನ್ನು ಎತ್ತಿಕಟ್ತಾರೆ. ನರೇಂದ್ರ ಮೋದಿ ಆಗ ಹುಟ್ಟಿರಲಿಲ್ಲ. ದೇಶ ರಕ್ಷಣೆ ಮಾಡೋದು ನಾವೇ ಅಂತಾ ಬಿಂಬಿಸಿಕೊಳ್ಳುತ್ತಿದ್ದಾರೆ. ಒಬ್ಬರೂ ದೇಶಕ್ಕೋಸ್ಕರ ಸತ್ತಿಲ್ಲ, ಬಿಜೆಪಿಯಲ್ಲಿ ಹುತಾತ್ಮರೇ ಇಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲ್ ವಿಚಾರದಲ್ಲೂ ರಾಜಕೀಯ ಮಾಡ್ತಾರೆ. ಆಗ ದೇಶ ಕಟ್ಟಲು ಎಷ್ಟೋ ಕಾಂಗ್ರೆಸ್ ನಾಯಕರು ಆಸ್ತಿಪಾಸ್ತಿ ಕಳೆದುಕೊಂಡ್ರು ಪ್ರಾಣ ತ್ಯಾಗ ಮಾಡಿದರು. 60 ವರ್ಷ ಏನ್ ಮಾಡಿದ್ದಾರೆ ಅಂತಾ ಮೋದಿ ಕೇಳ್ತಾರಲ್ಲಾ? ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ನೀವೆಲ್ಲಾ ಹೆಮ್ಮೆ ಪಡಬೇಕು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ದನ್ನೂ ಓದಿ: ನನಗೆ ಇಂಡಸ್ಟ್ರಿಯಲ್ಲಿ ಮೊದಲು ಕರೆ ಮಾಡಿದ ಸ್ಟಾರ್ ನಟ ಪುನೀತ್: ವಸಿಷ್ಠ ಸಿಂಹ
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ಉಮಾಶ್ರೀ, ರಾಣಿ ಸತೀಶ್ ಭಾಗಿಯಾಗಿದ್ದರು. ಇದನ್ನೂ ಓದಿ: ರತ್ನನ್ ಪ್ರಪಂಚ ನೋಡಿ ಕರೆ ಮಾಡಿದ್ರು: ಡಾಲಿ ಧನಂಜಯ್