ಬಾಗಲಕೋಟೆ: ಪಾಪ, ಅವರಿಗೆ ದುಡ್ಡು ವಾಪಸ್ ಕೊಟ್ಟು ಕಳಿಸಿದ್ದೀವಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪರಿಹಾರ ಹಣವನ್ನು ಮಹಿಳೆ ಎಸೆದ ಪ್ರಕರಣ ಕುರಿತು ಮಾತನಾಡಿದ ಅವರು, ಪಾಪ, ಅವರಿಗೆ ದುಡ್ಡು ವಾಪಸ್ ಕೊಟ್ಟು ಕಳಿಸಿದ್ದೀವಿ. ನೀವು ಪುನಃ ಹಣ ವಾಪಸ್ ಕೊಟ್ಟದ್ದು ಹೇಳೋದಿಲ್ಲ. ನಾವು ಮಾನವೀಯತೆ ದೃಷ್ಟಿಯಿಂದ ಕೊಟ್ಟಿದ್ದೇವೆ. ಅವರ ಕಷ್ಟಕ್ಕೆಲ್ಲಾ ಆಗುತ್ತೆ ಅಂತ ಅಲ್ಲ ಎಂದು ವಿವರಿಸಿದರು.
Advertisement
Advertisement
ಏನಾದ್ರೂ ಆದಾಗ ಸರ್ಕಾರದಿಂದ 1 ಲಕ್ಷ, 2 ಲಕ್ಷ ಪರಿಹಾರ ಕೊಡ್ತೀವಿ. ಸತ್ತವರಿಗೂ ಪರಿಹಾರ ಕೊಟ್ಟಿದ್ದೇವೆ. ಸತ್ತೋದವರು ವಾಪಸ್ ಬರುತ್ತಾರಾ? ಮಾನವೀಯತೆಯಿಂದ ಪರಿಹಾರ ನೀಡಿದ್ದು ಇದೆ. ಕಷ್ಟದಲ್ಲಿರೋರಿಗೆ ಅನುಕೂಲ ಆಗಲಿ ಅಂತ ಮಾಡಿದ್ದೀವಿ ಎಂದು ಹೇಳಿದರು. ಇದನ್ನೂ ಓದಿ: ನಮ್ಗೆ ನ್ಯಾಯ ಬೇಕು, ದುಡ್ಡು ಬೇಡ – ಸಿದ್ದು ಕೊಟ್ಟ 2 ಲಕ್ಷ ರೂ. ಎಸೆದ ಮುಸ್ಲಿಂ ಮಹಿಳೆ
Advertisement
ನನ್ನ ಪ್ರಕಾರ ಪರಿಹಾರ ಧನ ಒಪ್ಪಿಕೊಳ್ತಾರೆ ಅಂದುಕೊಂಡಿದ್ದೀನಿ. ಅವರಿಗೂ ಕೊಟ್ಟಿದ್ದೀನಿ, ಇನ್ನೊಬ್ಬ ಗಾಯಗೊಂಡ ಗೋಪಾಲನಿಗೆ ಕೊಟ್ಟಿದ್ದೇನೆ. ಎರಡೂ ಕಡೆ ಆಸ್ಪತ್ರೆಗೆ ಹೋಗಿ ಬಂದಿದ್ದೀನಿ ಎಂದರು.
Advertisement
ಕೆರೂರ ಘಟನೆಗೆ ಸಿಎಂ ಬೊಮ್ಮಾಯಿ ವೈಯುಕ್ತಿಕ ಕಾರಣ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟ ಅವರು, ಯಾರು ಕೂಡಾ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಉರಿಯುವುದರ ಮೇಲೆ ಉಪ್ಪು ಸುರಿಯುವ ಕೆಲಸ ಮಾಡಬಾರದು. ನಾವೆಲ್ಲ ಜನಪ್ರತಿನಿಧಿಗಳು ಇರೋದು ಯಾಕೆ? ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುವುದಕ್ಕೆ. ಕೆರೂರನಂತಹ ಘಟನೆ ನಡೆಯಬಾರದು. ಕುಳಗೇರಿಯಲ್ಲಿ ಈ ಘಟನೆ ನಡೆಯಬಾರದಿತ್ತು. ಹಲ್ಲೆಗೆ ಒಳಗಾದವರೆಲ್ಲ ಪಾಪ ಬಡವರು ಇದ್ದಾರೆ ಎಂದು ಮರುಕ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೆರೂರ ಘರ್ಷಣೆ – ಸಿದ್ದರಾಮಯ್ಯ ಭೇಟಿಯನ್ನು ನಿರಾಕರಿಸಿದ ಹಿಂದೂ ಸಂಘಟನೆಯ ಗಾಯಾಳುಗಳು