ಬೆಳಗಾವಿ: ರಾಜ್ಯಕ್ಕೆ ಅಮಿತ್ ಶಾ (Amit Shah) ಬರುತ್ತಾರೆ ಎಂದು ಬಿಜೆಪಿ (BJP) ಸರ್ಕಾರ ಸದನವನ್ನು (Session) ನಿಲ್ಲಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಲುಮೆ ಕೇಸ್ ಚರ್ಚೆಗೆ ಮಾಡಲಿಲ್ಲವೆಂಬ ವಿಚಾರವಾಗಿ ಪ್ರತಿಕ್ರಿಯಿಸಿದರು. ಇನ್ನೊಂದು ವಾರ ಸದನ ಮಾಡೋಕೆ ಹೇಳಿ ಅಮಿತ್ ಶಾ ಬರುತ್ತಾನೆ ಎಂದು ಬಿಜೆಪಿ ನಾಯಕರು ಹೋಗ್ತಾರೆ. ಅವರು ಬಂದ್ರು ಅಂದ್ರೆ ಸದನ ಮಾಡೋಕೇನು?. ನಾನು ವಿಜಯಪುರ ಸಮಾವೇಶಕ್ಕೆ ಹೋಗ್ತೇನೋ ಬಿಡ್ತೇನೋ? ಆದರೆ ಇವರು ಅಮಿತ್ ಶಾ ಬರ್ತಾನೆ ಅಂತ ನಿಲ್ಲಿಸಿದ್ರೆ ಹೇಗೆ? ಎಂದು ಬಿಜೆಪಿ ಸರ್ಕಾರ ವಿರುದ್ಧ ಕಿಡಿಕಾರಿದರು.
Advertisement
Advertisement
ನಾವು ಅಖಂಡ ಕರ್ನಾಟಕದ ಚರ್ಚೆ ಮಾತನಾಡಿದ್ದೆವು. ಉತ್ತರ ಕರ್ನಾಟಕ ಬಗ್ಗೆ ಬಹಳ ಮಾತನಾಡುವುದಿತ್ತು. ಆದರೆ ಬೆಳಗಾವಿ ಸುವರ್ಣಸೌಧದಲ್ಲಿ ಉತ್ತಕರ್ನಾಟಕ ಭಾಗದ ಚರ್ಚೆಗೆ ಅವಕಾಶವಿಲ್ಲ. ಕಬ್ಬುಬೆಳೆಗಾರರು, ಭತ್ತ ಬೆಳೆಗಾರರ ಬಗ್ಗೆ ಚರ್ಚೆಯಾಗಬೇಕೆಂದು ಸ್ಪೀಕರ್ ಹೇಳಿದರು. ಆದರೂ ಸರ್ಕಾರ ಇದಕ್ಕೆ ಅವಕಾಶ ಮಾಡಿ ಕೊಡಲಿಲ್ಲ. ಯಾವ ಭಾಗದ ರೈತರೇ ಆಗಲಿ ರೈತರೆ ಅದಕ್ಕೋಸ್ಕರ ನಿನ್ನೆ ಅದರ ಚರ್ಚೆ ಮಾಡಿದ್ದು ರೈತರಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಲಿ ಸರ್ಕಾರ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಜನವರಿ 1ರ ನಸುಕಿನ ಜಾವ 2 ಗಂಟೆವರೆಗೂ ನಮ್ಮ ಮೆಟ್ರೋ ಸಂಚರಿಸಲಿದೆ: BMRCL
Advertisement
Advertisement
ಬಿಜೆಪಿ ಶಾಸಕ ಎ.ಎಸ್ ನಡಹಳ್ಳಿ ಅವರು ಸರ್ಕಾರದ ಬಗ್ಗೆ ಮಾತನಾಡಲಿ. ಇವರು ನೋಟಿಫಿಕೇಶನ್ ಮಾಡಿಸೋಕೆ ಏನಾಗಿತ್ತು? ಬರೀ ಭಾಷಣ ಮಾಡಿದ್ರೆ ಸಾಕೇ? ಅದಕ್ಕೆ ನಾವು ವಿಜಯಪುರದಲ್ಲಿ ಕಾರ್ಯಕ್ರಮ ಮಾಡ್ತಿದ್ದೇವೆ. ಅಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಏನೇನು ಫೇಲಾಗಿದೆ ಎಲ್ಲವನ್ನು ಹೇಳುತ್ತೇಮೆ ರೈತರಿಗೆ ಒಂದೂವರೆ ಲಕ್ಷ ಕೋಟಿ ಹಣ ಕೊಡಬೇಕಿತ್ತು ಸರ್ಕಾರ ಎಂದು ಗುಡುಗಿದರು. ಇದನ್ನೂ ಓದಿ: ಮಂತ್ರಾಲಯ ರಾಯರ ಮಠದಲ್ಲಿ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯ- 3.30 ಕೋಟಿ ರೂ.ಸಂಗ್ರಹ