– ಜೆಡಿಎಸ್ ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಹೋಗುವ ಪಕ್ಷ
– ಸಿ.ಟಿ.ರವಿ ಆರ್‌ಎಸ್‌ಎಸ್‌ನಲ್ಲಿ ಟ್ರೈನಿಂಗ್ ಆಗಿರುವ ಗಿರಾಕಿ
– ಸಿ.ಟಿ.ರವಿ ಆರ್‌ಎಸ್‌ಎಸ್‌ನಲ್ಲಿ ಟ್ರೈನಿಂಗ್ ಆಗಿರುವ ಗಿರಾಕಿ
ಚಿಕ್ಕಮಗಳೂರು: ನಮ್ಮಪ್ಪ ನನಗೆ ಸಿದ್ರಾಮಯ್ಯ ಅಂತ ಹೆಸರಿಟ್ಟಿಲ್ವಾ. ಸಿದ್ರಾಮುಲ್ಲಾ ಅನ್ನೋಕೆ ಇವನ್ಯಾರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಶಾಸಕ ಸಿ.ಟಿ.ರವಿ (C.T Ravi) ವಿರುದ್ಧ ಕಿಡಿಕಾರಿದರು.
Advertisement
ನಗರದ ಆಶ್ರಯ ಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್ (Congress) ವತಿಯಿಂದ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆಯನ್ನು (Praja Dhwani Yatra) ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಧ್ವನಿ ಎಂದರೆ ನಮ್ಮ ಧ್ವನಿಯಲ್ಲ. ನಿಮ್ಮ ಧ್ವನಿ, ರಾಜ್ಯದ ಜನರ ಧ್ವನಿ. ಬಿಜೆಪಿ ಕೋಮುವಾದದಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವ ಮೂಲಕ, ಜನರ ಭಾವನೆಗಳನ್ನು ಕೆರಳಿಸಿ ಜಾತಿಯ ಅಫೀಮು ಕೊಟ್ಟು ಧರ್ಮಾಂಧರನ್ನಾಗಿ ಮಾಡುವ ಪಕ್ಷ ಬಿಜೆಪಿ (BJP) ಸಿ.ಟಿ.ರವಿ ಆರ್‌ಎಸ್‌ಎಸ್‌ನಲ್ಲಿ (RSS) ಟ್ರೈನಿಂಗ್ ಆಗಿರುವ ಗಿರಾಕಿ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಈವರೆಗೂ ನಾನು ತಟಸ್ಥವಾಗಿದ್ದೇನೆ, ಸ್ಪರ್ಧೆ ಬಗ್ಗೆ ಮುಂದೆ ತೀರ್ಮಾನ: ಸುಮಲತಾ
Advertisement
Advertisement
ಜೆಡಿಎಸ್ (JDS) ಪಕ್ಷ ಸಿದ್ಧಾಂತಗಳಿಗೆ ಬದ್ಧವಾಗಿರುವ ಪಕ್ಷವಲ್ಲ. ಅಧಿಕಾರಕ್ಕಾಗಿ ಯಾವ ಪಕ್ಷದ ಜೊತೆಗೆ ಬೇಕಾದರೂ ಹೋಗುತ್ತಾರೆ. ಆದರೆ, ಕಾಂಗ್ರೆಸ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡ ಪಕ್ಷ. ಕೋಮುವಾದದೊಂದಿಗೆ ರಾಜಿ ಮಾಡಿಕೊಳ್ಳದ ಏಕೈಕ ಪಕ್ಷ ನಮ್ಮದು. ಆರ್‌ಎಸ್‌ಎಸ್‌ನವರು ಸಂವಿಧಾನ ವಿರೋಧಿಗಳು. ಚಿಂತನ ಗಂಗಾ ಪುಸ್ತಕ ಬರೆದ ಗೋಳ್ವಾಕರ್ ಆ ಸಂಘಟನೆಯವರು. ಅಂತಹ ಸಂಘಟನೆ ಗರಡಿಯಲ್ಲಿ ಬೆಳೆದಿರುವ ಸಿ.ಟಿ ರವಿಗೆ ಸಂವಿಧಾನ ಹೇಗೆ ಅರ್ಥವಾಗುತ್ತದೆ ಎಂದು ಪ್ರಶ್ನಿಸಿದರು.
Advertisement
ಸಾವರ್ಕರ್‌ರನ್ನು ಪೂಜಿಸುವ ಮತ್ತು ಮಹಾತ್ಮ ಗಾಂಧೀಜಿಯವರನ್ನು ಕೊಂದ ಗೂಡ್ಸೆ ಪೂಜಿಸುವವರಿಗೆ ಜಾತ್ಯಾತೀತ ತತ್ವ, ಪ್ರಜಾಪ್ರಭುತ್ವ ತತ್ವ, ಸಂವಿಧಾನದ ಮೇಲೆ ಗೌರವ ಇರಲು ಸಾಧ್ಯವಿಲ್ಲ. ಆದ್ದರಿಂದ ಸಿ.ಟಿ.ರವಿ ಅಫೀಮು ಕುಡಿದವರ ತರ ಮಾತನಾಡುತ್ತಾರೆ. ಸಿ.ಟಿ ರವಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ. ಅವರು ರಾಜಕೀಯದಲ್ಲಿ ಇರಲು ಯೋಗ್ಯರಲ್ಲ. ನಾನು 12 ವರ್ಷ ಹಣಕಾಸು ಮಂತ್ರಿಯಾಗಿ, 13 ಬಜೆಟ್‍ಗಳನ್ನು ಮಂಡಿಸಿದ್ದೇನೆ. ಯಾರಾರದೂ ಒಬ್ಬರು ಸಿದ್ದರಾಮಯ್ಯ ಎನ್‍ಓಸಿಗೆ ಐದು ಪೈಸೆ ದುಡ್ಡು ತೆಗೆದುಕೊಂಡಿದ್ದೇನೆ ಎಂದು ಹೇಳಿದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಸಾಕ್ಷ್ಯಚಿತ್ರ ಭಾರತದಲ್ಲಿ ಬ್ಯಾನ್ – ಬಿಬಿಸಿ ವಿರುದ್ಧ 302 ಅಧಿಕಾರಿಗಳು ಆಕ್ರೋಶ
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಮಾತನಾಡಿ, ವಿಧಾನಸಭೆ ಗೋಡೆಗಳನ್ನು ಮುಟ್ಟಿದರೆ ದುಡ್ಡು ದುಡ್ಡು ಎನ್ನುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು. ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಮಾತನಾಡಿ, ಸಿ.ಟಿ ರವಿ ಮಾತೆತ್ತಿದರೆ ಇಂದಿರಾಗಾಂಧಿ, ಸೋನಿಯಾಗಾಂಧಿ, ರಾಹುಲ್‍ಗಾಂಧಿಯವರ ಬಗ್ಗೆ ಮಾತನಾಡುತ್ತಾರೆ. ಸೋನಿಯಾಗಾಂಧಿಯವರು ತಮ್ಮ ಕುಟುಂಬದಲ್ಲಿ ಕಷ್ಟನಷ್ಟವನ್ನು ಅನುಭವಿಸಿದ ಮಹಿಳೆ. ಅವರು ದೇಶದ ಸಂಸ್ಕೃತಿಗೆ ಪ್ರತೀಕವಾದ ಮಹಿಳೆಯಾಗಿದ್ದು, ಅವರ ವಿರುದ್ಧ ಮಾತನಾಡುವ ಮನುಷ್ಯ ಈ ನೆಲದಲ್ಲಿ ಹುಟ್ಟಿರುವುದು ನಂಬಲು ಸಾಧ್ಯವಿಲ್ಲ. ಈ ಜಿಲ್ಲೆ ಭಾವೈಕ್ಯತೆಯ ಜಿಲ್ಲೆ. ಇಲ್ಲಿ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಇದ್ದು ದೇಶದಲ್ಲೇ ಸಾಮರಸ್ಯದ ಸಂಕೇತವಾಗಿದ್ದು, ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಇಲ್ಲಿನ ಶಾಸಕ ಸಿ.ಟಿ. ರವಿ ಮಾಡುತ್ತಿದ್ದಾರೆ. ಇಲ್ಲಿನ ರಸ್ತೆಗಳೆಲ್ಲ ಡಾಂಬರ್ ಕಿತ್ತು ಬಂದಿದ್ದು, ರಸ್ತೆಗಳಲ್ಲಿ ಶೇ.40 ಕಮಿಷನ್ ಹೊಡೆಯುತ್ತಿದ್ದಾರೋ ಅಥವಾ ಹಳೇ ಕಲ್ಲಿಗೆ ಹೊಸ ಬಿಲ್ ಮಾಡುತ್ತಿದ್ದಾರೋ ಎಂದು ವ್ಯಂಗ್ಯವಾಡಿದರು.
ಇಂತಹ ಶಾಸಕರ ಅವಶ್ಯಕತೆ ಈ ಜಿಲ್ಲೆಗೆ ಇಲ್ಲ. ಇಂತವರನ್ನು ಬದಲಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಬದಲಾವಣೆಗೆ ಇಲ್ಲಿನ ಜನರು ಮುಂದಾಗಬೇಕು. ಹಿಂದಿನ ಕಾಂಗ್ರೆಸ್ ಭದ್ರಕೋಟೆ ಮರುಕುಳಿಸಬೇಕು ಎಂದರು.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k