ಬೆಂಗಳೂರು: ಎರಡು ಪ್ರತ್ಯೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ಐಪಿಎಸ್, ಐಎಎಸ್ ಬಂಧನವಾಗುತ್ತಲೇ ವಿಪಕ್ಷ ಕಾಂಗ್ರೆಸ್, ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದಿದೆ.
ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮೆಗಾ ಪೊಲಿಟಿಕಲ್ ಬಾಂಬ್ ಸಿಡಿಸಿದ್ದಾರೆ. ಪಿಎಸ್‍ಐ ಹಗರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಪಾತ್ರ ಇದ್ಯಂತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಸಚಿವ ಅಶ್ವಥ್‍ನಾರಾಯಣ್ ಪಾತ್ರವಿರೋ ಬಗ್ಗೆಯೂ ಆರೋಪಗಳಿವೆ. ಇವರಿಗೆಲ್ಲಾ ಸಿಎಂ ರಕ್ಷಣೆ ಕೊಡ್ತಾ ಇದ್ದಾರೆ. ಕೂಡ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಬೊಮ್ಮಾಯಿ ರಾಜೀನಾಮೆ ಕೊಡ್ಬೇಕು, ಗೃಹ ಸಚಿವರನ್ನು ವಜಾ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿ ಮೂಲಕ ತನಿಖೆ ನಡೆಸಬೇಕು. ಅವರಿಗೆ ಝಡ್ ಶ್ರೇಣಿಯ ಭದ್ರತೆ ಕೊಡ್ಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ದೇಶದಲ್ಲೇ ಮೋಸ್ಟ್ ಕರಪ್ಟ್ ಗೌರ್ನಮೆಂಟ್. ಇದು ಕರ್ನಾಟಕದ ಆಡಳಿತಕ್ಕೆ ಒಂದು ಕಪ್ಪು ಚುಕ್ಕಿ. ಈ ರಾಜ್ಯದಲ್ಲಿ ನ್ಯಾಯಾಂಗಕ್ಕೂ ರಕ್ಷಣೆ ಇಲ್ಲವಾಗಿದೆ ಎಂದು ಡಿಕೆಶಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಆಹಾರ ಬಿಲ್‌ನಲ್ಲಿ ಸೇವಾ ಶುಲ್ಕ ಸೇರಿಸುವಂತಿಲ್ಲ – ಸೇರಿಸಿದ್ರೆ ಗ್ರಾಹಕರೇ ದೂರು ಕೊಡ್ಬೋದು
ಎಸಿಬಿ, ಸಿಐಡಿ ತನಿಖಾ ವೈಖರಿಯನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ಇದನ್ನೆಲ್ಲಾ ಒಪ್ಪೋಕೆ ಸಿಎಂ ಬಸವರಾಜ ಬೊಮ್ಮಾಯಿ ತಯಾರಿಲ್ಲ. ತನಿಖಾ ತಂಡಗಳಿಗೆ ಶಹಬ್ಬಾಷ್‍ಗಿರಿ ನೀಡಿದ್ದಾರೆ. ಹೈಕೋರ್ಟ್ ಛೀಮಾರಿ ಹಾಕ್ತು ಅಂತಾ ಕ್ರಮ ತಗೊಂಡಿಲ್ಲ ಅಂತಾ ಸಮರ್ಥನೆ ಮಾಡ್ಕೊಂಡಿದ್ದಾರೆ. ಗೃಹ ಸಚಿವರ ನಿಯತ್ತಿನಿಂದ್ಲೇ ಇಷ್ಟೆಲ್ಲಾ ಆಗಿದೆ ಎಂದು ಸಿಎಂ ಹೇಳಿದ್ದಾರೆ. ಕಾಂಗ್ರೆಸ್ ಕಾಲದ ಹಗರಣಗಳನ್ನು ಕೆದಕಿದ್ದಾರೆ.
ವಿಜಯೇಂದ್ರ ಮೇಲಿನ ಆರೋಪ ಕುರಿತ ಪ್ರಶ್ನೆಗೆ, ದಾಖಲೆ ಕೊಟ್ರೆ ಯಾರ ಮೇಲೆಯೇ ಆಗಲಿ ಕ್ರಮಕ್ಕೆ ಸಿದ್ದ ಎಂದು ಗೃಹಮಂತ್ರಿ ಘೋಷಿಸಿದ್ದಾರೆ. ಈ ನಡುವೆ ಕಳೆದ ಎರಡು ವಾರಗಳಿಂದ ಯುರೋಪ್ ಪ್ರವಾಸದಲ್ಲಿರುವ ಯಡಿಯೂರಪ್ಪ, ವಿಜಯೇಂದ್ರ ಮತ್ತು ಕುಟುಂಬಸ್ಥರು ಬ್ರಿಟನ್ ಬಳಿಕ ಇಟಲಿಗೆ ತೆರಳಿದ್ದಾರೆ. ಬಿಎಸ್‍ವೈ ಇಟಲಿ ಕನ್ನಡ ಸಂಘ ಸ್ವಾಗತ ನೀಡಿದೆ.