LatestLeading NewsMain PostNational

ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಆಹಾರ ಬಿಲ್‌ನಲ್ಲಿ ಸೇವಾ ಶುಲ್ಕ ಸೇರಿಸುವಂತಿಲ್ಲ – ಸೇರಿಸಿದ್ರೆ ಗ್ರಾಹಕರೇ ದೂರು ಕೊಡ್ಬೋದು

Advertisements

ನವದೆಹಲಿ: ಹೋಟೆಲ್, ರೆಸ್ಟೋರೆಂಟ್‌ಗಳು ಆಹಾರ ಬಿಲ್‌ನಲ್ಲಿ ಸ್ವಯಂಚಾಲಿತವಾಗಿ ಇಲ್ಲವೇ ಪೂರ್ವನಿಯೋಜಿತವಾಗಿ ಸೇವಾ ಶುಲ್ಕ ಸೇರಿಸುವಂತಿಲ್ಲ ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಆದೇಶಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಅನ್ಯಾಯ ವ್ಯಾಪಾರ ವಿಧಾನ ಹಾಗೂ ಗ್ರಾಹಕ ಹಕ್ಕುಗಳ ಉಲ್ಲಂಘನೆ ತಡೆಗಟ್ಟುವ ಸಲುವಾಗಿ ಹೊರಡಿಸಲಾದ ಸಿಸಿಪಿಎ ಮಾರ್ಗಸೂಚಿಯಲ್ಲಿ ದೂರುಗಳನ್ನು ಸಲ್ಲಿಸಲು ಅನುವಾಗುವಂತೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್‌ಸಿಎಚ್) ಸಂಖ್ಯೆಯನ್ನು ಕೂಡ ಒದಗಿಸಿದೆ. 1915 ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಇ- ದಾಖಿಲ್‌ ಜಾಲತಾಣ: www.e-daakhil.nic.in. ಮತ್ತು ಸಿಸಿಪಿಎ ಇಮೇಲ್‌ ವಿಳಾಸ: com-ccpa@nic.in.ಕ್ಕೆ ದೂರು ಸಲ್ಲಿಸುವ ಮೂಲಕ ನ್ಯಾಯ ಪಡೆದುಕೊಳ್ಳಬಹುದು ಎಂದು ಹೇಳಿದೆ.

ಮಾರ್ಗಸೂಚಿಯಲ್ಲಿ ಏನಿದೆ?

  • ಹೋಟೆಲ್, ರೆಸ್ಟೋರೆಂಟ್‌ಗಳು, ಆಹಾರ ಬಿಲ್‌ನಲ್ಲಿ ಸ್ವಯಂಚಾಲಿತವಾಗಿ ಇಲ್ಲವೇ ಪೂರ್ವನಿಯೋಜಿತವಾಗಿ ಸೇವಾ ಶುಲ್ಕ ಸೇರಿಸುವಂತಿಲ್ಲ.
  • ಯಾವುದೇ ಇತರೆ ಹೆಸರಿನಿಂದಲೂ ಸೇವಾ ಶುಲ್ಕ ಸಂಗ್ರಹಿಸಬಾರದು.
  • ಗ್ರಾಹಕರು ಸೇವಾ ಶುಲ್ಕ ಪಾವತಿಸಬೇಕು ಎಂದು ಹೋಟೆಲ್ ಅಥವಾ ರೆಸ್ಟೋರೆಂಟ್ ಒತ್ತಾಯಿಸುವಂತಿಲ್ಲ.
  • ಸೇವಾ ಶುಲ್ಕ ಎಂಬುದು ಸ್ವಯಂಪ್ರೇರಿತ, ಐಚ್ಛಿಕ ಹಾಗೂ ಗ್ರಾಹಕರ ವಿವೇಚನೆಗೆ ಬಿಟ್ಟಿರುತ್ತದೆ ಎಂಬ ವಿಚಾರವನ್ನು ಸ್ಪಷ್ಟವಾಗಿ ಗ್ರಾಹಕರಿಗೆ ತಿಳಿಸಿಬೇಕು.
  • ಸೇವಾ ಶುಲ್ಕ ಸಂಗ್ರಹ ಆಧರಿಸಿ ಪ್ರವೇಶ ನಿರ್ಬಂಧ ಇಲ್ಲವೇ ಸೇವೆಗಳನ್ನು ಆಧರಿಸಿ ನಿಯಮಗಳನ್ನು ಗ್ರಾಹಕರ ಮೇಲೆ ವಿಧಿಸುವಂತಿಲ್ಲ.
  • ಸೇವಾ ಶುಲ್ಕ ಆಹಾರದ ಬಿಲ್‌ನೊಂದಿಗೇ ಸೇರಿಸಿ ಒಟ್ಟು ಮೊತ್ತದ ಮೇಲೆ ಜಿಎಸ್‌ಟಿ ವಿಧಿಸುವ ಮೂಲಕ ಸಂಗ್ರಹಿಸುವಂತಿಲ್ಲ.

Live Tv

Leave a Reply

Your email address will not be published.

Back to top button