ಮುಂಬೈ: ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸಾಚಾರ ನೋಡಿ ಬೇಸರವಾಯಿತು ಎಂದು ಭಾರತ ಮೂಲದ ಅಮೆರಿಕ ಸೂಪರ್ ಮಾಡೆಲ್ ಹಾಗೂ ಲೇಖಕಿ ಪದ್ಮಾ ಲಕ್ಷ್ಮೀ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಭಾರತದಲ್ಲಿ ಅಥವಾ ಬೇರೆಲ್ಲಿಯೂ ಹಿಂದೂ ಧರ್ಮಕ್ಕೆ ಯಾವುದೇ ಬೆದರಿಕೆ ಇಲ್ಲ. ಈ ಪ್ರಾಚೀನ ಮತ್ತು ವಿಶಾಲವಾದ ಭೂಮಿಯಲ್ಲಿ ಎಲ್ಲಾ ಧರ್ಮಗಳ ಜನರು ಶಾಂತಿಯುತವಾಗಿ ಬದುಕಲು ಸಾಧ್ಯವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹಲಾಲ್ ಮಾಂಸ, ಮಸೀದಿಗಳಲ್ಲಿ ಧ್ವನಿವರ್ಧಕ ಏಕೆ ನಿಷೇಧಿಸಬೇಕು: ಒಮರ್ ಅಬ್ದುಲ್ಲಾ ಪ್ರಶ್ನೆ
Advertisement
Sickening to see the violence against Muslims celebrated in India. The widespread anti-Muslim rhetoric preys on fear and poisons people.
This propaganda is dangerous and nefarious because when you consider someone less than it's much easier to participate in their oppression.
— Padma Lakshmi (@PadmaLakshmi) April 27, 2022
Advertisement
ದೇಶದಲ್ಲಿ ವ್ಯಾಪಕ ಮುಸ್ಲಿಂ ವಿರೋಧಿ ವಾಕ್ಚಾತುರ್ಯವಿದೆ. ಹಿಂದೂಗಳು ಈ ಭಯ ಉತ್ತೇಜಕ ಮತ್ತು ಪ್ರಚಾರಕ್ಕೆ ಬಲಿಯಾಗುವುದಿಲ್ಲ ಎಂದು ಹೇಳಿದ್ದಾರೆ.
Advertisement
ವ್ಯಾಪಕವಾದ ಮುಸ್ಲಿಂ ವಿರೋಧಿ ವಾಕ್ಚಾತುರ್ಯವು ಜನರನ್ನು ವಿಷಪೂರಿತಗೊಳಿಸುತ್ತದೆ. ಈ ಪ್ರಚಾರವು ಅಪಾಯಕಾರಿ ಮತ್ತು ಹಾನಿಕಾರಕ. ನೀವು ಯಾರನ್ನಾದರೂ ತುಚ್ಛವಾಗಿ ಕಂಡರೆ ದಬ್ಬಾಳಿಕೆಗೆ ದಾರಿ ಮಾಡಿಕೊಟ್ಟಂತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇವಾಲಯಗಳನ್ನು ಧ್ವಂಸಗೊಳಿಸಿ ಶಾಂತಿಯನ್ನು ಕದಡುತ್ತಿದೆ: ಕಾಂಗ್ರೆಸ್ ವಿರುದ್ಧವೇ ಮುಸ್ಲಿಮರಿಂದ ದೂರು
Advertisement
— Padma Lakshmi (@PadmaLakshmi) April 27, 2022
ಹಿಂದೂಗಳೇ, ಈ ಭಯ ಹುಟ್ಟಿಸುವವರಿಗೆ ಮಣಿಯಬೇಡಿ. ಭಾರತದಲ್ಲಿ ಅಥವಾ ಬೇರೆಲ್ಲಿಯೂ ಹಿಂದೂ ಧರ್ಮಕ್ಕೆ ಯಾವುದೇ ಅಪಾಯವಿಲ್ಲ. ನಿಜವಾದ ಆಧ್ಯಾತ್ಮಿಕತೆಯು ಯಾವುದೇ ರೀತಿಯ ದ್ವೇಷವನ್ನು ಬಿತ್ತುವುದಿಲ್ಲ ಎಂದಿದ್ದಾರೆ.