ಸೌತ್ ಸುಂದರಿ ಶ್ರುತಿ ಹಾಸನ್(Shruti Haasan) ಪ್ರಭಾಸ್‌ಗೆ (Bahubali Prabhas) ನಾಯಕಿಯಾಗಿ `ಸಲಾರ್’ನಲ್ಲಿ ಮಿಂಚ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದ ರಿಲೀಸ್‌ಗಾಗಿ ಕಾಯ್ತಿದ್ದಾರೆ. ಕೈತುಂಬಾ ಅವಕಾಶಗಳಿರುವ ನಟಿ, ಕಮಲ್ ಹಾಸನ್ (Kamal Haasan) ಪುತ್ರಿ ಶ್ರುತಿ ಈಗ ಸ್ಟಾರ್ ಮಕ್ಕಳ ನೆಪೋಟಿಸಂ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ನಾಯಕಿಯಾಗಿ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಸೈ ಎನಿಸಿಕೊಂಡಿದ್ದಾರೆ. ಸದ್ಯ ಸ್ಟಾರ್ ನಟರಿಗೆ ನಾಯಕಿಯಾಗುವ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಶ್ರುತಿ ಹಾಸನ್ ನೀಡಿದ ಸಂದರ್ಶನದಲ್ಲಿ ನೆಪೋಟಿಸಂ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಾವು ಕೂಡ ಸ್ಟಾರ್ ನಟನ ಪುತ್ರಿಯಾಗಿದ್ದು, ಸ್ಟಾರ್ ಮಕ್ಕಳ ನೆಪೋಟಿಸಂ(Nepotism) ಬಗ್ಗೆ ಮೌನ ಮುರಿದಿದ್ದಾರೆ. ಇದನ್ನೂ ಓದಿ:ಪತಿ ರಘು ಮುಖರ್ಜಿ ಮಾತಿಗೆ ಕಣ್ಣೀರಿಟ್ಟ ಅನುಪ್ರಭಾಕರ್
ಒಬ್ಬರನ್ನು ನೋಡಿ ಇವರಂತೆ ನಟಿಸಬೇಕು ಅಂತ ಆಸೆ ಪಟ್ಟವಳು ನಾನಲ್ಲ ಆ ರೀತಿ ನನಗೆ ಮಾಡಲು ಬರೋದೂ ಇಲ್ಲ ಹೀಗಾಗಿ ನನ್ನ ತಂದೆ- ತಾಯಿ ಸಿನಿಮಾ ನನಗೆ ಪ್ರೇರಣೆ ಆಗಲಿಲ್ಲ. ಎಲ್ಲವೂ ನಾನೇ ಕಲಿಯಬೇಕಿತ್ತು, ಕ್ಯಾಮೆರಾ ಕಂಡರೆ ಹೇಗಿರಬೇಕು, ಜನರಿದ್ದರೆ ಹೇಗಿರಬೇಕು, ಒಳ್ಳೆ ಕಥೆಯನ್ನು ಆಯ್ಕೆ ಮಾಡಿಕೊಳ್ಳುವ ರೀತಿ ಆರಂಭದಲ್ಲಿ ಯಾವುದೂ ನನಗೆ ಸುಲಭವಾಗಿರಲಿಲ್ಲ. ಜೀವನದಲ್ಲಿ ಈ ಸ್ಥಾನಕ್ಕೆ ಬರಲು ನಡೆದುಕೊಂಡು ಬಂದ ಹಾದಿಯನ್ನು ಮರೆಯುವುದಿಲ್ಲ ಎಂದಿದ್ದಾರೆ.
ಸ್ಟಾರ್ ಮಕ್ಕಳಾಗಿ ಹುಟ್ಟಿ ಚಿತ್ರರಂಗದಲ್ಲಿ ಕೆಲಸ ಮಾಡಬೇಕು ಅಂದ್ರೆ ಬಾಗಿಲು ತೆರೆಯುತ್ತಾರೆ ಆದರೆ ಉಳಿದುಕೊಳ್ಳುವುದು ನಮ್ಮ ಕೈಯಲ್ಲಿ ಇರುತ್ತದೆ. ಒಂದು ವಿಚಾರಕ್ಕೆ ಹೆಮ್ಮೆ ಪಡುವೆ ಏನೆಂದರೆ ನನ್ನ ತಂದೆ-ತಾಯಿ ಚಿತ್ರರಂಗದವರಿಗೆ ಕರೆ ಮಾಡಿ ನನ್ನ ಮಕ್ಕಳಿಗೆ ಅವಕಾಶ ನೀಡಿ ಎಂದು ಕೇಳಿಲ್ಲ. ಹೀಗಾಗಿ ಈ ಜರ್ನಿ ತುಂಬಾನೇ ರೋಚಕವಾಗಿತ್ತು. ಪ್ರತಿ ಹಂತದಲ್ಲೂ ನನಗೆ ಪೋಷಕರು ಸಲಹೆ ಕೊಡುತ್ತಾರೆ. ನೆಪೋಟಿಸಂ ಇಲ್ಲ, ಅವಕಾಶ ಸಿಗುತ್ತದೆ ಆದರೆ ಚಿತ್ರರಂಗದಲ್ಲಿ ಉಳಿದುಕೊಳ್ಳುವುದು ನಮ್ಮ ಕೈಯಲ್ಲಿದೆ ಎಂದು ಹೇಳಿದ್ದಾರೆ. ಅವಕಾಶದ ಬಾಗಿಲು ತೆಗೆಯಲು ಜನರಿದ್ದಾರೆ ಆದರೆ ಉಳಿದುಕೊಳ್ಳುವುದು ಜನರ ಪ್ರೀತಿ ಸಂಪಾದಿಸುವುದು ನಮ್ಮ ಕೈಯಲ್ಲಿದೆ ಎಂದು ನಟಿ ಶ್ರುತಿ ಮಾತನಾಡಿದ್ದಾರೆ.