ಹಿಂದಿ ರಾಷ್ಟ್ರ ಭಾಷೆಯೇ ಇಲ್ಲವೇ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಟಾರ್ ನಟರ ನಡುವೆ ಶೀತಲ ಸಮರ ಶುರುವಾಗಿದೆ. ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ನಡುವೆ ಶುರುವಾದ ಈ ವಾರ್ ಇಡೀ ಚಿತ್ರರಂಗ, ರಾಜಕೀಯ ರಂಗಕ್ಕೆ ವ್ಯಾಪಿಸಿದೆ.
Advertisement
ಹಿಂದಿ ರಾಷ್ಟ್ರಭಾಷೆ ಎನ್ನುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಸುದೀಪ್ ಖಡಕ್ ಸಂದೇಶ ರವಾನಿಸಿದ್ದರು. ಅದಕ್ಕೆ ಪ್ರತಿಯಾಗಿ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಟ್ವಿಟ್ ಮಾಡಿ ರಾಷ್ಟ್ರ ಭಾಷೆ ಹಿಂದಿ ಅಲ್ಲ ಅಂದಮೇಲೆ ಹಿಂದಿಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ಯಾಕೆ ಬಿಡುಗಡೆ ಮಾಡುತ್ತೀರಿ? ಎಂದು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ : ನಾನು ಕನ್ನಡ ಪಂಡಿತನೂ, ಹಿಂದಿ ಪಂಡಿತನೂ ಹೌದು -ಯೋಗರಾಜ್ ಭಟ್
Advertisement
Advertisement
ಇದಕ್ಕೆ ಪ್ರತಿಕ್ರಿಯಿಸಿದ್ದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಾನು ಕನ್ನಡ ಪಂಡಿತನೂ, ಹಿಂದಿ ಪಂಡಿತನೂ ಹೌದು ಎಂದು ಹೇಳಿದ್ದರು. ಅವರ ಈ ಹೇಳಿಕೆಯೂ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದಾರೆ
Advertisement
ಈ ಕುರಿತು ಇನ್‌ಸ್ಟಾಗ್ರಾಂ ನಲ್ಲಿ ಪತ್ರವೊಂದನ್ನು ಬರೆದು ಪೋಸ್ಟ್ ಮಾಡಿರುವ ಅವರು, ನಮಸ್ತೆ ರಾಷ್ಟ್ರೀಯ ಭಾಷೆ ವಿಚಾರವಾಗಿ ಮಾಧ್ಯಮ ಮಿತ್ರರು ಕೇಳಿದಾಗ, ಪ್ರತಿಕ್ರಿಯ ನೀಡುವಷ್ಟು ತಿಳಿದವನು ನಾನಲ್ಲ ಎಂದು ಹೇಳಿದ್ದೇನೆಯೇ ಹೊರತು. ರಾಷ್ಟ್ರ ಭಾಷೆ ಹಿಂದಿಯೇ ಎಂದು ನಾನು ಹೇಳಿಲ್ಲ. ಹೇಳುವುದೂ ಇಲ್ಲ. ಸಂವಿಧಾನ ಪ್ರಕಾರವಾಗಿ ರಾಷ್ಟ್ರೀಯ ಭಾಷೆ ಎನ್ನುವುದೇ ಇಲ್ಲವಾದ್ದರಿಂದ ಈ ಕುರಿತು ಚರ್ಚೆ ಎಲ್ಲರಿಗೂ ಹೋಗಿ ಮುಟ್ಟುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಿಡ್‌ನೈಟ್‌ನಲ್ಲಿ ಸಮಂತಾಗೆ ಸರ್ಪ್ರೈಸ್ ನೀಡಿದ ವಿಜಯ್ ದೇವರಕೊಂಡ: ವಿಡಿಯೋ ವೈರಲ್
ಯಾರೇ ಆಗಲಿ ಹಿಂದಿಯನ್ನು ರಾಷ್ಟ್ರಭಾಷೆ ಎಂದ ಮಾತ್ರಕ್ಕೆ ಅದು ರಾಷ್ಟ್ರಭಾಷೆಯಾಗುವುದಿಲ್ಲ. ಈ ಕಾರಣಕ್ಕಾಗಿ ನಾನು ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸದೇ ಇಡೀ ವಿವಾದಕ್ಕೆ ಅಚ್ಚಕನ್ನಡದಲ್ಲಿ ಅಂತ್ಯ ಹಾಡಲೆತ್ನಿಸಿದ್ದೇನೆಯೇ ಹೊರತು ಬೇರೇನೂ ಇಲ್ಲ. ನನ್ನ ಕನ್ನಡ, ನನ್ನ ಭಾಷಾ ಸ್ವಾಭಿಮಾನ, ಕನ್ನಡ ಸೇವೆ, ಕನ್ನಡ ತನದ ಬಗ್ಗೆ ತಮಗೆಲ್ಲ ತಿಳಿದೇ ಇದೆ. ನಾನು ನನ್ನ ಸನ್ಮಿತ್ರರಾದ ಸುದೀಪ್ ಸಾಹೇಬರ ಪರ ಎಂದು ತಮಗೆಲ್ಲಾ ಪ್ರತ್ಯೇಕವಾಗಿ ಹೇಳಬೇಕೆ? ಕನ್ನಡವೇ ನನ್ನ ಪಾಲಿನ, ನನ್ನ ಬಾಳಿನ ಏಕೈಕ ಭಾಷೆ ಸಿರಿಗನ್ನಡಂ ಗೆಲ್ಗೆ’ ಎಂದು ಬರೆದುಕೊಂಡಿದ್ದಾರೆ.