BollywoodCinemaLatestMain PostSouth cinema

ಮಿಡ್‌ನೈಟ್‌ನಲ್ಲಿ ಸಮಂತಾಗೆ ಸರ್ಪ್ರೈಸ್ ನೀಡಿದ ವಿಜಯ್ ದೇವರಕೊಂಡ: ವಿಡಿಯೋ ವೈರಲ್

ಮಂತಾ ಸದ್ಯ ಬಹುಭಾಷಾ ಸಿನಿಮಾಗಳಲ್ಲಿ ಮಿಂಚ್ತಿರೋ ಪ್ರತಿಭೆ. `ದಿ ಫ್ಯಾಮಿಲಿಮೆನ್ 2′ ಮತ್ತು `ಪುಷ್ಪ’ ಹಾಡಿಗೆ ಸೊಂಟ ಬಳುಕಿಸಿ ಬಂದ ಮೇಲೆ ಸಮಂತಾಗೆ ಎಲ್ಲಿಲ್ಲದ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸದ್ಯ ಹೊಸ ಚಿತ್ರಕ್ಕಾಗಿ ಕಾಶ್ಮೀರಕ್ಕೆ ಹಾರಿರೋ ಸಮಂತಾಗೆ ಬರ್ತಡೇ ದಿನ ವಿಜಯ್ ದೇವರಕೊಂಡ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ಸಮಂತಾ ಏಪ್ರಿಲ್ 28ರಂದು 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬರ್ತಡೇ ದಿನ ಶಿವಾ ನಿರ್ವಾಣ ಮತ್ತು ವಿಜಯ್ ದೇವರಕೊಂಡ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್‌ಗೆ ನಾಯಕಿಯಾಗಿ ಸಮಂತಾ ನಟಿಸಿದ್ದಾರೆ. ಇದರ ನಡುವೆ ವಿಜಯ್ ದೇವರಕೊಂಡ ಮಧ್ಯರಾತ್ರಿ ಸಮಂತಾಗೆ ವಿಶ್ ಮಾಡಿ, ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಸ್ಯಾಮ್ ಹುಟ್ಟು ಹಬ್ಬಕ್ಕಾಗಿ ವಿಜಯ್ ಜತೆ ಸೇರಿ ಇಡೀ ಚಿತ್ರತಂಡ ನಾಟಕ ಮಾಡಿ ಅಚ್ಚರಿ ಮೂಡಿಸಿದ್ದಾರೆ.

`ಮಹಾನಟಿ’ ಚಿತ್ರದ ನಂತರ ಮತ್ತೆ ಶಿವ ನಿರ್ವಾಣ ನಿರ್ದೇಶನದ ಚಿತ್ರದ ಮೂಲಕ ವಿಜಯ್ ಮತ್ತು ಸಮಂತಾ ಒಟ್ಟಿಗೆ ನಟಿಸುತ್ತಿದ್ದಾರೆ. ಸದ್ಯ ಕಾಶ್ಮೀರದಲ್ಲಿ ಬೀಡು ಬಿಟ್ಟಿರೋ ಚಿತ್ರತಂಡ ಏ.27ರಂದು ರಾತ್ರಿ ನಕಲಿ ದೃಶ್ಯವನ್ನು ವಿವರಿಸಿ ಶೂಟ್ ಮಾಡಿಸಿದ್ದಾರೆ. ಶೂಟಿಂಗ್ ನಿಜವೆಂಬಂತೆ ಬಿಂಬಿಸಿದ್ದು, ಸಮಂತಾ ಡೈಲಾಗ್ ನಂತರ ಅದಕ್ಕೆ ಪ್ರತಿಯಾಗಿ ವಿಜಯ್ ಡೈಲಾಗ್ ಪಾತ್ರದ ಹೆಸೆನ್ನು ಹೇಳುವುದು ಬಿಟ್ಟು ಸಮಂತಾ ಎಂದು ಕರೆದಿದ್ದಾರೆ. ಅದಕ್ಕೆ ಸಮಂತಾ ಜೋರಾಗಿ ನಕ್ಕರು. ಕ್ಯಾಮೆರಾ ಆನ್ ಇರಬೇಕಾದರೆನೇ ಹ್ಯಾಪಿ ಬರ್ತಡೇ ಸಮಂತಾ ಎಂದು ವಿಶ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಇಡೀ ಚಿತ್ರತಂಡ ಸರ್ಪ್ರೈಸ್ ನೋಡಿ ಸಮಂತಾ ಭಾವುಕರಾಗಿದ್ದಾರೆ. ಇದು ನಿಜವಾದ ಶೂಟಿಂಗ್ ಅಲ್ಲ ಅಂತಾ ತಿಳಿದು ಎನೂ ತೋಚದೇ ಒಂದು ಕ್ಷಣ ಖುಷಿಯಿಂದ ಸಮಂತಾ ಭಾವುಕರಾಗಿದ್ದಾರೆ. ಸ್ಥಳದಲ್ಲೇ ಕೇಕ್ ಕತ್ತರಿಸುವ ಮೂಲಕ ಚಿತ್ರತಂಡ ಜತೆ ಸಮಂತಾ ಬರ್ತಡೇ ಆಚರಿಸಿಕೊಂಡಿದ್ದಾರೆ. ತಮ್ಮ ಬರ್ತಡೇ ಸರ್ಪ್ರೈಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಚಿತ್ರತಂಡಕ್ಕೆ ಸಮಂತಾ ಧನ್ಯವಾದ ತಿಳಿಸಿದ್ದಾರೆ.ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಆದಿತ್ಯಗೆ ರಾಜೇಂದ್ರ ಸಿಂಗ್ ಬಾಬು ಆ್ಯಕ್ಷನ್ ಕಟ್

ವಿಜಯ್ ದೇವರಕೊಂಡ ಜತೆಗಿನ ಸಿನಿಮಾದ ಜತೆ ನಟಿ ಸಮಂತಾ ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published.

Back to top button