CinemaDistrictsKarnatakaLatestMain PostSandalwood

ಹಿಂದಿ ರಾಷ್ಟ್ರ ಭಾಷೆ : ನಾನು ಕನ್ನಡ ಪಂಡಿತನೂ, ಹಿಂದಿ ಪಂಡಿತನೂ ಹೌದು -ಯೋಗರಾಜ್ ಭಟ್

ಹಿಂದಿ ರಾಷ್ಟ್ರ ಭಾಷೆಗೆ ಸಂಬಂಧಿಸಿದಂತೆ ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳ ನಟರ ನಡುವೆ ಕೋಲ್ಡ್ ವಾರ್ ಶುರುವಾಗಿದೆ. ಹಿಂದಿ ರಾಷ್ಟ್ರ ಭಾಷೆ ಎನ್ನುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಸುದೀಪ್ ಖಡಕ್ ಸಂದೇಶ ರವಾನಿಸಿದ್ದರು. ಅದಕ್ಕೆ ಪ್ರತಿಯಾಗಿ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಟ್ವಿಟ್ ಮಾಡಿ ‘ರಾಷ್ಟ್ರ ಭಾಷೆ ಹಿಂದಿ ಅಲ್ಲ ಅಂದಮೇಲೆ ಹಿಂದಿಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ಯಾಕೆ ಬಿಡುಗಡೆ ಮಾಡುತ್ತೀರಿ?’ ಎಂದು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ : ಪುನೀತ್‌ಗೆ ಅವಮಾನ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ

ಅಜಯ್ ದೇವಗನ್ ಆ ರೀತಿಯಲ್ಲಿ ಪ್ರಶ್ನೆ ಮಾಡುತ್ತಿದ್ದಂತೆಯೇ ಇಡೀ ದಕ್ಷಿಣ ಭಾರತದ ಕಲಾವಿದರೇ ಅಜಯ್ ದೇವಗನ್ ವಿರುದ್ಧ ತಿರುಗಿ ಬಿದ್ದರು. ‘ಅನುವಾದದ ಕೊರತೆಯಿಂದ ಆದ ಪ್ರಮಾದ’ ಎಂದು ಅಜಯ್ ದೇವಗನ್ ಸ್ಪಷ್ಟನೆ ಕೊಟ್ಟರೂ, ದಕ್ಷಿಣದ ನಟರು ಮಾತ್ರ ಸುಮ್ಮನಾಗಲಿಲ್ಲ. ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟ ಸಂದೇಶ ಕಳುಹಿಸಿದರು. ಇದನ್ನೂ ಓದಿ : ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

ಈ ಕುರಿತು ರಾಮ್ ಗೋಪಾಲ್ ವರ್ಮಾ, ನಟಿ ರಮ್ಯಾ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ನಟ ಸತೀಶ್ ನೀನಾಸಂ, ನಿರ್ದೇಶಕ ಸುನಿ ಹೀಗೆ ಹತ್ತು ಹಲವು ತಾರೆಯರು ಸುದೀಪ್ ಬೆನ್ನಿಗೆ ನಿಂತರು. ಈ ಕುರಿತು ಮಾಧ್ಯಮಗಳು ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಪ್ರತಿಕ್ರಿಯೆ ಕೇಳಿದಾಗ ಅಚ್ಚರಿ ಎನ್ನುವಂತಹ ಉತ್ತರ ನೀಡಿದ್ದಾರೆ ಯೋಗರಾಜ್ ಭಟ್. ‘ನನ್ನ ಬಗ್ಗೆ ಕೇಳಿದರೆ ನೆಟ್ಟಗೆ ನನಗೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ. ರಾಷ್ಟ್ರದ ಸಮಸ್ಯೆ ಬಗ್ಗೆ ಕೇಳಿದರೆ ಏನು ಹೇಳಲಿ? ಎನ್ನುತ್ತಾರೆ. ಮುಂದುವರೆದು ನಾನು ಕನ್ನಡದ ಪಂಡಿತನೂ ಹೌದು, ಹಿಂದಿ ಪಂಡಿತನೂ ಹೌದು ಎನ್ನುತ್ತಾರೆ. ಈ ಮಾತು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ : ವಾಮನ ತೆಕ್ಕೆಗೆ ತುಳುನಾಡ ಬೆಡಗಿ ರಚನಾ ರೈ

ಕೆಲವರು ಯೋಗರಾಜ್ ಭಟ್ಟ ಅವರಿಗೆ ಯಾಕೆ ಸ್ಪಷ್ಟತೆ ಇಲ್ಲ ಎಂದು ಕೇಳಿದ್ದರೆ, ಮತ್ತಷ್ಟು ಜನ ಭಾಷಾ ವಿಚಾರದಲ್ಲಿ ಯಾಕೆ ಹಿಂದೇಟು? ಎನ್ನುವ ಮಾತುಗಳನ್ನೂ ಆಡಿದ್ದಾರೆ. ರಾಷ್ಟ್ರ ಭಾಷೆಯ ವಿಚಾರದಲ್ಲಿ ಕನ್ನಡ ಸಂಘಟನೆಗಳು, ಕನ್ನಡದ ನಟರು ಧೈರ್ಯದಿಂದ ಹಿಂದಿ ಹೇರಿಕೆಯ ವಿರುದ್ಧ ಮಾತನಾಡುತ್ತಿದ್ದರೆ, ಯೋಗರಾಜ್ ಭಟ್ ಈ ಕುರಿತು ಯಾವುದೇ ಹೇಳಿಕೆ ದಾಖಲಿಸದೇ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

Leave a Reply

Your email address will not be published.

Back to top button