ನವದೆಹಲಿ: ದೆಹಲಿ, ಅಹಮದಾಬಾದ್ (Ahmedabad) ಮತ್ತು ಪಂಜಾಬ್ (Punjab) ಸೇರಿದಂತೆ ವಿವಿಧ ಭಾಗಗಳ ಮಾರುಕಟ್ಟೆಯಲ್ಲಿ ಅಮುಲ್ ಬಟರ್ (Amul Butter)ಕೊರತೆ ಎದುರಾಗಿದೆ. ಈ ಬಗ್ಗೆ ಗ್ರಾಹಕರು ಟ್ವಿಟ್ಟರ್‌ನಲ್ಲಿ ಟೀಕಿಸುತ್ತಿದ್ದಾರೆ.
@Amul_Coop hello please check this butter is fake or real ? Also check the packaging. I guess it’s fake amul butter given by my local shopkeeper. If yes please take action. pic.twitter.com/ytFJFOzCvf
— Vaibhav (@Vaibhavsa9) November 9, 2022
Advertisement
ರೇಷನ್ ಆ್ಯಪ್‍ಗಳಲ್ಲಿ ಅಮುಲ್ ಬಟರ್ ಹೆಸರು ಕಾಣಿಸುತ್ತಿಲ್ಲ. ಹೀಗಾಗಿ ಮಾರುಕಟ್ಟೆಗಳಲ್ಲಿ ನಕಲಿ ಅಮುಲ್ ಬಟರ್ ಮಾರಾಟದ ಹಾವಳಿ ಹೆಚ್ಚಾಗಿದೆ. ಪ್ರಥಮವಾಗಿ ಅಹಮದಾಬಾದ್‍ನಲ್ಲಿ ಅಮುಲ್ ಬಟರ್ ಕೊರತೆ ಕಾಣಿಸಿಕೊಂಡಿತು. ದೆಹಲಿಯಲ್ಲಿ (Delhi) 20 ರಿಂದ 25 ದಿನಗಳಿಂದ ಅಮುಲ್ ಬಟರ್ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದ್ದು, ವಿತರಕರು ಅಮುಲ್ ಬಟರ್ ಪೂರೈಕೆ ಕೊರತೆಯಿದೆ ಮತ್ತು ಸರಕುಗಳನ್ನು ನಾವು ಸ್ವೀಕರಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಫ್ತಾಬ್‍ನನ್ನು ನೇಣಿಗೆ ಹಾಕಿ: ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ ಶ್ರದ್ಧಾಳ ತಂದೆ
Advertisement
No butter anywhere in Ahmedabad. Dairies includung Amul are not producing enough.
Shopkeepers saying shortage could last a week.
— peeleraja (@peeleraja) November 8, 2022
Advertisement
ಅಹಮದಾಬಾದ್‍ನಲ್ಲಿಯೂ ಎಲ್ಲೂ ಅಮುಲ್ ಬಟರ್ ಬೆಣ್ಣೆ ಸಿಗುತ್ತಿಲ್ಲ. ಡೈರಿಗಳು ಸೇರಿದಂತೆ ಅಮುಲ್ ಕೂಡ ಬೆಣ್ಣೆಯನ್ನು ಹೆಚ್ಚಾಗಿ ಉತ್ಪಾದಿಸುತ್ತಿಲ್ಲ. ಒಂದು ವಾರದಿಂದ ಅಮುಲ್ ಬಟರ್ ಕೊರತೆಯು ಇದೆ ಎಂದು ಅಂಗಡಿಯ ಮಾಲೀಕರು ಹೇಳುತ್ತಿದ್ದಾರೆ ಎಂದು ಗ್ರಾಹಕರು ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಲೂಟಿಯಾಗಿದ್ದ 5,500 ವರ್ಷಗಳ ಪುರಾತನ ವಸ್ತುಗಳನ್ನು ಭಾರತ, ಪಾಕ್‌ಗೆ ಹಸ್ತಾಂತರಿಸಿದ ನ್ಯೂಯಾರ್ಕ್
Advertisement
ਬਚਪਨ ਤੋਂ ਹੀ ਸਭ ਦੀ ਮਨਪਸੰਦ ਅਮੁਲ ਲੱਸੀ।
.
.
.#amul #amullassi #amulpunjab #lassi #delicious #happiness #tasty #sweet #yummy #chocolate #tastytreathttps://t.co/HEolMYhGwY pic.twitter.com/0X5qWdC2K3
— Amul Punjab (@AmulPunjab) November 5, 2022
ಭಾರತದ ಅನೇಕ ರಾಜ್ಯಗಳಲ್ಲಿರುವ ಸೂಪರ್ ಮಾರ್ಕೆಟ್‍ಗಳು, ಕಿರಾಣಿ ಅಂಗಡಿಗಳು ಮತ್ತು ಡೆಲಿವರಿ ಅಪ್ಲಿಕೇಶನ್‍ಗಳಲ್ಲಿ ಅಮುಲ್ ಬ್ರಾಂಡ್ ಬೆಣ್ಣೆಯ ಪೂರೈಕೆಯ ಕೊರತೆ ಇದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ. ದೀಪಾವಳಿ ಸಮಯದಲ್ಲಿ ಅಮುಲ್ ಬಟರ್ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆ ಇದ್ದಿದ್ದರಿಂದ ಮಾರುಕಟ್ಟೆಗಳಲ್ಲ ಬೆಣ್ಣೆಯ ಕೊರತೆ ಎದುರಾಗಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅಮುಲ್ ವ್ಯವಸ್ಥಾಪಕ ನಿರ್ದೇಶಕ ಆರ್‌ಎಸ್ ಸೋಧಿ ಅವರು, ಮಾರುಕಟ್ಟೆಯಲ್ಲಿ ಅಮುಲ್ ಬಟರ್ ಪೂರೈಕೆ ಮತ್ತು ಲಭ್ಯತೆ 4-5 ದಿನಗಳಲ್ಲಿ ಸಂಪೂರ್ಣವಾಗಿ ಸಾಮಾನ್ಯ ಸ್ಥಿತಿಗೆ ತಲುಪಲಿದೆ. ಈಗ ಉತ್ಪನ್ನವಾಗುತ್ತಿರುವುದಕ್ಕಿಂತಲೂ ಮುಂದೆ ಅಮುಲ್ ಬಟರ್ ಉತ್ಪಾದನೆ ಹೆಚ್ಚಾಗಲಿದೆ.