ಲಂಡನ್: ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡದ ಆಟಗಾರ ಜಾನಿ ಬೈರ್‌ಸ್ಟೋವ್ ಭರ್ಜರಿ ಶತಕ ಸಿಡಿಸುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಬರ್ಮಾ ಆರ್ಮಿ ಸದಸ್ಯರು ಕಾಲಿನಲ್ಲಿದ್ದ ಚಪ್ಪಲಿ, ಶೂಗಳನ್ನು ತೆಗೆದು ಕೈಯಲ್ಲಿ ಹಿಡಿದು ಸಂಭ್ರಮಿಸಿದರು.
Advertisement
ಮೂರನೇ ಟೆಸ್ಟ್ ಪಂದ್ಯದಲ್ಲಿ ಎರಡೂ ತಂಡಗಳ ಮಧ್ಯೆ ಜಿದ್ದಾಜಿದ್ದಿನ ಕಾದಾಟ ಕಂಡು ಬರುತ್ತಿದೆ. ನ್ಯೂಜಿಲೆಂಡ್ ಪ್ರಥಮ ಇನ್ನಿಂಗ್ಸ್‌ನಲ್ಲಿ 329 ರನ್‍ಗಳಿಗೆ ಆಲೌಟ್ ಆಯಿತು. ನಂತರ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ 55 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಬ್ಯಾಟಿಂಗ್‍ಗೆ ಆಗಮಿಸಿದ ಬೈರ್‌ಸ್ಟೋವ್ ತಾಳ್ಮೆಯುತ ಇನ್ನಿಂಗ್ಸ್ ಕಟ್ಟಿದರು. ಜೇಮೀ ಓವರ್ಟನ್ ಜೊತೆ ಕೂಡಿಕೊಂಡು ಭರ್ಜರಿ ಬ್ಯಾಟ್ ಬೀಸಿದ ಬೈರ್‌ಸ್ಟೋವ್ ಶತಕ ಸಿಡಿಸುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಜಾನಿ ಬೈರ್‌ಸ್ಟೋವ್ ಬರ್ಮಾ ಆರ್ಮಿ ಸದಸ್ಯರು ತಾವು ಧರಿಸಿದ್ದ ಚಪ್ಪಲಿ, ಶೂಗಳನ್ನು ತೆಗೆದು ಕೈಯಲ್ಲಿ ಹಿಡಿದು ಬೈರ್‌ಸ್ಟೋವ್‌ಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ಔಟ್ ಮಾಡಿದ ಬೌಲರ್‌ಗೆ ಮಧ್ಯದ ಬೆರಳು ತೋರಿಸಿದ CSK ಆಟಗಾರ – ಟಿಎನ್‍ಪಿಎಲ್‍ನಲ್ಲಿ ಕಿರಿಕ್
Advertisement
???? Shoes off, if you love Bairstow! ????#ENGvNZ pic.twitter.com/AAQ2vKUjNS
— England's Barmy Army (@TheBarmyArmy) June 24, 2022
Advertisement
ಈ ರೀತಿ ಅಭಿನಂದನೆ ಸಲ್ಲಿಸಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ ಬರ್ಮಾ ಆರ್ಮಿ ಚಪ್ಪಲಿಯನ್ನು ತೆಗೆದು ಬೈರ್‌ಸ್ಟೋವ್‌ಗೆ ಅಭಿನಂದಿಸಿದ್ದೇವೆ ಎಂದು ಬರೆದುಕೊಂಡಿದೆ. ಪಂದ್ಯದಲ್ಲಿ ಬೈರ್‌ಸ್ಟೋವ್ ಶತಕದ ನೆರವಿನಿಂದ ಕುಸಿತ ಕಂಡಿದ್ದ ಇಂಗ್ಲೆಂಡ್ ತಿರುಗೇಟು ನೀಡುತ್ತಿದ್ದು, ಅಲ್ಪ ಹಿನ್ನಡೆಯಲ್ಲಿದೆ. ಇದನ್ನೂ ಓದಿ: ಫಿಫಾ ವಿಶ್ವಕಪ್ ವೇಳೆ ಸೆಕ್ಸ್ ಮಾಡಿದ್ರೆ 7 ವರ್ಷ ಜೈಲು!
Advertisement
ಈಗಾಗಲೇ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ತಂಡ 2-0 ಅಂತರದಲ್ಲಿ ವಶಪಡಿಸಿಕೊಂಡರೂ, ಮೂರನೇ ಟೆಸ್ಟ್‌ನಲ್ಲಿ ಗೆಲುವಿಗಾಗಿ ಹೋರಾಡುತ್ತಿದೆ. ಇತ್ತ ಕೊನೆಯ ಪಂದ್ಯವನ್ನು ಗೆದ್ದು ಸರಣಿಗೆ ಅಂತ್ಯವಾಡಲು ನ್ಯೂಜಿಲೆಂಡ್ ಪ್ಲಾನ್ ಮಾಡಿದೆ. ಹಾಗಾಗಿ ಎರಡೂ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.