ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಲ್ಲಿ ಶಿಫ್ಟ್ ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಇದರಿಂದ ಬೆಳಗ್ಗೆ ಬೇಗ ಎದ್ದು ಬಸ್‍ನಲ್ಲಿ ಹೋಗೋರಿಗೆ ಶಾಕ್ ಕಾದಿದ್ದು, ಹಾಗೆಯೇ ರಾತ್ರಿ ಹೊತ್ತಲ್ಲೂ ಬಸ್ ಇರುತ್ತೆ, ಪ್ರಾಬ್ಲಂ ಇಲ್ಲ ಅಂದ್ಕೊಂಡಿದ್ರೆ ಅವರಿಗೆ ತೊಂದರೆ ಆರಂಭವಾಗುವ ಸಾಧ್ಯತೆಯಿದೆ.
ಹೌದು. ದುಡ್ಡು ಉಳಿಸಲು ಬಿಎಂಟಿಸಿ ಹೊಸದೊಂದು `ಐಡಿಯಾ’ ಹುಡುಕಿದೆ. ಆ ಐಡಿಯಾ ಜಾರಿಯಾದ್ರೆ ಬೆಳಗ್ಗೆ ಬೇಗ, ರಾತ್ರಿ 9 ಗಂಟೆ ಬಳಿಕ ಬಸ್ಸೇ ಸಿಗಲ್ಲ. ಈಗಿರುವ ಮೂರು ಶಿಫ್ಟ್ ಗಳ ಬದಲು 2 ಜನರಲ್ ಶಿಫ್ಟ್ ಜಾರಿಗೆ ತರಲು ಬಿಎಂಟಿಸಿ ಯೋಚನೆ ಮಾಡಿದೆ.
Advertisement
Advertisement
ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಇದ್ದರೆ ಇನ್ನೊಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9.30ವರೆಗೆ ಮತ್ತೊಂದು ಶಿಫ್ಟ್ ಹಾಕಲಾಗುತ್ತದೆ. ಒಂದು ವೇಳೆ ಈ ಶಿಫ್ಟ್ ಜಾರಿಯಾದ್ರೆ ಮುಂಜಾನೆ, ರಾತ್ರಿ ಹೊತ್ತು ಪ್ರಯಾಣ ಮಾಡೋರು ಬಸ್ ಸಿಗದೇ ಒದ್ದಾಡೋದು ಫಿಕ್ಸ್ ಆಗುತ್ತದೆ. ರೂಟ್ ಗಳ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ಶಿಫ್ಟ್ ಬದಲಾವಣೆಯಿಂದ ದುಡ್ಡು ಉಳಿಯುತ್ತೆ ಅಂತ ಬಿಎಂಟಿಸಿ ನೆಪ ಹೇಳುತ್ತಿದೆ.
Advertisement
Advertisement
ಈ ಕುರಿತು ಮ್ಯಾನೇಜರ್ ಪೊನ್ನು ರಾಜ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಬೆಳಗ್ಗಿನ ಪಾಳಿ ನಮಗೆ ಚೆನ್ನಾಗಿ ವರ್ಕ್ ಆಗ್ತಾ ಇದೆ. ಪ್ರಯಾಣಿಕರಿಗೆ ಅವಶ್ಯಕತೆ ಇರುವ ಸ್ಥಳಗಳಲ್ಲಿ ಬಸ್ ನಿಯೋಜಿಸಲಾಗಿದೆ. ಯಾವುದೇ ಟ್ರಿಪ್ ಗಳನ್ನು ಹಿಂದೆ ತೆಗೆದುಕೊಂಡಿಲ್ಲ. ಮೊದಲು ಶಿಫ್ಟ್ ಶುರುವಾಗೋದು ಬೆಳಗ್ಗೆ 6 ರಿಂದ ಆದ್ರೆ ನಿನ್ನೆಯ ಸೆಕೆಂಡ್ ಶಿಫ್ಟ್ ನವರು ಬೆಳಗ್ಗಿನ ಜಾವದ ನಾಲ್ಕು ಹಾಗೂ ಐದು ಗಂಟೆಯ ಟ್ರಿಪ್ ಗಳನ್ನ ಮಾಡುತ್ತಾರೆ ಅಂತ ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv