ಬೆಂಗಳೂರು: ಇಡ್ಲಿ (Idli) ಬಳಿಕ ಹೋಳಿಗೆ (Holige) ಪ್ರಿಯರಿಗೆ ಶಾಕ್ ಎದುರಾಗಿದೆ. ಇದೀಗ ಹೋಳಿಗೆಯೂ ನಿಮ್ಮ ಆರೋಗ್ಯಕ್ಕೆ ಕಂಟಕ ತರಬಹುದು. ಹೋಳಿಗೆ ತಯಾರು ಮಾಡುತ್ತಿದ್ದ ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಪ್ಲಾಸ್ಟಿಕ್ (Plastic) ಬಳಕೆ ಮಾಡಿಕೊಂಡು ಹೋಳಿಗೆ ತಯಾರಿಸುತ್ತಿರುವುದು ಪತ್ತೆಯಾಗಿದೆ.
ಪ್ಲಾಸ್ಟಿಕ್ ಕವರ್ ಬಳಕೆ ಮಾಡಿಕೊಂಡು ಹೋಳಿಗೆ ತಯಾರಿಸುವುದು ಕ್ಯಾನ್ಸರ್‌ಗೆ (Cancer) ಕಂಟಕವಾಗಬಹುದು. ಪ್ಲಾಸ್ಟಿಕ್ ಶಾಖದಿಂದ ಕೆಮಿಕಲ್ ಹೊರಸೂಸಿ ಕ್ಯಾನ್ಸರ್ ರೋಗಕ್ಕೆ ಎಡೆಮಾಡಿಕೊಡಬಹುದು. ಆಹಾರ ಸುರಕ್ಷತೆ ಮತ್ತು ಔಷಧ ಗುಣಮಟ್ಟ ಇಲಾಖೆಯ ಅಧಿಕಾರಿಗಳ ತಪಾಸಣೆಯಲ್ಲಿ ಈ ಶಾಕಿಂಗ್ ವಿಚಾರ ಬಯಲಾಗಿದೆ. ಇದನ್ನೂ ಓದಿ: ಕೆಆರ್ ನಗರ ರೇಪ್ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್ – ಹೈಕೋರ್ಟ್ ಮೊರೆ ಹೋದ ಭವಾನಿ ರೇವಣ್ಣ
ಮೈಸೂರಿನ ಎರಡು ಹೋಟೆಲ್‌ಗಳ ಮೇಲೆ ದಾಳಿ ಮಾಡಿದ ವೇಳೆ ಪ್ಲಾಸ್ಟಿಕ್ ಕವರ್ ಬಳಸಿ ಹೋಳಿಗೆ ತಯಾರು ಮಾಡುವುದು ಕಂಡುಬಂದಿದೆ. ಈ ಹಿನ್ನೆಲೆ ಹೋಳಿಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅಂಗಡಿಗಳಿಗೆ ಆಹಾರ ಸುರಕ್ಷತಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ಶಾಸಕರಿಗಾಗಿ ವಿಧಾನಸೌಧಕ್ಕೆ ಬಂತು ರಿಕ್ಲೈನರ್, ಮಸಾಜ್ ಚೇರ್‌ಗಳು – ಬೆಲೆ ಎಷ್ಟು?