ಬೆಂಗಳೂರು: ಉಡುಪಿ ಬಿಟ್ಟು ಬೆಂಗಳೂರಿಗೆ ಬಂದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರು ಈ ಬಾರಿ ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರ (Bengaluru North) ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಬುಧವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ 16.02 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ.
ಶೋಭಾ ಕರಂದ್ಲಾಜೆ ಅವರು 16.02 ಕೋಟಿ ಆಸ್ತಿಯ ಒಡತಿ. ಚರಾಸ್ತಿ – 9.23 ಕೋಟಿ ರೂ. ಹಾಗೂ ಸ್ಥಿರಾಸ್ತಿ – 6.78 ಕೋಟಿ ರೂ. ಮೌಲ್ಯದ್ದು. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ 4.06 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ – ವಯನಾಡ್‌ನಿಂದಲೇ ಸ್ಪರ್ಧೆ ಯಾಕೆ?
Advertisement
Advertisement
ಶೋಭಾ ಕರಂದ್ಲಾಜೆ ಬಳಿ 1 kg ಚಿನ್ನದ ಬಿಸ್ಕಟ್ (68.40 ಲಕ್ಷ ಮೌಲ್ಯ) ಹಾಗೂ 650 ಗ್ರಾಂ ಚಿನ್ನದ ಆಭರಣಗಳಿವೆ. 1620 ಗ್ರಾಂ ಬೆಳ್ಳಿ ಆಭರಣ ಹಾಗೂ ಬೆಳ್ಳಿ ವಸ್ತುಗಳು ಇವೆ. ಶೋಭಾ ಕರಂದ್ಲಾಜೆ ಅವರ ವಾರ್ಷಿಕ ಆದಾಯ 2022-23ರಲ್ಲಿ 24.90 ಲಕ್ಷ ರೂಪಾಯಿ.
Advertisement
Advertisement
ಶೋಭಾ ಕರಂದ್ಲಾಜೆ ಬಳಿ ಇರುವ ನಗದು ಹಣ 1,71,000 ರೂ. ಶೋಭಾ ಕರಂದ್ಲಾಜೆ ವಿರುದ್ಧ ಒಟ್ಟು ನಾಲ್ಕು ಮೊಕದ್ದಮೆಗಳು ಇತ್ಯರ್ಥಕ್ಕೆ ಬಾಕಿ ಇವೆ. ಇದರಲ್ಲಿ ಎರಡು ಕ್ರಿಮಿನಲ್ ಕೇಸ್, 1 ಮಾನನಷ್ಟ ಮೊಕದ್ದಮೆ ಇದೆ. ಇದನ್ನೂ ಓದಿ: ಸಿದ್ದರಾಮಯ್ಯ ಇದ್ದರು ಒಮ್ಮೆಯೂ ಗೆದ್ದಿಲ್ಲ ಜನತಾ ಪರಿವಾರ – ಜನತಾ ಪರಿವಾರದ ಸೋಲಿನ ಚರಿತ್ರೆ