ಕರ್ನಾಟಕದ ಮಾಜಿ ಸಿಎಂ ಎಸ್.ಎಂ. ಕೃಷ್ಣ (SM Krishna) ಅವರ ಅಂತಿಮ ದರ್ಶನಕ್ಕೆ ಶಿವಣ್ಣ ಆಗಮಿಸಿದರು. ಅವರೊಂದಿನ ಒಡನಾಟವನ್ನು ಶಿವಣ್ಣ (Shivarajkumar) ಸ್ಮರಿಸಿದರು. ವೀರಪ್ಪನ್ ಅಪ್ಪನ ಅಪಹರಣ ಮಾಡಿದ ಸಂದರ್ಭದಲ್ಲಿ ಎಸ್.ಎಂ ಕೃಷ್ಣರವರು ನಮ್ಮ ಕುಟುಂಬದ ಜೊತೆ ನಿಂತಿದ್ದರು.
Advertisement
ಶಿವಣ್ಣ ಮಾತನಾಡಿ, ಎಸ್.ಎಂ ಕೃಷ್ಣ ಅವರ ಮೇಲೆ ತುಂಬಾ ಗೌರವಿದೆ. ಸಿಎಂ ಅಂದರೆ ಹೇಗಿರಬೇಕು ಅನ್ನೋದಾದ್ರೆ ಕೃಷ್ಣ ಅವರಂತಿರಬೇಕು. ಶಿಸ್ತು ಅವರು ಮಾಡುವ ಕೆಲಸದಲ್ಲಿ ಇರುತ್ತಿತ್ತು. ವೀರಪ್ಪನ್ ಅಪ್ಪನ ಅಪಹರಣ ಮಾಡಿದ ಸಂದರ್ಭದಲ್ಲಿ ಅವರು ನಮ್ಮ ಕುಟುಂಬದ ಜೊತೆ ನಿಂತಿದ್ದರು. ಅದನ್ನು ನಾವು ಯಾವತ್ತು ಮರೆಯೋದಿಲ್ಲ. ವೈಯಕ್ತಿಕವಾಗಿ ನಮಗೂ ಅವರೊಂದಿಗೆ ಒಡನಾಟವಿದೆ. ಅವರ ಇಡೀ ಕುಟುಂಬದ ಜೊತೆ ಒಳ್ಳೆಯ ಬಾಂಧವ್ಯವಿದೆ.
Advertisement
Advertisement
ಖಂಡಿತ ಅವರಿಲ್ಲ ಅನ್ನೋದು ದುಃಖ ಆಗುತ್ತದೆ. ಅವರಿಗೆ 92 ವರ್ಷವಾಗಿತ್ತು. ಆದರೆ ಅವರಿಲ್ಲ ಅನ್ನುವ ನಷ್ಟವಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಶಿವಣ್ಣ ಮಾತನಾಡಿದ್ದಾರೆ.
Advertisement
ಇನ್ನೂ ಕರ್ನಾಟಕ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ವಿದೇಶಾಂಗ ಸಚಿವ, ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ (92) ಅವರು ಮಂಗಳವಾರ ಬೆಳಗ್ಗೆ 3:30ಕ್ಕೆ ವಿಧಿವಶರಾಗಿದ್ದಾರೆ.