ಚಿಕ್ಕಬಳ್ಳಾಪುರ: ನಟ ಡಾ.ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಶಕ್ತಿಧಾಮ ಶಾಲೆಯ ವಿದ್ಯಾರ್ಥಿಗಳು ಬೋಗನಂದಿಶ್ವರ ದೇವಸ್ಥಾನ ಹಾಗೂ ನಂದಿ ಬೆಟ್ಟಕ್ಕೆ ಇಂದು ಭೇಟಿ ನೀಡಿದರು.
ಡಾ.ರಾಜ್ ಕುಟುಂಬದ ಟ್ರಸ್ಟ್‍ವೊಂದರ ಶಕ್ತಿಧಾಮ ಶಾಲೆಯ ವಿದ್ಯಾರ್ಥಿಗಳು, ಬೆಂಗಳೂರು ಹಾಗೂ ಸುತ್ತಮುತ್ತ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದು ಇಂದು ಚಿಕ್ಕಬಳ್ಳಾಪುರ ತಾಲೂಕಿನ ಪುರಾಣ ಪ್ರಸಿದ್ಧ ನಂದಿ ಗ್ರಾಮದಲ್ಲಿರುವ ಶ್ರೀ ಭೋಗನಂದಿಶ್ವರ ದೇವಸ್ಥಾನ ಹಾಗೂ ನಂದಿ ಹಿಲ್ಸ್‌ಗೆ ಪ್ರವಾಸ ಹಮ್ಮಿಕೊಂಡಿದ್ದರು.
Advertisement
Advertisement
ಚಿಕ್ಕಬಳ್ಳಾಪುರದ ನಂದಿ ದೇವಸ್ಥಾನದ ಆಗಮಿಸಿದ ಶಿವರಾಜ್ ಕುಮಾರ್ ದಂಪತಿ, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದ ಆವರಣದಲ್ಲಿ ಶಕ್ತಿಧಾಮದ ವಿದ್ಯಾರ್ಥಿನಿಯರ ಜೊತೆಗೂಡಿ ತಿಂಡಿ ತಿಂದರು.
Advertisement
ಇದೇ ಸಂದರ್ಭದಲ್ಲಿ ಶಕ್ತಿಧಾಮದ ವಿದ್ಯಾರ್ಥಿನಿಯರು ಗೀತಾ ಶಿವರಾಜ್ ಕುಮಾರ್‍ಗೆ ಕೈ ತುತ್ತು ತಿನ್ನಿಸಿದರು. ಗೀತಾ ಶಿವರಾಜ್ ಕುಮಾರ್ ಅವರು ಸಹ ಶಾಲೆಯ ಮಕ್ಕಳುಗಳಿಗೆ ಕೈ ತುತ್ತು ತಿನ್ನಿಸಿ ಸಂತಸ ಪಟ್ಟರು.
Advertisement
ದೇವಸ್ಥಾನದ ಆವರಣದಲ್ಲಿ ತಿಂಡಿ ತಿಂದ ನಂತರ ನಟ ಶಿವಣ್ಣ ದಂಪತಿ, ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಶಕ್ತಿಧಾಮದ 140ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸಂಸ್ಥೆಯ ಬಸ್ ನಲ್ಲಿ ಪ್ರವಾಸಿ ತಾಣ ನಂದಿಗಿರಿಧಾಮದತ್ತ ಪ್ರಯಾಣ ಬೆಳೆಸಿದರು. ಇದನ್ನೂ ಓದಿ: ಹೊಸ ಮನೆಗೆ ರಶ್ಮಿಕಾ ಶಿಫ್ಟ್ – ಮತ್ತೊಂದು ಅಪಾರ್ಟ್‍ಮೆಂಟ್ ಖರೀದಿ?
ನಂದಿಗಿರಿಧಾಮಕ್ಕೆ ಬರುತ್ತಿದ್ದಂತೆ ಶಕ್ತಿಧಾಮದ ವಿದ್ಯಾರ್ಥಿನಿಯರು ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿ ಗಿರಿಧಾಮದಲ್ಲಿರುವ ತಂಪಾದ ವಾತವರಣದ ಮದ್ಯೆ ಸುಂದರ ಉದ್ಯಾನವನಗಳಲ್ಲಿ ಕೆಲ ಕಾಲ ಕಳೆದರು. ನಂತರ ವ್ಯೂ ಪಾಯಿಂಟ್‍ನತ್ತ ಸಾಗಿ ನಾಲ್ಕು ಸಾವಿರ ಅಡಿಗಳಿರುವ ಭೂಮಿಯನ್ನು ನೋಡಿ ಸಂತಸಗೊಂಡರು.
ಇದೇ ಸಂದರ್ಭದಲ್ಲಿ ದಿವಂಗತ ನಟ ಪುನೀತ್ ರಾಜ್ ಕುಮಾರ್ ನಟಿಸಿದ ರಾಜ್‍ಕುಮಾರ್ ಹಾಡನ್ನು ಹಾಡಿ ಭಾವುಕರಾದರು. ನಂದಿ ದೇವಸ್ಥಾನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಟ ಶಿವರಾಜ್ ಕುಮಾರ್, ನಮ್ಮ ತಂದೆ ತಾಯಿ ಹಾಗೂ ಕೆಂಪಯ್ಯನವರು ಆರಂಭಿಸಿದ ಸಂಸ್ಥೆಯೆ ಶಕ್ತಿಧಾಮ. ಸಾಕಷ್ಟು ಟ್ರಸ್ಟಿಗಳು ಸೇರಿ ಶಕ್ತಿಧಾಮ ಆರಂಭ ಮಾಡಿದ್ದಾರೆ. ಶಕ್ತಿಧಾಮದಲ್ಲಿ 150 ಮಂದಿ ಮಕ್ಕಳಿದ್ದಾರೆ. ಈ ವರ್ಷದಲ್ಲಿ ಈ ಸಂಖ್ಯೆ 200ಕ್ಕೇರಲಿದೆ. ಅವರಿಗೆ ಊಟ ವಸತಿ ಶಾಲೆ ಎಲ್ಲಾ ಜವಾಬ್ದಾರಿ ನಮ್ಮದು. ಮಕ್ಕಳಿಗೆ ಶೈಕ್ಷಣಿಕ ಜ್ಞಾನದ ಸಲುವಾಗಿ ಪ್ರವಾಸ ಕೈಗೊಳ್ಳಲಾಗಿದೆ ಎಂದರು. ಇದನ್ನೂ ಓದಿ: ನಾನು Useless ಬಾಯ್‍ಫ್ರೆಂಡ್ಸ್ ಜೊತೆ ಡೇಟಿಂಗ್ ಮಾಡಿದ್ದೇನೆ: ತಾಪ್ಸಿ ಪನ್ನು