ಮುಂಬೈ: ಪುಷ್ಪ ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಮನೆಯಲ್ಲಿರುವ ವಸ್ತುಗಳನ್ನು ಪ್ಯಾಕಿಂಗ್ ಮಾಡುತ್ತಿರುವ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ನೋಡಿ ಅಭಿಮಾನಿಗಳಲ್ಲಿ ರಶ್ಮಿಕಾ ಮಂದಣ್ಣ ಹೊಸ ಮನೆಗೆ ಶಿಫ್ಟ್ ಆಗುತ್ತಿದ್ದಾರಾ? ಮತ್ತು ಹೊಸ ಮನೆ ಖರೀದಿಸಿದ್ದಾರಾ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.
2021ರ ಫೆಬ್ರವರಿಯಲ್ಲಿ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಹೊಸ ಮನೆಯನ್ನು ಖರೀದಿಸಿದ್ದರು. ರಶ್ಮಿಕಾ ಈಗಾಗಲೇ ಮಿಷನ್ ಮಜ್ನು ಮತ್ತು ಗುಡ್ ಬೈ ಎಂಬ ಎರಡು ಹಿಂದಿ ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಹಾಗಾಗಿ ಹೋಟೆಲ್ಗಳಲ್ಲಿ ಉಳಿಯುವ ಬದಲು ಮುಂಬೈನಲ್ಲಿ ಸುಲಭವಾಗಿ ಕೆಲಸ ಮಾಡಲು ಹೊಸ ಮನೆ ಖರೀದಿಸಿದ್ದರು. ಇದನ್ನೂ ಓದಿ: ನಾನು Useless ಬಾಯ್ಫ್ರೆಂಡ್ಸ್ ಜೊತೆ ಡೇಟಿಂಗ್ ಮಾಡಿದ್ದೇನೆ: ತಾಪ್ಸಿ ಪನ್ನು
ಇದೀಗ ಮತ್ತೆ ಅಲ್ಲಿಂದ ರಶ್ಮಿಕಾ ಮಂದಣ್ಣ ಶಿಫ್ಟ್ ಆಗುತ್ತಿರುವಂತೆ ಕಾಣಿಸುತ್ತದೆ. ಇತ್ತೀಚೆಗಷ್ಟೇ ರಶ್ಮಿಕಾ ಹೈದರಾಬಾದ್ನಲ್ಲಿ ಕಾಣಿಸಿಕೊಂಡಿದ್ದರು. ಫೆಬ್ರವರಿ 2ರಂದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರವಾಸಕ್ಕೆ ತೆರಳಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಇದೀಗ ರಟ್ಟಿನ ಬಾಕ್ಸ್ಗಳಲ್ಲಿ ವಸ್ತುಗಳನ್ನು ತುಂಬುತ್ತಿರುವ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಶಿಫ್ಟಿಂಗ್ ಬಹಳ ಸುಲಭವಲ್ಲ. ಆದರೆ ನನ್ನ ಕೆಲಸವನ್ನು ನಾನೇ ಮಾಡುತ್ತೇನೆ. ಹಾಗಂತ ನಾನು ಹುಡುಗರಿಗೆ ಅಣುಕಿಸುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ನಟ ಅಲ್ಲು ಅರ್ಜುನ್ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಟಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಭಾರೀ ಸದ್ದು ಮಾಡಿತ್ತು. ಜೊತೆಗೆ ಸಿನಿಪ್ರಿಯರ ಮನಸ್ಸನ್ನು ಗೆದ್ದಿತ್ತು. ಈ ಸಿನಿಮಾದ ಮುಂದುವರಿದ ಭಾಗ ಡಿಸೆಂಬರ್ 2022ರಲ್ಲಿ ತೆರೆ ಮೇಲೆ ಬರಲಿದೆ. ಸದ್ಯ ರಶ್ಮಿಕಾ ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ನಟಿಸಿರುವ ಮಿಷನ್ ಮಜ್ನು ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದನ್ನೂ ಓದಿ: ‘ಮರಳಿ ಬರುತ್ತಿದ್ದೇನೆ’ – 56ರ ಹರೆಯದಲ್ಲೂ ಜಿಮ್ನಲ್ಲಿ ಬೆವರಿಳಿಸುತ್ತಿದ್ದಾರೆ ಸಲ್ಲು