ಮುಂಬೈ: ಯಾವಾಗಲೂ ತಮ್ಮ ನೇರ ನುಡಿಗೆ ಸುದ್ದಿಯಾಗುವ ಬಾಲಿವುಡ್ ನಟಿ ತಾಪ್ಸಿ ಪನ್ನು, ಇಂದು ಸಹ ಸಂದರ್ಶಕರೊಬ್ಬರು ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರಿಸಿ ಸುದ್ದಿಯಾಗಿದ್ದಾರೆ.
ತಾಪ್ಸಿ ಪನ್ನು ಮತ್ತು ತಾಹಿರ್ ರಾಜ್ ಭಾಸಿನ್ ನಟನೆಯ ‘ಲೂಪ್ ಲಪೇಟಾ’ ಸಿನಿಮಾ ಶೀಘ್ರದಲ್ಲೇ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಪ್ರಮೋಷನ್ಗೆ ಬಂದಾಗ ಸಂದರ್ಶಕರು, ನೀವು ಯೂಸ್ಲೆಸ್ (ಅಪ್ರಯೋಜಕ) ಬಾಯ್ಫ್ರೆಂಡ್ ಜೊತೆ ಡೇಟ್ ಮಾಡಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅವರು, ಹೌದು, ನಾನು ಅನೇಕ ಯೂಸ್ಲೆಸ್ ಬಾಯ್ಫ್ರೆಂಡ್ಗಳ ಜೊತೆ ಡೇಟಿಂಗ್ ಮಾಡಿದ್ದೇನೆ ಎಂದು ನೇರವಾಗಿ ಉತ್ತರಿಸಿದ್ದಾರೆ. ಇದಕ್ಕೆ ಸಹನಟ ತಾಹಿರ್, ಅವರು ದೆಹಲಿಯಿಂದ ಬಂದವರು ಎಂದು ಕಿಚಾಯಿಸಿದರು. ಅದನ್ನು ಒಪ್ಪಿಕೊಂಡು ತಾಪ್ಸಿ ನಕ್ಕರು. ಇದನ್ನೂ ಓದಿ: ‘ಮರಳಿ ಬರುತ್ತಿದ್ದೇನೆ’ – 56ರ ಹರೆಯದಲ್ಲೂ ಜಿಮ್ನಲ್ಲಿ ಬೆವರಿಳಿಸುತ್ತಿದ್ದಾರೆ ಸಲ್ಲು
ಹಿಂದೊಮ್ಮೆ ತಾಪ್ಸಿ ಅವರಿಗೆ ಬಾಯ್ಫ್ರೆಂಡ್ ಬಗ್ಗೆ ಕೇಳಿದಾಗ, ನಾನು ಮಥಿಯಾಸ್ ಜೊತೆ ಲವ್ ರಿಲೇಶನ್ ಶಿಪ್ನಲ್ಲಿದ್ದೇನೆ. ಆದರೆ ಸದ್ಯಕ್ಕೆ ಮದುವೆ ಬಗ್ಗೆ ಯೋಚನೆ ಮಾಡಿಲ್ಲ. ತನಗೆ ಮಕ್ಕಳು ಬೇಕೆನಿಸಿದಾಗ ಮದುವೆಯಾಗುತ್ತೇನೆ. ಸದ್ಯಕ್ಕೆ ಆ ಆಲೋಚನೆ ಇಲ್ಲ. ಈಗ ನನ್ನ ಗಮನವೆಲ್ಲ ಸಿನಿಮಾದತ್ತ ಇದೆ. ತಾನು ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಸದಾ ಪ್ರತ್ಯೇಕವಾಗಿ ನೋಡುತ್ತೇನೆ. ಎರಡನ್ನೂ ಮಿಕ್ಸ್ ಮಾಡುವುದಿಲ್ಲ ಎಂದು ಲವ್ ಲೈಫ್ ಹಾಗೂ ಬಾಯ್ಫ್ರೆಂಡ್ ಬಗ್ಗೆ ತಾಪ್ಸಿ ಹೇಳಿಕೊಂಡಿದ್ದರು.
ಪ್ರಸ್ತುತ ತಾಪ್ಸಿ ‘ಲೂಪ್ ಲಪೇಟಾ’ ಸಿನಿಮಾದ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಜೋಡಿಯಾಗಿ ತಾಹಿರ್ ರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ಆಕಾಶ್ ಭಾಟಿಯಾ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಇದು ಕಾಮಿಡಿ ಮತ್ತು ಥ್ರಿಲ್ಲರ್ ಸಿನಿಮಾವಾಗಿದೆ. ಇದನ್ನೂ ಓದಿ: ಸುಧಾಕರ್ ಏನು ಸಿಎಂಗಿಂತ ದೊಡ್ಡವರಾ? ಬಿಜೆಪಿ ಶಾಸಕ ಕಿಡಿ