– ದುಬೈನಿಂದ ಸಂದೇಶ ಕಳಿಸಿದವರಿಗೆ ಲುಕ್ ಔಟ್ ನೋಟಿಸ್
– ಸ್ಥಳೀಯ ಯುವಕ ನಾಪತ್ತೆ, ಪೊಲೀಸರಿಂದ ತನಿಖೆ ಮುಂದುವರಿಕೆ
ಶಿವಮೊಗ್ಗ: ಇಲ್ಲಿನ ಸಹ್ಯಾದ್ರಿ ಕಾಲೇಜಿನಲ್ಲಿ ಆರಂಭಗೊಂಡ ವಸ್ತ್ರ ಸಂಹಿತೆ ವಿವಾದ ಸದ್ಯಕ್ಕೆ ಶಮನಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದುವರೆಗೂ ಕ್ಯಾಂಪಸ್‍ನ ಒಳಗಿದ್ದ ವಿವಾದ ಈ ಹೊರಗೂ ವ್ಯಾಪಿಸಿದೆ. ಪರ-ವಿರೋಧ ಚರ್ಚೆ, ವಾಗ್ವಾದ ಆರಂಭಗೊಂಡಿವೆ. ಬೆಂಕಿಗೆ ತುಪ್ಪ ಹಾಕುವಂತೆ ಎರಡು ವಾಟ್ಸಪ್ ವಿಡಿಯೋಗಳು ವಾಟ್ಸಪ್‍ಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ.
ಶಿವಮೊಗ್ಗ ಮೂಲದ ದುಬೈನಲ್ಲಿ ಇರುವ ಇಬ್ಬರು ಯುವಕರು ಅತ್ಯಂತ ಅಶ್ಲೀಲವಾಗಿ ಒಂದು ಧರ್ಮದವರ ಅವಹೇಳನ ಮಾಡಿ ವಾಟ್ಸಪ್ ವಿಡಿಯೋ ಕಳಿಸಿದ್ದಾರೆ. ಇದು ವ್ಯಾಪಕವಾಗಿ ಹರಡುತ್ತಿದ್ದಂತೆ, ಇದಕ್ಕೆ ಪ್ರತಿಯಾಗಿ ಶಿವಮೊಗ್ಗದ ಯುವಕ ಅತ್ಯಂತ ಕೀಳು ಭಾಷೆಯಲ್ಲಿ ಇನ್ನೊಂದು ವಿಡಿಯೋ ಮಾಡಿ ಹಂಚಿದ್ದಾನೆ. ಈ ಎರಡೂ ವಿಡಿಯೋಗಳು ವ್ಯಾಪಕವಾಗಿ ಹರಡುತ್ತಿದ್ದು, ಪೆÇಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕೋಟೆ ಠಾಣೆಯಲ್ಲಿ ಸ್ವಯಂದೂರು ದಾಖಲಿಸಿಕೊಂಡಿದ್ದಾರೆ. ಇಂತಹ ವೀಡಿಯೋ ಹರಡಿ ಸಾಮಾಜಿಕ ನೆಮ್ಮದಿಗೆ ಭಂಗ ತರುವ ವ್ಯಕ್ತಿಗಳ ವಿರುದ್ದ ಕ್ರಮಕೈಗೊಳ್ಳುವ ವ್ಯಕ್ತಿಗಳ ವಿರುದ್ದ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ.
Advertisement
ಈ ವಿವಾದದ ಹಿನ್ನೆಲೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಂದೇಶವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಶಿವಮೊಗ್ಗ ಎಸ್ಪಿ ಅಭಿನವ್ ಖರೆ ತಿಳಿಸಿದ್ದಾರೆ.
Advertisement
ವಾಟ್ಸಪ್ ಗ್ರೂಪ್‍ಗಳಲ್ಲಿ ಇಂಥ ಸಂದೇಶ ಹಾಕಿದರೆ ಅಡ್ಮಿನ್ ಮೇಲೆ ಹೊಣೆ ಹೊರಿಸಿ, ಕ್ರಮ ಜರುಗಿಸುತ್ತೇವೆ. ಈಗಾಗಲೇ ವಾಟ್ಸಪ್ ವಿಡಿಯೋ ಮೆಸೇಜ್‍ಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ. ದುಬೈನಿಂದ ಧಮ್ಕಿ ಹಾಕಿದ ಯುವಕರಿಗೆ ಲುಕೌಟ್ ನೋಟಿಸ್ ಜಾರಿಯಾಗಿದೆ. ಸ್ಥಳೀಯ ಯುವಕ ನಾಪತ್ತೆ ಅಗಿದ್ದು, ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
Advertisement