ಅದೆಷ್ಟೇ ಸೀಸನ್ ಬದಲಾದರೂ ಶರ್ಟ್ ಡ್ರೆಸ್ ಫ್ಯಾಷನ್ ಮಾತ್ರ ಸೈಡಿಗೆ ಸರಿಯುವುದಿಲ್ಲ. ಬದಲಿಗೆ ನಾನಾ ಸ್ಟೈಲಿಂಗ್‌ಗಳಲ್ಲಿ ಡಿಫರೆಂಟ್ ವಿನ್ಯಾಸದಲ್ಲಿ ಆಗಾಗ್ಗೆ ಲಗ್ಗೆ ಇಡುತ್ತಲೇ ಇರುತ್ತದೆ. ಪ್ರತಿ ಹುಡುಗಿಯ ಬಳಿಯೂ ಒಂದಲ್ಲ ಒಂದು ಶರ್ಟ್ ಡ್ರೆಸ್ (Shirt Dress) ಇದ್ದೇ ಇರುತ್ತದೆ. ಅದು ಸಿಂಪಲ್ ಆಗಿರಬಹುದು ಅಥವಾ ಪ್ರಿಂಟೆಡ್ ಆಗಿರಬಹುದು, ಇಲ್ಲವೇ ಚೆಕ್ಸ್ ಹೀಗೆ ನಾನಾ ವಿನ್ಯಾಸದ್ದಾಗಿರಬಹುದು. ಸದಾ ಒಂದೇ ಲುಕ್‌ನಲ್ಲಿ ಕಾಣುವ ಬದಲು ಧರಿಸುವ ಶೈಲಿಯನ್ನು ಬದಲಿಸಿದಲ್ಲಿ ನ್ಯೂ ಲುಕ್ ನೀಡಬಹುದು. ಇದನ್ನೂ ಓದಿ:ಕಾನೂನಿಗಿಂತ ಯಾರು ಮೇಲಲ್ಲ, ಈ ಕೃತ್ಯ ಮಾಡುವ ವ್ಯಕ್ತಿತ್ವ ದರ್ಶನ್‌ದಲ್ಲ- ಮೌನ ಮುರಿದ ಸುಮಲತಾ
ನಿಮ್ಮ ಬಳಿಯಿರುವ ಯಾವುದೇ ಬಗೆಯ ಶರ್ಟ್ ಡ್ರೆಸ್‌ಗೆ ಹೊಸ ಲುಕ್ ನೀಡಬಹುದು. ಸದಾ ಹಳೇ ಸ್ಟೈಲಿಂಗ್‌ನಲ್ಲೇ ಕಾಣಿಸಿಕೊಳ್ಳುತ್ತಿರುವ ನಿಮಗೆ ಈ ಹೊಸ ಐಡಿಯಾ ಡಿಫರೆಂಟ್ ಇಮೇಜ್ ನೀಡಬಹುದು. 3 ಸಿಂಪಲ್ ಐಡಿಯಾಗಳು ಇಲ್ಲಿವೆ.
ಶರ್ಟ್ ಡ್ರೆಸ್‌ಗೆ ಬಿಗ್ ಬೆಲ್ಟ್‌ಗಳನ್ನು ಧರಿಸಿದಲ್ಲಿ ಇಡೀ ಡ್ರೆಸ್‌ನ ಲುಕ್ ಬದಲಾಗುವುದು. ಜೊತೆಗೆ ನೋಡಲು ಡಿಫರೆಂಟಾಗಿ ಕಾಣಿಸುವುದು. ನೋಡಲು ಮಿಡಿ ಸ್ಕರ್ಟ್‌ಗಳಂತೆ ಕಾಣಿಸುವುದು. ಇದೀಗ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಕಲ್ ಬೆಲ್ಟ್‌ಗಳು ಹಾಗೂ ಸ್ಟೇಟ್‌ಮೆಂಟ್ ಬೆಲ್ಟ್‌ಗಳು ಈ ಡ್ರೆಸ್‌ಗೆ ಸಖತ್ತಾಗಿ ಮ್ಯಾಚ್ ಆಗುತ್ತವೆ. ಬ್ಲ್ಯಾಕ್ ಶೇಡ್ ಹೊರತುಪಡಿಸಿ, ಇತರೇ ಡಿಸೈನ್ ಹಾಗೂ ಕಲರ್‌ಗಳಲ್ಲೂ ಲಭ್ಯವಿರುವ ಇವನ್ನು ಧರಿಸಿದಲ್ಲಿ, ಹೊಸ ಡ್ರೆಸ್‌ನಂತೆ ಕಾಣುವುದು.
ಇನ್ನರ್ ಟಾಪ್ ಧರಿಸಿ ಅದರ ಮೇಲೆ ಶರ್ಟ್ ಡ್ರೆಸ್ ಧರಿಸಬಹುದು. ಆದರೆ ಇದಕ್ಕಾಗಿ ಒಂದೆರೆಡು ಬಟನ್‌ಗಳು ಓಪನ್ ಆಗಿರಬೇಕು. ಆಗ ಮಾತ್ರ, ಮಿಕ್ಸ್ ಮ್ಯಾಚ್ ಆದಂತಿರುವ ಶರ್ಟ್ ಡ್ರೆಸ್ ಹೈಲೈಟಾಗುತ್ತದೆ. ಕಾಂಟ್ರಸ್ಟ್ ಶೇಡ್‌ನವನ್ನು ಧರಿಸಬಹುದು. ಬೇಕಿದ್ದಲ್ಲಿ ಶರ್ಟ್ ಡ್ರೆಸ್‌ನ ಬಟನ್ ಕೋಟ್‌ನಂತೆ ಅರ್ಧಂಬರ್ಧ ಓಪನ್ ಮಾಡಬಹುದು. ಕೋಟ್ ಡ್ರೆಸ್‌ನಂತೆ ಕಾಣಿಸುವುದು.
ಮಳೆಗಾಲದಲ್ಲೂ ಲೇಯರ್ ಲುಕ್ ನೀಡಬಹುದು. ಶರ್ಟ್ ಡ್ರೆಸ್ ಮೇಲೆ ತೆಳುವಾದ ಅಥವಾ ಶೀರ್ ಕೋಟ್‌ನಂತಹ ಲಾಂಗ್ ಶ್ರಗ್ಸ್ ಅಥವಾ ಜಾಕೆಟ್ ಧರಿಸಿದಲ್ಲಿ ಕಂಪ್ಲೀಟ್ ಡಿಫರೆಂಟ್ ಲುಕ್ ನೀಡುವುದರಲ್ಲಿ ಸಂಶಯವಿಲ್ಲ.