Latest

ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾಗೆ ಬೈ ಬೈ: ಅಷ್ಟಕ್ಕೂ ಆಗಿದ್ದೇನು?

ಸಿನಿಮಾ ಜತೆಗೆ ರಿಯಾಲಿಟಿ ಶೋ ಅಂತಾ ಆಕ್ಟೀವ್ ಆಗಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ರು. ಅದ್ಯಾಕೋ ಸೋಷಿಯಲ್ ಮೀಡಿಯಾ ಮೇಲೆ ಶಿಲ್ಪಾ ಶೆಟ್ಟಿ ಬೇಸರ ಮಾಡಿಕೊಂಡಿದ್ದಾರೆ. ಇದೀಗ ದಿಢೀರ್ ಅಂತಾ ಸಾಮಾಜಿಕ ಜಾಲತಾಣದಿಂದ ಹೊರಗುಳಿಯುತ್ತೇನೆ ಅಂತಾ ಪೋಸ್ಟ್ ಮಾಡಿ, ಬ್ರೇಕ್ ತಗೆದುಕೊಂಡಿದ್ದಾರೆ.

ಸೆಲೆಬ್ರೆಟಿಗಳು ಅಭಿಮಾನಿಗಳ ಜತೆಗೆ ಕನೆಕ್ಟ್ ಆಗಲು ಸೋಷಿಯಲ್ ಮೀಡಿಯಾವನ್ನು ಹೆಚ್ಚು ಬಳಕೆ ಮಾಡುತ್ತಾರೆ. ಕೆಲವೊಮ್ಮೆ ಇದು ಅನಿವಾರ್ಯ ಕೂಡ ಆಗಿ ಬಿಡುತ್ತದೆ. ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದವರು.ಈಗ ಅವರು ಬ್ರೇಕ್ ತಗೆದುಕೊಂಡಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದು, ನಾನು ಹೊಸ ಅವತಾರವನ್ನು ಕಂಡುಕೊಳ್ಳುವವರೆಗೂ ಸೋಶಿಯಲ್ ಮೀಡಿಯಾದಿಂದ ದೂರವಿರಲು ನಿರ್ಧಾರ ಮಾಡಿದ್ದೇನೆ ಅಂತಾಬ್ಲಾಂಕ್‌ ಫೋಟೋ ಜತೆ ಪೋಸ್ಟ್‌ ಮಾಡಿದ್ದಾರೆ. ಶಿಲ್ಪಾರ ದಿಢೀರ್ ನಿರ್ಧಾರ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ. ಇದನ್ನೂ ಓದಿ: ಮಹೇಶ್ ಬಾಬು ಮಾತಿಗೆ ಕಂಗನಾ ಸಾಥ್: ಬಾಲಿವುಡ್ ವರ್ಸಸ್ ಸೌತ್

ಶಿಲ್ಪಾ ಶೆಟ್ಟಿ ಪತಿ ರಾಜ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ವಿಚಾರದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲೂ ನಟಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದರು. ಇದೀಗ ಏಕಾಎಕಿ ಎನು ಆಯ್ತು ಅಂತಾ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರಿ ಅಂತಾ ಅಭಿಮಾನಿಗಳು ಕೇಳಿಕೊಳ್ತಿದ್ದಾರೆ.

Leave a Reply

Your email address will not be published.

Back to top button