CinemaLatestMain PostSouth cinema

ಮಹೇಶ್ ಬಾಬು ಮಾತಿಗೆ ಕಂಗನಾ ಸಾಥ್: ಬಾಲಿವುಡ್ ವರ್ಸಸ್ ಸೌತ್

ಕ್ಷಿಣ ಭಾರತದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಇತ್ತೀಚಿನ ಹೇಳಿಕೆ ಅದೆಷ್ಟು ಸಂಚಲನ ಮಾಡುತ್ತಿದೆ ಅಂದ್ರೆ ಬಾಲಿವುಡ್ ನನ್ನ ಭರಿಸಲು ಸಾಧ್ಯವಿಲ್ಲ ಎಂದ ಮಾತಿಗೆ ಇದೀಗ ನಟಿ ಕಂಗನಾ ರಣಾವತ್ ಬೆಂಬಲ ಸೂಚಿಸಿದ್ದಾರೆ.

ನಟ ಮಹೇಶ್ ಬಾಬು ಇತ್ತೀಚಿನ ಈವೆಂಟ್‌ವೊಂದರಲ್ಲಿ ಭಾಗಿಯಾಗಿದಾಗ, ನನಗೆ ಬಾಲಿವುಡ್ ಸಾಕಷ್ಟು ಆಫರ್‌ಗಳು ಬಂದಿವೆ ಆದರೆ ಬಾಲಿವುಡ್‌ಗೆ ನನ್ನ ತಡ್ಕೋಳಕೆ ಆಗಲ್ಲ. ಹಾಗಾಗಿ ನಾನು ಚಿತ್ರ ಮಾಡಲಿಲ್ಲ ಅಂತಾ ಉತ್ತರಿಸಿದ್ದಾರೆ. ತೆಲುಗು ಬಿಟ್ಟು ಬೇರೆ ಚಿತ್ರರಂಗಕ್ಕೆ ನಾನು ಹೋಗಬೇಕು ಎಂಬ ಯೋಚನೆ ನನಗಿಲ್ಲ ಎಂಬ ನಟನ ಹೇಳಿಕೆ ಇದೀಗ ಕಂಗನಾ ಸಹಮತ ಸೂಚಿಸಿದ್ದಾರೆ.

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಸರಿಯಾಗಿಯೇ ಹೇಳಿದ್ದಾರೆ. ಬಾಲಿವುಡ್ ಅವರನ್ನು ನಿಭಾಯಿಸಲು ಸಾಧ್ಯವಿಲ್ಲ ನಾನು ಅದನ್ನು ಒಪ್ಪುತ್ತೇನೆ. ಮಹೇಶ್ ಬಾಬು ಅವರು ತಮ್ಮ ಕೆಲಸದ ಬಗ್ಗೆ ಗೌರವ ಹೊಂದಿದ್ದಾರೆ. ಬಿಟೌನ್‌ನ ಅದೆಷ್ಟೋ ನಿರ್ಮಾಪಕರು ಮಹೇಶ್‌ರನ್ನ ಸಂಪರ್ಕಿಸಿದ್ದಾರೆ. ಆದರೆ ಮಹೇಶ್ ಬಾಬು ಅವರು ತಮ್ಮ ನಿಲುವನ್ನು ಗಟ್ಟಿಗೊಳಿಸಿದ್ದಾರೆ. ಅವರ ಹೇಳಿಕೆ ವಿವಾದ ಮಾಡುವ ಅಗತ್ಯವಿಲ್ಲ, ಅವರಿಗೆ ಚಿತ್ರರಂಗದ ಮೇಲೆ ಗೌರವವಿದೆ ಅಂತಾ ನಟ ಮಹೇಶ್ ಬಾಬು ಪರ ಕಂಗನಾ ನಿಂತಿದ್ದಾರೆ. ಇದನ್ನೂ ಓದಿ: ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

ದಕ್ಷಿಣದ ಸಿನಿಮಾಗಳ ಎದುರು ಹಿಂದಿ ಸಿನಿಮಾಗಳು ಮಂಕಾಗಿದೆ. ಇತ್ತೀಚೆಗೆ `ಪುಷ್ಪ’ ಚಿತ್ರದಿಂದ `ಕೆಜಿಎಫ್ 2′ ಮತ್ತು `ಸರ್ಕಾರು ವಾರಿ ಪಾಟ’ ಚಿತ್ರದ ವರೆಗೂ ಹಿಂದಿ ಚಿತ್ರಗಳಿಗೆ ಪೈಪೋಟಿ ಕೊಡುತ್ತಾ ಬಂದಿದೆ. ಚಿತ್ರರಂಗದಲ್ಲಿ ಬಾಲಿವುಡ್ ವರ್ಸಸ್ ಸೌತ್ ಸಿನಿರಂಗ ಎಂಬ ವಾತಾವರಣ ಸೃಷ್ಟಿಯಾಗಿದೆ. ಇದೀಗ ರಿಲೀಸ್ ಆಗಿರುವ ಮಹೇಶ್ ಬಾಬು ನಟನೆಯ `ಸರ್ಕಾರು ವಾರಿ ಪಾಟ’ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡುತ್ತಿದೆ.

Leave a Reply

Your email address will not be published.

Back to top button