ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಯಶಸ್ವಿಯಾದರೆ, ಮುಂದಿನ ಪ್ರಧಾನಿ ಯಾರು ಎಂಬ ಪ್ರಶ್ನೆಗೆ ವಿರೋಧ ಪಕ್ಷದ ನಾಯಕ ಶೆಹಬಾಜ್ ಷರಿಫ್ ಹೆಸರು ವ್ಯಾಪಕವಾಗಿ ಕೇಳಿಬರುತ್ತಿದೆ.
ಇಂದು ನಡೆಯಲಿರುವ ಅವಿಶ್ವಾಸ ನಿರ್ಣಯದ ಮೇಲೆ ಪ್ರಧಾನಿ ಪಟ್ಟದ ನಿರ್ಧಾರವಾಗಲಿದೆ. ಒಂದು ವೇಳೆ ಇಮ್ರಾನ್ ಖಾನ್ ತನ್ನ ಸ್ಥಾನದಿಂದ ಕೆಳಗಿಳಿದರೆ ಶೆಹಬಾಜ್ ಷರೀಫ್ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.
ಶಹಬಾಜ್ ಷರೀಫ್ ಯಾರು?
70 ವರ್ಷದ ಶೆಹಬಾಜ್ ಷರೀಫ್ ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಕಿರಿಯ ಸಹೋದರ. ಇವರು ಶ್ರೀಮಂತ ಷರೀಫ್ ರಾಜವಂಶದವರೂ ಹೌದು. ಪಾಕಿಸ್ತಾನಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದು, ಲಾಹೋರ್‌ನಲ್ಲಿ ಪಾಕಿಸ್ತಾನದ ಮೊದಲ ಆಧುನಿಕ ಸಮೂಹ ಸಾರಿಗೆ ವ್ಯವಸ್ಥೆ, ಹಲವಾರು ಮೂಲಸೌಕರ್ಯ ಮೆಗಾ-ಯೋಜನೆಗಳನ್ನು ಕಾರ್ಯಗತಗೊಳಿಸಿದ್ದಾರೆ. ಇದನ್ನೂ ಓದಿ: ಭಾರತವನ್ನು ಹೊಗಳಿದ ಇಮ್ರಾನ್ ಖಾನ್‍ಗೆ ಪಾಕ್ ಬಿಟ್ಟು ತೊರೆಯಿರಿ ಎಂದ ಷರೀಫ್ ಪುತ್ರಿ
ಶೆಹಬಾಜ್ ಷರೀಫ್ ಪಾಕಿಸ್ತಾನದ ಮಿಲಿಟರಿಯೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದು, ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿದ್ದ ಅವಧಿಯಲ್ಲಿ ಇವರು ರಾಜಕೀಯವಾಗಿ ಭಾರತದತ್ತ ಧನಾತ್ಮಕ ಒಲವು ತೋರಿದ್ದಾರೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಪಾಕ್ ಅನ್ನು ಟಿಶ್ಯೂ ಪೇಪರ್ ಆಗಿ ಬಳಸಿ ಎಸೆಯಲಾಗಿದೆ: ಇಮ್ರಾನ್ ಕಿಡಿ
ಶೆಹಬಾಜ್ ಷರೀಫ್ ಪಂಜಾಬ್‌ನಲ್ಲಿ ರಾಜಕೀಯ ಪ್ರವೇಶಿಸಿ 1997ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಮಿಲಿಟರಿ ದಂಗೆಯ ಬಳಿಕ 2000 ಇಸವಿಯಲ್ಲಿ ಅವರನ್ನು ಗಡಿಪಾರು ಮಾಡಿ ಸೌದಿ ಅರೇಬಿಯಾದಲ್ಲಿ ಸೆರೆಮನೆಗೆ ಕಳುಹಿಸಲಾಯಿತು. 2007ರಲ್ಲಿ ದೇಶಭ್ರಷ್ಟತೆಯಿಂದ ಹಿಂದಿರುಗಿ ಮತ್ತೆ ಪಂಜಾಬ್‌ನಲ್ಲಿ ತಮ್ಮ ರಾಜಕೀಯ ವೃತ್ತಿಯನ್ನು ಪುನರಾರಂಭಿಸಿದರು.
ಶೆಹಬಾಜ್ ಹಾಗೂ ಆವರ ಸಹೋದರ ನವಾಜ್ ಷರೀಫ್ ಹಲವಾರು ಭ್ರಷ್ಟಾಚಾರ ಪ್ರಕರಣವನ್ನು ಎದುರಿಸಿದ್ದಾರೆ. ಆದರೆ ಯಾವುದೇ ಆರೋಪದಲ್ಲಿಯೂ ಶೆಹಬಾಜ್ ತಪ್ಪಿತಸ್ಥರೆಂದು ಸಾಬೀತಾಗಿಲ್ಲ.