ರೇಣುಕಾಸ್ವಾಮಿ ಪ್ರಕರಣದಲ್ಲಿ (Renukaswamy Murder Case) ರೆಗ್ಯೂಲರ್ ಬೇಲ್‌ನಲ್ಲಿರುವ ದರ್ಶನ್ (Darshan) ಕುರಿತು ‘ರ‍್ಯಾಂಬೋ’ ಚಿತ್ರದ ನಟ ಶರಣ್ (Sharan) ಮಾತನಾಡಿದ್ದಾರೆ. ಈಗ ಬಂದಿರೋ ಸಮಸ್ಯೆ ಬಗೆಹರಿದು 2025ರಲ್ಲಿ ಒಳ್ಳೆಯದಾಗುತ್ತದೆ ಎಂದು ಆಪ್ತ ದರ್ಶನ್ ಕುರಿತು ನಟ ಮಾತನಾಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ವಿವಾದದ ನಡುವೆ ಬನ್ಸಾಲಿ ಕಚೇರಿಯಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್
Advertisement
ಏನು ತೊಂದರೆಯಿಲ್ಲ ಎಲ್ಲಾ ಸರಿ ಹೋಗುತ್ತದೆ. ಎಲ್ಲವೂ ಮುಂಚಿನ ಹಾಗೆ ಆಗುತ್ತದೆ. ಈಗ ಬಂದಿರೋ ಸಮಸ್ಯೆ ಬಗೆಹರಿದು 2025 ಒಳ್ಳೆದಾಗುತ್ತದೆ. ರೆಗ್ಯೂಲರ್ ಬೆಲ್ ನಂತರ ಆದಷ್ಟು ಬೇಗ ಅವರ ಆರೋಗ್ಯ ಚೇತರಿಸಿಕೊಳ್ಳಲಿ. ಮತ್ತೆ ಆ್ಯಕ್ಟಿವ್ ಆಗಿ ಸಿನಿಮಾ ಮಾಡಲಿ ಎಂದು ಆಶಿಸುತ್ತೇವೆ. ಆದಷ್ಟು ಬೇಗ ನಮ್ಮ ದರ್ಶನ್ ಸರ್ ನಮಗೆ ಸಿಗುವಂತೆ ಆಗಲಿ ಎಂದು ಶರಣ್ ಹಾರೈಸಿದ್ದಾರೆ.
Advertisement
Advertisement
ಅಂದಹಾಗೆ, ದರ್ಶನ್ ಜೊತೆ ಶರಣ್ ಉತ್ತಮ ಒಡನಾಟ ಹೊಂದಿದ್ದಾರೆ. ದರ್ಶನ್ ನಿರ್ಮಾಣದ ‘ಜೊತೆ ಜೊತೆಯಲಿ’ ಸಿನಿಮಾದಲ್ಲಿ ಶರಣ್ ನಟಿಸಿದ್ದರು. ‘ಬುಲ್ ಬುಲ್’ ಚಿತ್ರದಲ್ಲಿ ದರ್ಶನ್ ಜೊತೆ ಶರಣ್ ತೆರೆಹಂಚಿಕೊಂಡಿದ್ದರು.