ತಮಿಳಿನ ಸ್ಟಾರ್ ನಟನಿಗಾಗಿ ಸಂಭಾವನೆ ಪಡೆಯದೆ ನಟಿಸಿದ ಶಾರುಖ್ ಖಾನ್

2 Min Read

ಬಿಟೌನ್ ಸ್ಟಾರ್ ಶಾರುಖ್ ಖಾನ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಈ ಮಧ್ಯೆ ತಮಿಳಿನ ಸೂಪರ್ ಸ್ಟಾರ್ ಒಬ್ಬರ ಸಿನಿಮಾದಲ್ಲಿ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸಂಭಾವನೆ ಡಿಮ್ಯಾಂಡ್ ಮಾಡದೇ ನಟಿಸಿ ಬಂದಿದ್ದಾರೆ. ಈ ಕುರಿತು ಫಿಲ್ಮಿಂ ನಗರಿಯಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.

ಶಾರುಖ್ ಖಾನ್ ಬತ್ತಳಿಕೆಯಲ್ಲಿ ಬಿಗ್ ಬಜೆಟ್ ಸಿನಿಮಾಗಳಿರುವಾಗ ಕೊಂಚ ಬಿಡುವು ಮಾಡಿಕೊಂಡು ಸ್ನೇಹಿತನ ಸಿನಿಮಾಗೆ ಸಾಥ್ ನೀಡಿದ್ದಾರೆ. ಕಾಲಿವುಡ್ ಸ್ಟಾರ್ ಮಾಧವನ್ ನಟನೆಯ ನಿರೀಕ್ಷಿತ ರಾಕೆಟ್ರಿ ಚಿತ್ರದಲ್ಲಿ ಹಣ ಪಡೆಯದೇ ನಟಿಸಿ ಬಂದಿದ್ದಾರೆ. ಈ ಕುರಿತು ನಟ ಮಾಧವನ್ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ದಿಗಂತ್ ಡಿಸ್ಚಾರ್ಜ್ ಬೆನ್ನಲ್ಲೇ ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ ನಟಿ ಐಂದ್ರಿತಾ ರೇ

ತಮಿಳಿನ ನಟ ಆರ್.ಮಾಧವನ್ ಅವರ `ರಾಕೆಟ್ರಿ’ ಸಿನಿಮಾ ಮುಂದಿನ ವಾರ ಬಿಡುಗಡೆ ಆಗುತ್ತಿದ್ದು, ಸಿನಿಮಾದಲ್ಲಿ ಶಾರುಖ್ ಖಾನ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ಅವರು ಸಂಭಾವನೆ ಪಡೆದಿಲ್ಲವಂತೆ. ಅಲ್ಲದೆ ಆ ಸಿನಿಮಾದಲ್ಲಿ ತಾವು ನಟಿಸಲೇ ಬೇಕು ಎಂದು ಪಟ್ಟು ಹಿಡಿದು ಕೇಳಿದರಂತೆ ಶಾರುಖ್ ಖಾನ್. ಈ ಬಗ್ಗೆ ಆರ್.ಮಾಧವನ್ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಹಿಂದೆ ಶಾರುಖ್ ಖಾನ್ ಜೊತೆಗೆ `ಜೀರೋ’ ಸಿನಿಮಾ ಚಿತ್ರೀಕರಣ ಮಾಡುವಾಗ ನಾನು ಅದರಲ್ಲಿ ಸಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಆಗ ನಾನು ಶಾರುಖ್ ಖಾನ್‌ಗೆ `ರಾಕೆಟ್ರಿ’ ಸಿನಿಮಾದ ಕತೆ ಹೇಳಿದ್ದೆ. ಅಂದು ಅವರಿಗೆ ಈ ಕಥೆ ಇಷ್ಟವಾಗಿತ್ತು.ನಂತರ ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಹೋದಾಗ ಮ್ಯಾಡಿ, ನಾನು ನಿನ್ನ ಸಿನಿಮಾದಲ್ಲಿ ನಟಿಸುತ್ತೇನೆ. ನನಗೆ ಒಂದು ಸಣ್ಣ ಪಾತ್ರ ಕೊಡು ಸಾಕು ಎಂದಿದ್ದರು. ನನ್ನ ಮೇಲಿನ ಪ್ರೀತಿಗೆ ಹೇಳುತ್ತಿದ್ದಾರೆ ಎಂದುಕೊಂಡು ಥ್ಯಾಂಕ್ಸ್ ಹೇಳಿದೆ, ಆಗ ಶಾರುಖ್ ಖಾನ್ ಇಲ್ಲ ನಾನು ಸೀರಿಯಸ್ ಆಗಿದ್ದೇನೆ ಎಂದರು ಎಂದು ಮಾಧವನ್ ನೆನಪು ಮಾಡಿಕೊಂಡಿದ್ದಾರೆ.

 

View this post on Instagram

 

A post shared by R. Madhavan (@actormaddy)

ಬಳಿಕ ಶಾರುಖ್ ಮ್ಯಾನೇಜರ್ ನನಗೆ ಕರೆ ಮಾಡಿ, `ರಾಕೆಟ್ರಿ’ ಚಿತ್ರಕ್ಕೆ ಯಾವಾಗ ಡೇಟ್ಸ್ ಬೇಕು ಎಂದು ಕೇಳಿದಾಗ ಶಾರುಖ್ ಬೆಂಬಲಕ್ಕೆ ಖುಷಿಯಾದೆ. ರಾಕೆಟ್ರಿ ಚಿತ್ರದಲ್ಲಿ ಶಾರುಖ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಈ ವೇಳೆ ಮಾಧವನ್ ರಿವೀಲ್ ಮಾಡಿದ್ದಾರೆ. ಒಟ್ನಲ್ಲಿ ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲಿದ್ದರು. ಭಾಷೆಗೂ ಮೀರಿದ ಸ್ನೇಹ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *