ಮುಂಬೈ: ಸಮುದ್ರದಲ್ಲಿ ಐಷಾರಾಮಿ ಕ್ರ್ಯೂಸ್‍ನಲ್ಲಿ ನಡೆದ ರೇವ್ ಪಾರ್ಟಿ ವೇಳೆ ಸಿಕ್ಕಿಬಿದ್ದ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್‍ಗೆ ಜಾಮೀನು ನಿರಾಕರಿಸಲಾಗಿದೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಎನ್‍ಸಿಬಿ ವಾದಕ್ಕೆ ಮಣೆ ಹಾಕಿದೆ. ಆರ್ಯನ್‍ನನ್ನು ಹೆಚ್ಚಿನ ವಿಚಾರಣೆಗಾಗಿ ಅಕ್ಟೋಬರ್ 7ರವರೆಗೂ ಎನ್‍ಸಿಬಿ ವಶಕ್ಕೆ ನೀಡಿದೆ.
Advertisement
ಶಾರೂಖ್ ಪುತ್ರನ ಪರವಾಗಿ ಖ್ಯಾತ ಕ್ರಿಮಿನಲ್ ವಕೀಲ ಸತೀಶ್ ಮಾನ್ ಶಿಂಧೆ ಸುದೀರ್ಘವಾದ ಮಂಡಿಸಿದ್ರೂ ಪ್ರಯೋಜನ ಆಗಲಿಲ್ಲ. ಪುತ್ರನಿಗೆ ಬಂದೊದಗಿದ ಸ್ಥಿತಿ ಕಂಡು ಶಾರೂಖ್, ಗೌರಿ ಖಾನ್ ಕಣ್ಣೀರು ಇಟ್ಟಿದ್ದಾರೆ. ವಿಚಾರಣೆ ವೇಳೆ ಕಾನೂನು ಪ್ರಕಾರವೇ, ಶಾರೂಖ್ ಜೊತೆ ಫೋನ್‍ನಲ್ಲಿ ಮಾತನಾಡಲು ಆರ್ಯನ್‍ಗೆ ಎನ್‍ಸಿಬಿ ಎರಡು ನಿಮಿಷ ಅವಕಾಶ ನೀಡಿತ್ತು. ಈ ವೇಳೆ ಇಬ್ಬರು ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬಂಧನದ ಬಳಿಕ ಪುತ್ರನ ಜೊತೆ 2 ನಿಮಿಷ ಮಾತಾಡಿದ ನಟ ಶಾರೂಖ್!
Advertisement
Advertisement
ಶಾರೂಖ್ ಪುತ್ರನ ಜೊತೆಗೆ ಇನ್ನಿಬ್ಬರನ್ನು ಕೂಡ ಎನ್‍ಸಿಬಿ ಕಸ್ಟಡಿಗೆ ಪಡೆದುಕೊಂಡಿದೆ. ಇದಕ್ಕೂ ಮುನ್ನ, ಆರ್ಯನ್ ಸೇರಿ ಇತರೆ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯ್ತು. ಈ ಮಧ್ಯೆ ವೀ ಸ್ಟ್ಯಾಂಡ್ ವಿತ್ ಶಾರೂಖ್ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ. ಇದನ್ನೂ ಓದಿ: ಡ್ರಗ್ಸ್, ಸಿಗರೇಟ್, ಸೆಕ್ಸ್‌ಗೆ ಮಗನಿಗೆ ಓಕೆ ಅಂದಿದ್ದೇನೆ: ಶಾರೂಖ್ ವೀಡಿಯೋ ವೈರಲ್
Advertisement
ಮುಂಬೈನ ಕಿಲಾ ಕೋರ್ಟ್‍ನಲ್ಲಿ ನಡೆದ ಎನ್‍ಸಿಬಿ ಮತ್ತು ಆರ್ಯನ್ ಪರ ವಕೀಲರ ವಾದ ಅಂತ್ಯಕ್ಕೆ ಕೋರ್ಟ್ ಆರ್ಯನ್‍ಗೆ ಜಾಮೀನು ನಿರಾಕರಿಸಿ, ಹೆಚ್ಚಿನ ವಿಚಾರಣೆಗಾಗಿ ಅಕ್ಟೋಬರ್ 7ವರೆಗೂ ಎನ್‍ಸಿಬಿ ವಶಕ್ಕೆ ನೀಡಿದೆ. ಇದನ್ನೂ ಓದಿ: ಶಾರೂಖ್ ಪುತ್ರನ ಲೆನ್ಸ್ ಬಾಕ್ಸ್, ಇನ್ನೊಬ್ಬಳು ಯುವತಿಯ ಬ್ಯಾಗಲ್ಲಿದ್ದ ಸ್ಯಾನಿಟರಿ ಪ್ಯಾಡಲ್ಲಿತ್ತು ಮಾದಕ ವಸ್ತು!
ಎನ್‍ಸಿಬಿ ವಾದ ಏನು..?
ಹೈಪ್ರೊಫೈಲ್ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ ಇದೆ. ಅದಲ್ಲದೆ 4 ವರ್ಷದಿಂದ ಡ್ರಗ್ಸ್ ಸೇವನೆ ಮಾಡ್ತಿರುವ ಬಗ್ಗೆ ಆರ್ಯನ್ ತಪ್ಪೊಪ್ಪಿಕೊಂಡಿದ್ದಾರೆ. ಕೊಕೇನ್ ಸೇರಿದಂತೆ ಹಲವು ಮಾದಕ ವಸ್ತುಗಳ ಸೇವನೆ ಮಾಡಿದ್ದಾರೆ. ಆರ್ಯನ್‍ಗೆ ಡ್ರಗ್ ಪೆಡ್ಲರ್ ಗಳ ಜೊತೆಗೆ ನಂಟಿರುವ ಮೊಬೈಲ್ ಸಾಕ್ಷ್ಯ ಸಿಕ್ಕಿದೆ. ಮೊಬೈಲ್ ವಾಟ್ಸಪ್‍ನಲ್ಲಿ ಕೋಡ್ ವರ್ಡ್ ಬಳಸಿ ಡ್ರಗ್ ಖರೀದಿಸಿದ್ದಾರೆ. ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳ ಜೊತೆಗೂ ನಂಟಿರಬಹುದು. ವಾಣಿಜ್ಯ ಉದ್ದೇಶಕ್ಕಾಗಿಯೂ ಡ್ರಗ್ಸ್ ಖರೀದಿ ಮಾಡಿರುವ ಸಾಕ್ಷ್ಯ ಸಿಕ್ಕಿದೆ. ಎನ್‍ಡಿಪಿಎಸ್ ಕಾಯ್ದೆಯಡಿ ತಕ್ಷಣಕ್ಕೆ ಜಾಮೀನು ಕೊಡಲು ಬರಲ್ಲ (ರಿಯಾ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ತೀರ್ಪು ಉಲ್ಲೇಖ) ಖ್ಯಾತನಾಮರ ಡ್ರಗ್ಸ್ ಸೇವನೆಯಿಂದ ವಿದ್ಯಾರ್ಥಿಗಳು ಪ್ರಭಾವಿತರಾಗಬಹುದು. ಆರ್ಯನ್‍ಗೆ ಜಾಮೀನು ನೀಡಬಾರದು, ಸಾಕ್ಷ್ಯ ನಾಶದ ಸಂಭವ ಇದೆ ಹಾಗಾಗಿ ಅಕ್ಟೋಬರ್ 11ರವರೆಗೂ ಆರೋಪಿಗಳನ್ನು ಎನ್‍ಸಿಬಿ ವಶಕ್ಕೆ ನೀಡಬೇಕು ಎಂದು ಪ್ರಬಲ ವಾದ ಮಂಡಿಸಿತು.
ಆರ್ಯನ್ ಪರ ವಕೀಲರ ವಾದ ಏನು?
ನನ್ನ ಕಕ್ಷಿದಾರನ ಹಕ್ಕಿನ ವಿಚಾರವಾಗಿ ಜಾಮೀನು ಬಯಸುತ್ತಿಲ್ಲ. ಪಾರ್ಟಿಗೆ ಆರ್ಯನ್ ಖಾನ್ ವಿಶೇಷ ಆಹ್ವಾನಿತರಾಗಿದ್ದರು ಹಾಗಾಗಿ ಅಲ್ಲಿಗೆ ತೆರಳಿದ್ದರು. ಆರ್ಯನ್ ಡ್ರಗ್ ಸೇವಿಸಿರುವ ಬಗ್ಗೆ ಸಾಕ್ಷ್ಯ ಇಲ್ಲ. ಆರ್ಯನ್ ಬಳಿಯಿಂದ ಯಾವುದೇ ಡ್ರಗ್ಸ್ ವಶಕ್ಕೆ ಪಡೆದಿಲ್ಲ. ಆತನ ಬ್ಯಾಗ್ ಪರಿಶೀಲನೆ ವೇಳೆ ಏನೂ ಸಿಕ್ಕಿಲ್ಲ. ಆರ್ಯನ್ ಖಾನ್ ವಿರುದ್ಧ ಪ್ರಬಲ ಸಾಕ್ಷ್ಯಗಳಿಲ್ಲ. ಸ್ನೇಹಿತನ ಬಳಿ ಚರಸ್ ಪತ್ತೆಯಾಗಿದ್ರೆ, ನಮ್ಮ ಕಕ್ಷಿದಾರನ ಬಂಧನ ಏಕೆ..? ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳ ಜೊತೆ ನಂಟು ಆರೋಪ ಸುಳ್ಳು. ರಿಯಾ ಚಕ್ರವರ್ತಿ ಕೇಸ್‍ಗೂ ಇದಕ್ಕೂ ತಾಳೆ ಆಗಲ್ಲ. ಇದಲ್ಲದೆ 300 ಗ್ರಾಂ ಡ್ರಗ್ಸ್ ಸಿಕ್ಕಿದ ಪ್ರಕರಣದಲ್ಲಿಯೂ ಜಾಮೀನು ನೀಡಲಾಗಿದೆ. ಹೀಗಾಗಿ ಪ್ರಕರಣದಲ್ಲಿ ಆರ್ಯನ್‍ಗೆ ಜಾಮೀನು ನೀಡಬೇಕೆಂದು ವಾದ ಮಂಡಿಸಿದರು.
ಈ ನಡುವೆ 1997ರಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್, ಸಂದರ್ಶನವೊಂದರ ವೇಳೆ ಹಾಸ್ಯಮಯವಾಗಿ ನನ್ನ ಮಗ ಮದ್ಯ, ಮದಿರೆ, ಮಾನಿನಿ ಸೇರಿ ಎಲ್ಲಾ ರೀತಿಯ ಶೋಕಿ ಮಾಡಬಹುದು ಎಂದಿದ್ರು. ಇದು ಮಗನ ಬದುಕಲ್ಲಿ ನಿಜ ಆಗಿದ್ದು, ಇದೀಗ ಕಂಬಿ ಎಣಿಸುವಂತೆ ಆಗಿರುವುದು ವಿಪರ್ಯಾಸ. ಇದನ್ನೂ ಓದಿ: ಡ್ರಗ್ಸ್ ಕೇಸ್- ಪ್ರಯಾಣಿಕರ ಸೋಗಿನಲ್ಲಿ ಟಿಕೆಟ್ ಬುಕ್, ಎನ್‍ಸಿಬಿ ರೋಚಕ ಕಾರ್ಯಾಚರಣೆ