ಮುಂಬೈ: ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಈಗಾಗಲೇ ಹಲವು ರೀತಿಯ ಬ್ಯುಸ್ನೆಸ್ ಮಾಡುತ್ತಿದ್ದಾರೆ. ಅದಕ್ಕೆ ಸೇರ್ಪಡೆ ಎನ್ನುವಂತೆ ಮತ್ತೊಂದು ಕಾಯಕವನ್ನು ಶೂರು ಮಾಡಿದ್ದಾರೆ. ಜಗತ್ತಿನಾದ್ಯಂತ ಹೊಸ ಸಂಚಲನ ಮೂಡಿಸಿರುವ ಮತ್ತು ಮನೆಯಲ್ಲಿಯೇ ಕೂತು ಸಿನಿಮಾ ವೀಕ್ಷಿಸಲು ನೆರವಾಗಿರುವ ಓಟಿಟಿ ಓನರ್ ಆಗಿ ಶಾರೂಖ್ ಆ ಜಗತ್ತಿಗೆ ಕಾಲಿಟ್ಟಿದ್ದಾರೆ. ಈಗ ತಮ್ಮದೇ ಎಸ್‍ಆರ್‌ಕೆ+ ಎಂಬ ಒಟಿಟಿ ಪ್ಲಾಟ್‍ಫಾರ್ಮ್ ರೆಡಿ ಮಾಡಿಕೊಂಡಿದ್ದು, ಅದನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ‘ಎಸ್‍ಆರ್‌ಕೆ+ ಶೀಘ್ರದಲ್ಲೇ ಬರಲಿದೆ’ ಎಂಬ ಫಾಂಟ್‍ನ ಪಕ್ಕದಲ್ಲಿ ಥಂಬ್ಸ್ ಅಪ್ ನೀಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿರುವ ಅವರು, (ಕುಚ್ ಕುಚ್ ಹೋನೆ ವಾಲಾ ಹೈ, ಒಟಿಟಿ ಕಿ ದುನಿಯಾ ಮೇ) ಈ ಮೂಲಕ ಓಟಿಟಿ ಜಗತ್ತಿನಲ್ಲಿ ಏನೆಲ್ಲಾ ಆಗೋದಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಹಿಳೆಯರು ಎಲ್ಲಿ, ಏನು ಬೇಕಾದರೂ ಧರಿಸಬಹುದು, ಆದರೆ…: ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ
View this post on Instagram
ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಶಾರೂಖ್ ಅವರ ಟ್ವೀಟ್‍ಗೆ ರಿ-ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಕನಸು ನನಸಾಗುತ್ತಿದೆ ಅವರ ಹೊಸ ಒಟಿಟಿ ಅಪ್ಲಿಕೇಶನ್, ಎಸ್‍ಆರ್‌ಕೆ+ ನಲ್ಲಿ ನಾನು ಕೂಡ ಸಹಭಾಗಿತ್ವ ಪಡೆದುಕೊಂಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್
Dream come true! Collaborating with @iamsrk on his new OTT app, SRK+ ???? https://t.co/1OR7dZczkB
— Anurag Kashyap (@anuragkashyap72) March 15, 2022
ಮಾದಕ ವಸ್ತು ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರ ಆರ್ಯನ್ ಖಾನ್ ವಿವಾದದಲ್ಲಿ ಸಿಲುಕಿದ ಮೇಲೆ ಶಾರೂಖ್ ಖಾನ್ ಮೌನಕ್ಕೆ ಶರಣಾಗಿದ್ದರು. ಕೆಲವು ದಿನಗಳ ಹಿಂದೆಯಷ್ಟೇ, ಎನ್‍ಸಿಬಿಯ ವಿಶೇಷ ತನಿಖಾ ತಂಡ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಆರ್ಯನ್ ಖಾನ್ ಡ್ರಗ್ಸ್ ಹೊಂದಿರಲಿಲ್ಲ, ಆದ್ದರಿಂದ ಅವರ ಫೋನ್ ತೆಗೆದುಕೊಂಡು ಅವರ ಚಾಟ್‍ಗಳನ್ನು ಪರಿಶೀಲಿಸುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೆ ನಿರಾಳತೆಗೆ ಜಾರಿದ್ದರು.
ಮತ್ತೆ ಶಾರೂಖ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ‘ಪಠಾಣ್’ ಚಿತ್ರದ ಫಸ್ಟ್ ಲುಕ್‍ನೊಂದಿಗೆ ಅಭಿಮಾನಿಗಳ ಹುಮ್ಮಸ್ಸು ಹೆಚ್ಚಿಸಿದ್ದರು.