ಜವಾನ್ ಸಿನಿಮಾದ ನಿರ್ದೇಶಕರ ವಿರುದ್ಧ ನಯನತಾರಾ (Nayantara) ಮುನಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಜವಾನ್ ಸಿನಿಮಾದಲ್ಲಿ ತಮ್ಮದು ಮಹತ್ವದ ಪಾತ್ರವಿದ್ದರೂ, ಅದಕ್ಕೆ ಸಿಗಬೇಕಾದ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ ಎಂದು ನಯನತಾರಾ ಅವರು ಚಿತ್ರದ ನಿರ್ದೇಶಕ ಅಟ್ಲಿ ಮೇಲೆ ಕೋಪಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆನಂತರ ಅಂಥದ್ದೇನೂ ಮುನಿಸಿಲ್ಲವೆಂದು ಹೇಳಲಾಯಿತು.
ಆದರೆ, ನಯನತಾರಾ ಅವರಿಗೆ ತೆರೆಯ ಮೇಲೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲವೆಂದು ಬಹಿರಂಗವಾಗಿಯೇ ಚಿತ್ರದ ನಾಯಕ ಮತ್ತು ನಿರ್ಮಾಪಕ ಶಾರುಖ್ ಖಾನ್ ಒಪ್ಪಿಕೊಂಡಿದ್ದಾರೆ. ನಯನತಾರಾ ನಿರ್ವಹಿಸಿರುವ ಪಾತ್ರವನ್ನು ಬಹುವಾಗಿ ಮೆಚ್ಚಿಕೊಂಡಿರುವ ಶಾರುಖ್, ಸೋಷಿಯಲ್ ಮೀಡಿಯಾದಲ್ಲಿ ‘ನರ್ಮದಾ ಪಾತ್ರಕ್ಕೆ ಸಿಗಬೇಕಾದ ಮನ್ನಣೆ ತೆರೆಯಲ್ಲಿ ಸಿಕ್ಕಿಲ್ಲ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಜವಾನ್’ ಚಿತ್ರದ ನಿರ್ದೇಶಕನ ಜೊತೆ ನಯನತಾರಾ ಮುನಿಸು
ಜವಾನ್ ಸಿನಿಮಾದ ಕಲೆಕ್ಷನ್ (Collection) ಕುರಿತಾಗಿ ಸಾಕಷ್ಟು ಕುತೂಹಲವಿತ್ತು. ಒಂದೊಂದು ದಿನ ಒಂದೊಂದು ಕಲೆಕ್ಷನ್ ವರದಿ ಹೊರ ಬೀಳುತ್ತಿದ್ದವು. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ಇದು ಗೊಂದಲಕ್ಕೆ ಕಾರಣವಾಗಿತ್ತು. ಇದೀಗ ಅಧಿಕೃತವಾಗಿಯೇ ನಿರ್ಮಾಣ ಸಂಸ್ಥೆಯೇ ಕಲೆಕ್ಷನ್ ವಿವರವನ್ನು ಹಂಚಿಕೊಂಡಿದ್ದು, 15 ದಿನಕ್ಕೆ ವಿಶ್ವದಾದ್ಯಂತ ಬರೋಬ್ಬರಿ 937.61 ಕೋಟಿ ರೂಪಾಯಿ ಬಾಚಿಕೊಂಡಿದೆ. ಶೀಘ್ರದಲ್ಲೇ ಸಾವಿರ ಕೋಟಿ ರೂಪಾಯಿ ಕೂಡ ತಲುಪಲಿದೆ.
ಒಂದು ಕಡೆ ‘ಜವಾನ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಜವಾನ್ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳು ಕೂಡ ಕೇಳಿ ಬರುತ್ತಿವೆ. ಸಮಾರಂಭವೊಂದರಲ್ಲಿ ಸಿನಿಮಾದ ಕುರಿತು ಮಾತನಾಡಿರುವ ನಿರ್ದೇಶಕ ಅಟ್ಲಿ ತಮ್ಮ ಚಿತ್ರಕ್ಕೆ ಆಸ್ಕರ್ (Oscar) ಪ್ರಶಸ್ತಿ ಬರಬೇಕು. ಆ ಪ್ರಶಸ್ತಿ ಪಡೆಯಲು ಚಿತ್ರಕ್ಕೆ ಎಲ್ಲ ಅರ್ಹತೆಯೂ ಇದೆ ಎಂದು ಹೇಳಿಕೊಂಡಿದ್ದಾರೆ.
ಈ ನಡುವೆ ನಿರ್ದೇಶಕ ಅಟ್ಲಿ (Atlee) ತಮ್ಮ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ. ‘ಜವಾನ್’ ಯಶಸ್ಸಿನ ಬೆನ್ನಲ್ಲೇ ಅವರು ‘ಜವಾನ್ 2’ (Jawan 2) ಸಿನಿಮಾ ಮಾಡಲು ಮುಂದಾಗಿದ್ದು, ಇದರ ಜೊತೆಗೆ ಶಾರುಖ್ ಖಾನ್ (Shahrukh Khan) ಅಭಿಮಾನಿಗಳಿಗೆ ಮತ್ತೊಂದು ಸರ್ ಪ್ರೈಸ್ ನೀಡಿದ್ದಾರೆ.
Web Stories