ಶಾರುಖ್ ಖಾನ್ (Shah Rukh Khan) ನಟನೆಯ ಜವಾನ್ (Jawan) ಸಿನಿಮಾದಲ್ಲಿ ನಟಿಸಿದ್ದ ದಕ್ಷಿಣದ ಹೆಸರಾಂತ ತಾರೆ ನಯನತಾರಾ (Nayantara) ಆ ಚಿತ್ರದ ನಿರ್ದೇಶಕ ಅಟ್ಲಿ (Atlee) ಜೊತೆ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ನಿರ್ದೇಶಕನ ಜೊತೆಗಿನ ಮುನಿಸಿನಿಂದಾಗಿಯೇ ಇನ್ಮುಂದೆ ಅವರು ಬಾಲಿವುಡ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎನ್ನುವ ಗುಸುಗುಸು ಶುರುವಾಗಿತ್ತು. ಇದೆಲ್ಲದಕ್ಕೂ ಉತ್ತರ ಎನ್ನುವಂತೆ ಅಟ್ಲಿ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ ನಯನತಾರಾ.
ಜವಾನ್ ಸಿನಿಮಾದಲ್ಲಿ ತಮ್ಮ ಪಾತ್ರವನ್ನು ಕಟ್ ಮಾಡಲಾಗಿದೆ ಮತ್ತು ಶೂಟ್ ಮಾಡಿದಷ್ಟು ದೃಶ್ಯಗಳನ್ನು ತೋರಿಸಿಲ್ಲವೆಂದು ನಯನತಾರ ಅಸಮಾಧಾನ ಹೊಂದಿದ್ದರು ಎಂದು ಹೇಳಲಾಗಿತ್ತು. ದೀಪಿಕಾ ಪಡುಕೋಣೆ ಅವರದ್ದು ಅತಿಥಿ ಪಾತ್ರವಾಗಿದ್ದರೂ, ಅವರನ್ನು ನಾಯಕಿ ಎನ್ನುವಂತೆ ತೋರಿಸಲಾಗಿತ್ತು ಎನ್ನುವ ಕೋಪ ಕೂಡ ನಯನತಾರಾ ಹೊಂದಿದ್ದರು. ಹಾಗಾಗಿ ನಿರ್ದೇಶಕ ಅಟ್ಲಿ ಬಗ್ಗೆ ಮುನಿಸಿಕೊಂಡಿದ್ದರು ಎಂದು ಹೇಳಲಾಗಿತ್ತು.
ಆದರೆ, ಅಟ್ಲಿ ಅವರ ಹುಟ್ಟು ಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿರುವ ನಯನತಾರಾ, ಜವಾನ್ ಸಿನಿಮಾದ ಸೆಟ್ ನಲ್ಲಿ ಸೆರೆ ಹಿಡಿಯಲಾಗಿದ್ದ ಅಟ್ಲಿ ಜೊತೆಗಿನ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ. ಈ ಮೂಲಕ ತಮ್ಮಿಬ್ಬರ ಮಧ್ಯ ಯಾವುದೇ ಅಸಮಾಧಾನವಿಲ್ಲ ಎನ್ನುವುದನ್ನು ತೋರಿಸಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ಚಿತ್ರಕ್ಕೆ ಸಮಂತಾ ನಾಯಕಿನಾ? ಸ್ಯಾಮ್ ಕಡೆಯಿಂದ ಸಿಕ್ತು ಉತ್ತರ
ಜವಾನ್ ಸಿನಿಮಾ ರಿಲೀಸ್ ಗೂ ಮುನ್ನ ನಿರಂತರವಾಗಿ ನಯನತಾರಾ ಅವರನ್ನು ಹಾಡಿ ಹೊಗಳಿದ್ದರು ಶಾರುಖ್ ಖಾನ್. ಜವಾನ್ ಸಿನಿಮಾದ ಪೋಸ್ಟರ್, ಪ್ರಿವ್ಯೂ ರಿಲೀಸ್ ಆಗುತ್ತಿದ್ದಂತೆಯೇ ನಯನತಾರಾ ಅವರನ್ನು ಬಿರುಗಾಳಿಗೆ ಹೋಲಿಸಿದ್ದರು. ಸಿನಿಮಾದಲ್ಲಿ ಇನ್ನೂ ಹಲವರು ನಾಯಕಿಯರಿದ್ದರೂ ನಯನತಾರಾ ಅವರದ್ದು ಪವರ್ ಫುಲ್ ಪಾತ್ರವಾಗಿದ್ದರಿಂದ ಅವರನ್ನು ಮೆಚ್ಚಿ ಮಾತನಾಡಿದ್ದರು.
ಪ್ರಿವ್ಯೂನಲ್ಲಿ ನಯನತಾರಾ (Nayantara) ಅವರನ್ನು ಸಾಹಸ ದೃಶ್ಯಗಳಲ್ಲಿ ಪ್ರೇಕ್ಷಕರು ನೋಡಿ ಅವಕ್ಕಾಗಿದ್ದರು. ಆಕೆಯನ್ನು ಇನ್ನಷ್ಟು ನೋಡಬಯಸಿದ್ದರು. ನಯನತಾರಾ ಪೋಸ್ಟರ್ ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ನಯನತಾರಾ ಅವರ ಪಾತ್ರವನ್ನು ‘ಬಿರುಗಾಳಿಗೂ ಮುಂಚೆ ಬರುವ ಗುಡುಗು’ ಎಂದು ಶಾರುಖ್ ಖಾನ್ ವರ್ಣಿಸಿದ್ದು, ಆಕೆಯ ಪಾತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಾಗಿತ್ತು. ಸಿನಿಮಾ ರಿಲೀಸ್ ನಂತರ ಏಕಾಏಕಿ ಚಿತ್ರತಂಡದ ಮೇಲೆ ನಯನಾ ಮುನಿಸಿಕೊಂಡಿದ್ದರು ಎಂದು ಹೇಳಲಾಗಿತ್ತು. ಇದೀಗ ಎಲ್ಲದಕ್ಕೂ ಅವರೇ ಉತ್ತರ ನೀಡಿದ್ದಾರೆ.
Web Stories