ಹೈದರಾಬಾದ್: ತೆಲುಗಿನ ಜನಪ್ರಿಯ ಹಿರಿಯ ನಟ ರಾಜಾಬಾಬು(64) ವಿಧಿವಶರಾಗಿದ್ದಾರೆ.
ಹಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ರಾಜಾಬಾಬು ಅವರ ಆರೋಗ್ಯ ಸ್ಥಿತಿ ಕೆಲ ದಿನಗಳಿಂದ ಗಂಭೀರವಾಗಿತ್ತು. ಸೀತಮ್ಮ ವಾಕಿತ್ಲೋ ಸಿರಿಮಲ್ಲೆ ಚೆಟ್ಟು, ಸಿಂಧೂರಂ, ಆದವರು ಮಾತು ಅರ್ಥಾಳು ವೆರುಲೆ ಮತ್ತು ಭಾರತ್ ಅನೆ ನೇನು ಸೇರಿದಂತೆ ಇಲ್ಲಿಯವರೆಗೂ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತ ವ್ಯಕ್ತಿ ಅನ್ನೋ ಕಾರಣಕ್ಕೆ ಸಲೀಂ ಮೇಲೆ ಕ್ರಮ ಕೈಗೊಂಡ್ರು: ಜಗದೀಶ್ ಶೆಟ್ಟರ್
Senior Telugu actor Raja Babu passes away due to severe health conditions#RajaBabu pic.twitter.com/KuSyAO8MJQ
— Milagro Movies (@MilagroMovies) October 25, 2021
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರಾಪುರದಲ್ಲಿ ಜನಿಸಿದ ರಾಜಬಾಬು ಅವರು ಕ್ರಿಶಾ ಅವರ ‘ಊರಿಕಿ ಮೊನಗಾಡು’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ
ರಾಜಾಬಾಬು ಅವರು ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದು, ಅಮ್ಮ ಎಂಬ ಸೀರಿಸ್ನಲ್ಲಿ ಅಭಿನಯಿಸಿ ನಂದಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದೀಗ ರಾಜಾ ಬಾಬು ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.