ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಹಿರಿನ ನಟ ರಾಜೇಶ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.
ಉಸಿರಾಟದ ತೊಂದರೆಯಿಂದ ಬಳಲ್ತಿದ್ದ ರಾಜೇಶ್ ಅವರ ಆರೋಗ್ಯ ಸ್ಥಿತಿ ಎರಡು ದಿನಗಳ ಹಿಂದೆ ಗಂಭೀರವಾಗಿತ್ತು. ಸದ್ಯ ವೈದ್ಯರು ಇಂದಿನ ಆರೊಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂದು ರಾಜೇಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳ ಶಿಕ್ಷಣ, ರಕ್ಷಣೆ ಸರ್ಕಾರದ ಕರ್ತವ್ಯ: ಡಿಕೆ ಸುರೇಶ್
82 ವರ್ಷ ವಯಸ್ಸಿನ ರಾಜೇಶ್, ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕಸ್ತೂರಿ ಬಾ ನಗರದ ನ್ಯೂ ಜನಪ್ರಿಯ ಆಸ್ಪತ್ರೆಯಲ್ಲಿ ದಾಖಲಾಗಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತಿಚೆಗೆ ಪತ್ನಿಯನ್ನ ಕಳೆದುಕೊಂಡಿರುವ ರಾಜೇಶ್ ಅವರಿಗೆ 5 ಜನ ಮಕ್ಕಳಿದ್ದಾರೆ.