– ಕ್ಷಣದಿಂದ ಕ್ಷಣಕ್ಕೂ ಕ್ಷೀಣಿಸುತ್ತಿದೆ ಹಿರಿಯ ನಟನ ಆರೋಗ್ಯ
ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿರಿಯ ನಟ ಶಿವರಾಂ ಅವರ ಆರೋಗ್ಯ ಮತ್ತಷ್ಟು ಗಂಭೀರವಾಗಿರುವ ಕುರಿತಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ವೈದ್ಯ ಡಾ. ಮೋಹನ್, ಅವರ ಆರೋಗ್ಯ ಚೇತರಿಕೆಗಾಗಿ ನಾವು ಕಾಯುತ್ತಿದ್ದೆವು. ಆ ಆದರೆ ಅವರ ಬ್ರೈನ್‍ಗೆ ಅತಿ ಹೆಚ್ಚಿನ ಹಾನಿಯಾಗಿದೆ. ನಾನು ಶಿವರಾಂ ಅವರ ಸಂಬಂಧಿ ಮತ್ತು ಡಾಕ್ಟರ್ ಆಗಿ ಇವತ್ತು ನಿಮ್ಮ ಮುಂದೆ ಬಂದು ನಿಲ್ಲಲು ನನಗೆ ತುಂಬಾ ಕಷ್ಟವಾಗುತ್ತಿದೆ. ಮಿರಾಕಲ್ ಆಗುತ್ತದೆ ಎನ್ನುವ ಭಾವನೆ ನಮಗೆ ಕಮ್ಮಿಯಾಗುತ್ತಿದೆ. ನಾವು ಏನೇ ಮಾಡಿದರೂ ಅವರಿಗೆ ಹಿಂಸೆ ಆಗುತ್ತದೆ. ಕಿಡ್ನಿ, ಲಿವರ್ ವರ್ಕ್ ಆಗುತ್ತಿದೆ. ಆದರೆ ಹೃದಯ ಸ್ಪಂದಿಸುತ್ತಿಲ್ಲ. ಅವರು ತುಂಬಾ ಸಮಯ ನಮ್ಮ ಜೊತೆಗೆ ಇರಲ್ಲ ಎಂದು ಹೇಳುತ್ತಾ ವೈದ್ಯರು ಭಾವುಕರಾಗಿದ್ದಾರೆ. ಇದನ್ನೂ ಓದಿ: ಹಿರಿಯ ನಟ ಶಿವರಾಮ್ ಆರೋಗ್ಯ ಗಂಭೀರ
ನಮಗೆ ಜೀವನಾಡಿಯಾಗಿದ್ದರು. ಒಬ್ಬ ರೋಗಿಗಿಂತ ನನಗೆ ಅಪ್ಪನ ಸ್ಥಾನದಲ್ಲಿ ಇದ್ದರು. ಅವರನ್ನು ನಾನು ಈ ಪರಿಸ್ಥಿತಿಯನ್ನು ನಾನು ಚಿಕಿತ್ಸೆ ಕೊಡಲು ತುಂಬಾ ಕಷ್ಟವಾಗುತ್ತಿದೆ. ಚಿಕಿತ್ಸೆ ನೀಡುತ್ತಿದ್ದೇವೆ, ಆದರೆ ಅವರು ಚಿಕಿತ್ಸೆಗೆ ಸ್ಪಂಧಿಸುತ್ತಾರೆ ಎನ್ನುವ ನಂಬಿಕೆ ಇಲ್ಲ. ಅವರು ರಿಕವರಿ ಆಗುವ ಚಾನ್ಸ್ ತುಂಬಾ ಕಡಿಮೆ ಇದೆ. ಎಷು ದಿನ, ಎಷ್ಟು ಗಂಟೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಟ ಶಿವರಾಂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇಲ್ಲ: ವೈದ್ಯರು
ಅವರ ಕುಟುಂಬದವರು ನಮ್ಮ ಜೊತೆಗೆ ಇದ್ದಾರೆ. ಅವರಿಗೆ ತುಂಬಾ ಹಿಂಸೆ ಮಾಡುವುದು ಬೇಡ. ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಪ್ರಯತ್ನವನ್ನು ಕೊನೆ ಗಳಿಗೆವರೆಗೂ ಮಾಡಿ ಎಂದು ಹೇಳುತ್ತಿದ್ದಾರೆ. ಎಂಐಆರ್ ಮಾಡಲು ಆಗುತ್ತಿಲ್ಲ ಅವರನ್ನು ಬೇರೆ ಬೆಡ್‍ಗೆ ಶಿಫ್ಟ್ ಮಾಡಿದರೆ ಅವರ ಬಿಪಿಗೆ ಕಷ್ಟವಾಗುತ್ತದೆ ಎನ್ನುವ ಭಯವಿದೆ, ಕಂಡಿಶನ್ ಕ್ರಿಟಿಕಲ್ ಇದೆ ಎಂದು ಹೇಳಿದ್ದಾರೆ.