ಶಿವಮೊಗ್ಗ: ವಿಪಕ್ಷ ನಾಯಕನ (Opposition Leader) ಆಯ್ಕೆ ಈಗಾಗಲೇ ವಿಳಂಬ ಆಗಿದೆ. ಎಲ್ಲರೂ ವಿಪಕ್ಷ ನಾಯಕನ ಆಯ್ಕೆ ಯಾವಾಗ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಆದಷ್ಟು ಬೇಗ ವಿಪಕ್ಷ ನಾಯಕನ ಆಯ್ಕೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ತಿಳಿಸಿದರು.
ಶಿವಮೊಗ್ಗದಲ್ಲಿ (Shivamogga) ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಬಿಜೆಪಿ (BJP) ವತಿಯಿಂದ ಇಂದಿನಿಂದ ಬರ ಅಧ್ಯಯನ ಪ್ರವಾಸ ಆರಂಭವಾಗಿದೆ ಎಂದು ಹೇಳಿದರು.
ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯ ಶತಮಾನೋತ್ಸವ ಸಮಾರಂಭ ಇರುವ ಹಿನ್ನೆಲೆಯಲ್ಲಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಹೀಗಾಗಿ ಬರ ಅಧ್ಯಯನ ಪ್ರವಾಸಕ್ಕೆ ಹೋಗಲಾಗಿಲ್ಲ. ಭಾನುವಾರದಂದು ಬರ ಅಧ್ಯಯನ ಪ್ರವಾಸದ ತಂಡವನ್ನು ಸೇರಿಕೊಳ್ಳುತ್ತೇನೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಪರಮೇಶ್ವರ್ ಸಿಎಂ ಆಗ್ತಾರೆ: ಕೆಎನ್ ರಾಜಣ್ಣ ಸಂಚಲನದ ಹೇಳಿಕೆ
ಲೋಕಸಭಾ ಚುನಾವಣೆಗೆ ಪಕ್ಷ ತಯಾರಿ ನಡೆಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನ ಪಡೆಯಲಿದೆ. ಇನ್ನು ಈಶ್ವರಪ್ಪ ಸೇರಿದಂತೆ ಇತರೆ ಬಿಜೆಪಿ ನಾಯಕರು ದೆಹಲಿಗೆ ಭೇಟಿ ನೀಡಿದ್ದರ ಹಿಂದೆ ಅಂತಹ ವಿಶೇಷ ಏನಿಲ್ಲ. ಸಭೆಗೆ ಕರೆದಿದ್ದರು ಹೋಗಿದ್ದಾರೆ ಅಷ್ಟೇ ಎಂದರು. ಇದನ್ನೂ ಓದಿ: ಹೊಸದು ಬೇಡ, ಬೊಮ್ಮಾಯಿ ಮಂಜೂರುಗೊಳಿಸಿದ ಯೋಜನೆಯ ಅನುದಾನ ನೀಡಲಿ: ವೇದವ್ಯಾಸ ಕಾಮತ್
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]